Ticker

6/recent/ticker-posts

Ad Code

Responsive Advertisement

ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ವಿವಿಧ ಕಟ್ಟಡ ಕಾಮಗಾರಿಗಳ ಲೋಕಾರ್ಪಣೆ

 ಬೆಂಗಳೂರಿನಲ್ಲಿ ಹಿಂದೆಂದೂ ಆಗದ ಅಭಿವೃದ್ಧಿಯಾಗುತ್ತಿದೆ: ಮುಖ್ಯಮಂತ್ರಿ  ಬಸವರಾಜ ಬೊಮ್ಮಾಯಿ


ಬೆಂಗಳೂರು, ಜನವರಿ 29: ಬೆಂಗಳೂರಿನಲ್ಲಿ ಹಿಂದೆಂದೂ ಆಗದ ಅಭಿವೃದ್ಧಿಯಾಗುತ್ತಿದೆ ಎಂದು  ಮುಖ್ಯಮಂತ್ರಿ  ಬಸವರಾಜ ಬೊಮ್ಮಾಯಿ ತಿಳಿಸಿದರು.


ಅವರು ಇಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವತಿಯಿಂದ ಡಾ.ರಾಜ್‍ಕುಮಾರ್ ವಾರ್ಡ್‍ನ ಡಾ. ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಆಯೋಜಿಸಿರುವ ಗೋವಿಂದರಾಜ ನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಾದ ಪೊಲೀಸ್ ಠಾಣೆಯ ನೂತನ ಕಟ್ಟಡ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನೂತನ ಕಟ್ಟಡ, ಮೇಲ್ಸೇತುವೆ ಹಾಗೂ ಭಾರತರತ್ನ ಡಾ.ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣವನ್ನು ಉದ್ಘಾಟಿಸಿ ಮಾತನಾಡಿದರು.


*ಅಪಪ್ರಚಾರ ಸಲ್ಲದು*

ನಗರದ ಬಗ್ಗೆ ಅಪ್ರಚಾರ ಬಹಳ ಆಗುತ್ತಿದೆ.  ಆದರೆ  ಎಂದೂ ಕಂಡು ಕೇಳರಿಯದ ಅಭಿವೃದ್ದಿ ಕಾರ್ಯಗಳು ಬೆಂಗಳೂರಿನಲ್ಲಿ ನಡೆಯುತ್ತಿದೆ. ಅದರೆ ಕೆಲವು ವರ್ಗದ ಜನರ ಅಪಪ್ರಚಾರ ಮಾಡುತ್ತಾರೆ. ಚೆನ್ನೈ,ದೆಹಲಿ, ಮುಂಬೈ ನಗರಗಳು  ಮುಳುಗಿದರೂ ಸುದ್ದಿಯಾಗುವುದಿಲ್ಲ ಎಂದರು. 

  

*ರಾಜಕಾಲುವೆಗಳ ಅಭಿವೃದ್ಧಿ*


ರಾಜಕಾಲುವೆ ಮೇಲೆ ಮನೆ ನಿರ್ಮಾಣ ಮಾಡಿರುವ ಕಾರಣದಿಂದ ಮತ್ತು ಯೋಜನಾ ಬದ್ಧವಾಗಿ ನಿರ್ಮಾಣ ಮಾಡದೇ ಇರುವುದರಿಂದ ಅಲ್ಲಲಿ ನೀರು ನಿಲ್ಲುತ್ತಿದೆ. 2000 ಕೋಟಿ ರೂ.ಗಳನ್ನು  ರಾಜಕಾಲುವೆ ಅಭಿವೃದ್ದಿಗೆ ನೀಡಲಾಗಿದೆ.

6500 ಸಾವಿರ ಕೋಟಿ ರೂ.ಗಳನ್ನು    ಬೆಂಗಳೂರು ನಗರ ಅಭಿವೃದ್ದಿಗೆ ನೀಡಲಾಗಿದೆ ಎಂದರು. 

ಗೋವಿಂದರಾಜನಗರ   ಕ್ಷೇತ್ರ ಅಭಿವೃದ್ದಿಯಾಗಲು ಈ ಕ್ಷೇತ್ರದ ಜನಪ್ರತಿನಿಧಿಗಳ ಮುತುವರ್ಜಿಯಿಂದ  ಮಾತ್ರ  ಸಾಧ್ಯವಾಗಿದೆ. ವಿ.ಸೋಮಣ್ಣ ಎಂದರೆ ವಿಕ್ಟರಿ ಸೋಮಣ್ಣ ಎಂದು ತಿಳಿಯಬೇಕು ಎಂದರು. 


*ಚರ್ಚೆಗೆ ಆಹ್ವಾನ*

ಅಭಿವೃದ್ದಿ ಕುರಿತು ವಿರೋಧಿಗಳಿಗೆ ಪಂಥಾಹ್ವಾನ ನೀಡುತ್ತೇನೆ ಚರ್ಚೆ ಮಾಡಲಿ ಎಂದು ಹೇಳಿದರು.


