ಬೆಂಗಳೂರು : ರಾಜರಾಜೇಶ್ವರಿ ನಗರ ವಿಧಾನ ಸಭಾ ಕ್ಷೇತ್ರದ ಮತ್ತೀಕೆರೆ ಬಡಾವಣೆಯಲ್ಲಿರುವ ಗಣೇಶ ಗುಡಿ ಆಟದ ಮೈದಾನದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವತಿಯಿಂದ ಸಂಕ್ರಾಂತಿ ಉತ್ಸವವನ್ನು ಆಯೋಜಿಸಲಾಗಿತ್ತು. ಯಶವಂತಪುರ ನಗರಕ್ಕೆ ಸಂಬಂಧಿಸಿದ ವಿವಿಧ ಶಾಖೆಗಳ ನೂರಕ್ಕೂ ಹೆಚ್ಚು ಸ್ವಯಂಸೇವಕರು ಪಾಲ್ಗೊಂಡಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತ್ ಸಹ ಪ್ರಚಾರ ಪ್ರಮುಖ್ ಶ್ರೀ ರಾಜೇಶ್ ಪದ್ಮಾರ್ ರವರು ಹಾಗೂ ಯಶವಂತಪುರ ನಗರ ಸಂಘಚಾಲಕರಾದ ಶ್ರೀ ರಾಜಾ ರಂಗನಾಯಕಲು ಉಪಸ್ಥಿತಿಯಲ್ಲಿ ಗಣವೇಶದಲ್ಲಿದ್ದ ಕಾರ್ಯಕರ್ತರು ಕಾರ್ಯಕ್ರಮಕ್ಕೂ ಮುನ್ನ, ಮೈದಾನದಿಂದ ಹೊರಟು ಯಶವಂತಪುರ ಮುಖ್ಯ ರಸ್ತೆಯ ಮಾರ್ಗವಾಗಿ ಸಂಘ ಕಾರ್ಯಕರ್ತರ ಘೋಷ್ ವಾದ್ಯ ಗೋಷ್ಠಿಯೊಂದಿಗೆ ಸಾಗಿಬಂದ ಪಥಸಂಚಲನದಲ್ಲಿ ಸಾರ್ವಜನಿಕರು ಸಹ ಉತ್ಸಾಹದಿಂದ ಪಾಲ್ಗೊಂಡಿದ್ದರು.
ನಂತರ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುಮಾರು ಆರು ವರ್ಷ ವಯಸ್ಸಿನ ಮಕ್ಕಳಾದಿಯಾಗಿ ಅರವತ್ತೆಪ್ಪತ್ತರ ವಯೋಮಾನದ ಹಿರಿಯ ವಯಸ್ಸಿನ ಕಾರ್ಯಕರ್ತರು ಉತ್ಸಾಹದಿಂದ ಪಾಲ್ಗೊಂಡಿದ್ದು ವಿಶೇಷವಗಿತ್ತು. ಈ ವೇಳೆ ಅನೇಕ ಪ್ರಕಾರ ದೈಹಿಕ ವ್ಯಾಯಾಮ, ಮಂತ್ರಸಹಿತ ಸೂರ್ಯ ನಮಸ್ಕಾರ ಒಳಗೊಂಡ ಇನ್ನೂ ಹಲವು ಸಂಘ ಚಟುವಟಿಕೆಗಳನ್ನು ಪ್ರದರ್ಶಿಸಲಾಯಿತು. ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸಿದ್ದರು.



0 Comments