ಬೆಂಗಳೂರು : ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ರಾಜ್ಯದ ಅಭಿವೃದ್ಧಿಗಿಂತ ಲವ್ ಜಿಹಾದಿ ಹೆಸರಿನಲ್ಲಿ ಕೋಮುಗಲಭೆ ಸೃಷ್ಟಿಸುವ ಕುಮ್ಮಕ್ಕಿನ ಭಾಷಣ ಮಾಡಿ ಜನ ವಿರೋಧಿ ಹೇಳಿಕೆ ನೀಡಿರುವ ನವೀನ್ ಕುಮಾರ್ ಕಟೀಲ್ ವಿರುದ್ಧ ಪ್ರತಿಭಟನೆ ನಡೆಸಿ ಪ್ರತಿಕೃತಿ ದಹಿಸಲಾಯಿತು,
ರಸ್ತೆಯ ಹಳ್ಳಗಳನ್ನ ಹಾಗೂ ಮೋರಿಗಳ ಮುಚ್ಚು ಅಭಿವೃದ್ಧಿಪಡಿಸುವುದಕ್ಕಿಂತ ನಮಗೆ ಲವ್ ಜಿಹಾದಿ ಮುಖ್ಯ ಎಂಬುವ ಬಿಜೆಪಿ ಅಧ್ಯಕ್ಷನ ಹೇಳಿಕೆ ರಾಜ್ಯ ಜನ ವಿರೋಧಿ ಹೇಳಿಕೆಯಾಗಿದೆ,
ಕೇವಲ ಕೋಮು ಗಲಭೆಗಳನ್ನು ಸೃಷ್ಟಿಸಿ ಅದರ ಲಾಭವನ್ನು ಪಡೆದು ಧಾರ್ಮಿಕ ಭಾವನೆಗೆ ಧಕ್ಕೆ ತರುವ ಕುತಂತ್ರವನ್ನೇ ಬಿಜೆಪಿ ನಡೆಸುತ್ತಿರುವುದು ಈಗ ಮತ್ತೆ ಸಾಬೀತಾಗಿದೆ,
ಇಂತಹ ನೀಚ ರಾಜಕಾರಣಿಯನ್ನು ಬಿಜೆಪಿ ಕೂಡಲೇ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಬೇಕೆಂದು ಆಗ್ರಹಿಸಲಾಯಿತು,
ದಿನನಿತ್ಯ ಹಗಲು ದರೋಡೆಯಲ್ಲಿ ಮುಳುಗಿರುವ 40% ಬಿಜೆಪಿಗೆ ಜನರ ಸಂಕಷ್ಟ ಹರಿಯುವ ಸಾಮಾನ್ಯ ಸೌಜನ್ಯವೂ ಇಲ್ಲ ಎಂಬುದು ಅವರ ಹೇಳಿಕೆ ಹಾಗೂ ಅವರ ಆಡಳಿತದಿಂದ ಬಹಿರಂಗವಾಗಿದೆ,
ನಳಿನ್ ಕುಮಾರ್ ಹೇಳಿಕೆ ಹಾಗೂ ಆತನ ವರ್ತನೆಯಿಂದ ರಾಜ್ಯದಲ್ಲಿ ಕೋಮು ಗಲಭೆ ಸೃಷ್ಟಿಸುವ ಸಾಧ್ಯತೆ ಇದ್ದು ಕೂಡಲೇ ನಳಿನ್ ಕುಮಾರ್ ಕಟೀಲ್ ನನ್ನ ಬಂಧಿಸಬೇಕೆಂದು ಇದೆ ಸಂದರ್ಭದಲ್ಲಿ ಆಗ್ರಹಿಸಿ ಪ್ರತಿಭಟನೆ ಹಾಗೂ ಪ್ರತಿಕೃತಿ ದಹಿಸಲಾಯಿತು, ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಎಸ್. ಮನೋಹರ್, ಬೆಂಗಳೂರು ನಗರ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷರಾದ ಜಿ.ಜನಾರ್ದನ್,ಎ. ಆನಂದ್ ಪದಾಧಿಕಾರಿಗಳಾದ ಬಿ. ಮಂಜುನಾಥ್, ಪ್ರಕಾಶ್, ಪುಟ್ಟರಾಜು, ಕೆ ಟಿ ನವೀನ್,ರಾಮಕೃಷ್ಣ,ರವಿಶೇಖರ್, ಉಮೇಶ್,ಚೇತನ್,ವೆಂಕಟೇಶ್, ಪ್ರಶಾಂತ್ ಹಾಗೂ ಪದಾಧಿಕಾರಿಗಳು ಭಾಗವಹಿಸಿದ್ದರು.
.jpeg)

0 Comments