Ticker

6/recent/ticker-posts

Ad Code

Responsive Advertisement

Mysuru ವ್ಯಾಸತೀರ್ಥ ವಿದ್ಯಾಪೀಠದಲ್ಲಿ 2 ದಿನ ಮಧ್ವನವಮಿ ಉತ್ಸವ,

ವಿವಿಧ ವಿದ್ವಾಂಸರಿಂದ ಉಪನ್ಯಾಸ

 ವಿದ್ಯಾರ್ಥಿಗಳಿಂದ ವಾಕ್ಯಾರ್ಥ ಗೋಷ್ಠಿ, 


ಮೈಸೂರು: ನಗರದ ಕೃಷ್ಣಮೂರ್ತಿಪುರಂನಲ್ಲಿರುವ ಶ್ರೀ ವ್ಯಾಸತೀರ್ಥ ವಿದ್ಯಾಪೀಠದಲ್ಲಿ ಸೋಸಲೆ ವ್ಯಾಸರಾಜರ ಮಠ ಜ. 29 ಮತ್ತು 30ರಂದು ‘ಮಧ್ವನವಮಿ ಉತ್ಸವ’ ದ ಪ್ರಯುಕ್ತ ವಿವಿಧ ಕಾರ್ಯಕ್ರಮ ಮತ್ತು ವಿಚಾರಗೋಷ್ಠಿಗಳನ್ನು ಹಮ್ಮಿಕೊಂಡಿದೆ. 29ರ ಬೆಳಗ್ಗೆ 9.30ಕ್ಕೆ ಶ್ರೀ ಸೋಸಲೆ ವ್ಯಾಸರಾಜ ಮಠಾಧೀಶರಾದ ಶ್ರೀ ವಿದ್ಯಾಶ್ರೀಶ ತೀರ್ಥ ಸ್ವಾಮೀಜಿ ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ. ನಂತರ ‘ವಾಕ್ಯಾರ್ಥ ಗೋಷ್ಠಿ’ ಆಯೋಜನೆಗೊಂಡಿದೆ.
ವಿದ್ವಾಂಸರಾದ ಶೇಷಗಿರಿ ಆಚಾರ್ಯ, ಸಿ.ಎಚ್. ಶ್ರೀನಿವಾಸಮೂರ್ತಿ, ಬಂಡಿ ಶ್ಯಾಮಾಚಾರ್ಯ, ಎಲ್.ಎನ್. ಸುಧೀಂದ್ರ ಆಚಾರ್ಯ, ಸತ್ತೇಗಿರಿ ವಾಸುದೇವಾಚಾರ್ಯ, ಪ್ರದ್ಯುಮ್ನಾಚಾರ್ಯ ಮತ್ತು ನಾಗಸಂಪಿಗೆ ಕೃಷ್ಣಾಚಾರ್ಯರು ವಾಕ್ಯಾರ್ಥ ಮಾಡಲಿದ್ದಾರೆ. ನಂತರ ವಿದ್ಯಾರ್ಥಿಗಳಾದ ಸರ್ವಜ್ಞ, ಶ್ರೀಹರಿ, ಶ್ರೀಶ ಆಚಾರ್ಯ ಮತ್ತು ಸೌಮಿತ್ರಿ ಆಚಾರ್ಯ ಅವರು ತತ್ವೋದೇಶ-ನ್ಯಾಯಾಮೃತದ ಬಗ್ಗೆ ಮಾತನಾಡಲಿದ್ದಾರೆ.



ಮಧ್ಯಾಹ್ನ 2ಕ್ಕೆ ‘ ಅನುವಾದ ವಾಕ್ಯಾರ್ಥ ಸಭಾ’ ಆಯೋಜನೆಗೊಂಡಿದೆ. ಶ್ರೀಮನ್ ನ್ಯಾಯಸುಧಾ ಮತ್ತು ತಾತ್ಪರ್ಯ ಚಂದ್ರಿಕಾ ಬಗ್ಗೆ ಪ್ರಣವ ಮತ್ತು ಸುಘೋಷ ವಿಷಯ ಮಂಡಿಸಲಿದ್ದಾರೆ. ಸಂಜೆ 6ಕ್ಕೆ ‘ದಾರ್ಶನಿಕ ಪ್ರಪಂಚದಲ್ಲಿ ಶ್ರೀ ಮಧ್ವಾಚಾರ್ಯರು’ ವಿಷಯ ಕುರಿತು ವಿದ್ಯಾಪೀಠದ ಪ್ರಾಚಾರ್ಯ ಡಾ. ಶ್ರೀನಿಧಿ ಆಚಾರ್ಯ ಪ್ಯಾಟಿ, ವಿದ್ವಾನ್ ಕೃಷ್ಣಾಚಾರ್ಯ ಮತ್ತು ಶ್ರೀನಿವಾಸಮೂರ್ತಿ ಆಚಾರ್ಯರು ಪ್ರವಚನ ನೀಡಲಿದ್ದಾರೆ.
30ರ ಬೆಳಗ್ಗೆ 7ಕ್ಕೆ ವಿದ್ಯಾಪೀಠದ ವಿದ್ಯಾರ್ಥಿವರ್ಗದಿಂದ ಸಾಮೂಹಿಕ ಮಧ್ವವಿಜಯದ ಪಾರಾಯಣ, ಪವಮಾನ ಹೋಮ, ವಾಯುಸ್ತುತಿ ಪುನಶ್ಚರಣೆ, 10ಕ್ಕೆ ‘ಮಧ್ವಾಚಾರ್ಯರ ಸೂಕ್ತಿ’ ಬಗ್ಗೆ ಪಂಡಿತರಾದ ಬಿದರಹಳ್ಳಿ ಕೃಷ್ಣಾಚಾರ್ಯ ಮತ್ತು ಕಳಸಾಪುರ ಶ್ರೀಕಾಂತಾ ಚಾರ್ಯ ಪ್ರವಚನ ನೀಡಲಿದ್ದಾರೆ. ನಂತರ ಶ್ರೀ ವಿದ್ಯಾಶ್ರೀಶ ತೀರ್ಥರಿಂದ ಸಂಸ್ಥಾನಪೂಜೆ ನೆರವೇರಲಿದೆ.
ಮಧ್ಯಾಹ್ನ 3ಕ್ಕೆ ವಾಕ್ಯಾರ್ಥಸಭೆ ಹಮ್ಮಿಕೊಳ್ಳಲಾಗಿದೆ. ಸಂಜೆ 6ಕ್ಕೆ ವಿವಿಧ ವಿದ್ವಾಂಸರಿಂದ ಉಪನ್ಯಾಸ, ಶ್ರೀಗಳ ಅನುಗ್ರಹ ಸಂದೇಶ, ವಿದ್ಯಾಪೀಠದ ವಿದ್ಯಾರ್ಥಿಗಳಿಂದ ಅಷ್ಟಾವಧಾನ ಕಾರ್ಯಕ್ರಮವಿದೆ. ವಿವರಗಳಿಗೆ 98459 13198 ಸಂಪರ್ಕಿಸಬಹುದು ಎಂದು ವಿದ್ಯಾಪೀಠದ ಗೌರವ ಕಾರ್ಯದರ್ಶಿ ಡಾ. ಡಿ.ಪಿ. ಮಧುಸೂದನಾಚಾರ್ಯ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Post a Comment

0 Comments

Ad Code

Responsive Advertisement