*ಯೋಜನಾಬದ್ದ ನಗರ ನಿರ್ಮಾಣಕ್ಕೆ ಕಟ್ಟಿಬದ್ದ*  


ನಗರದ ರಸ್ತೆ ನಿರ್ಮಾಣವಾದರೆ ದುಡಿಯುವ ವರ್ಗಗಳು  ಆರ್ಥಿಕ ಸುಧಾರಣೆ ಕಾಣುತ್ತವೆ. 

ದುಡಿಮೆಗೆ ಹೆಚ್ಚಿನ ಮಹತ್ವವನ್ನು ಸರ್ಕಾರ ನೀಡಿದೆ ಎಂದರು. ಗೋವಿಂದರಾಜನಗರ ಅಭಿವೃದ್ದಿ ಕಾರ್ಯವನ್ನು ಕಳೆದ ನಾಲ್ಕು ವರ್ಷಗಳಿದಿಂದ ಉತ್ತಮವಾಗಿ ಆಗಿದೆ.  ದೇಶದ ಎಲ್ಲ ವರ್ಗದ ಜನರನ್ನು ಬೆಂಗಳೂರು ನಗರ ಅಪ್ಪಿಕೊಂಡಿದೆ. ಗೋವಿಂದರಾಜನಗರ ಅಭಿವೃದ್ದಿ ಜೊತೆಯಲ್ಲಿ ಬೆಂಗಳೂರು ನಗರ ಅಭಿವೃದ್ದಿಯಾಗಲಿದೆ ಎಂದು ಹೇಳಿದರು.


ಸಂವಿಧಾನ ಶಿಲ್ಪಿ ಭಾರತರತ್ನ ಬಿ.ಆರ್.ಅಂಬೇಡ್ಕರ್ ರವರ ಸ್ಮರಣಾರ್ಥ ಕ್ರೀಡಾಂಗಣ ನವೀಕರಿಸಲಾಗಿದೆ. 16ನೇ ತಾರೀಖು ದಾಸರಹಳ್ಳಿಯಲ್ಲಿ 315 ಹಾಸಿಗೆ ಸಾಮರ್ಥ್ಯದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಲೋಕಾರ್ಪಣೆಯಾಗಲಿದೆ. ನಿಮ್ಮ ಆಶೀರ್ವಾದ, ಸಹಕಾರದಿಂದ ಸಾಧನೆ ಮಾಡಲು ಸಾಧ್ಯವಾಗಿದೆ ಎಂದು ಹೇಳಿದರು.


*ವಿ.ಸೋಮಣ್ಣ ಮಾದರಿ ನಾಯಕರು*

ಇಂದಿನ ಯುವ ರಾಜಕಾರಣಿಗಳು ವಿ.ಸೋಮಣ್ಣರವರನ್ನು ನೋಡಿ ಕಲಿಯಬೇಕು. ಮುಂದಿನ ಚುನಾವಣೆಯಲ್ಲಿ ಪೂರ್ಣ ಬಹುಮತದ ಸರ್ಕಾರ, ಬರಲು ವಿ.ಸೋಮಣ್ಣರವರು ಅತ್ಯಧಿಕ ಮತಗಳಿಂದ ಗೆಲ್ಲಿಸಬೇಕು ಎಂದು ಹೇಳಿದರು.


 ಈ ಸಂದರ್ಭದಲ್ಲಿ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿಯವರು,  ವಸತಿ ಸಚಿವರಾದ ವಿ.ಸೋಮಣ್ಣರವರು,ಐ.ಟಿ.ಬಿ.ಟಿ.ಸಚಿವರಾದ ಡಾ||ಸಿ.ಎನ್.ಅಶ್ವಥ್ ನಾರಾಯಣ್, ಅಬಕಾರಿ ಸಚಿವರಾದ ಕೆ.ಗೋಪಾಲಯ್ಯ, ಲೋಕಸಭಾ ಸದಸ್ಯರಾದ ತೇಜಸ್ವಿ ಸೂರ್ಯ, ರಾಜ್ಯಸಭಾ ಸದಸ್ಯ ಜಗ್ಗೇಶ್,  ಶಾಸಕರುಗಳಾದ ಎಸ್.ಸುರೇಶ್ ಕುಮಾರ್, ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥರವರು  

ವಿಧಾನಪರಿಷತ್ ಸದಸ್ಯರುಗಳಾದ ಅ.ದೇವೇಗೌಡ,ಪುಟ್ಟಣ್ಣ,ರಾಜ್ಯ ಬಿ.ಜೆ.ಪಿ.ಯುವ ಮುಖಂಡರಾದ ಡಾ||ಅರುಣ್ ಸೋಮಣ್ಣ, 

ಗೋವಿಂದರಾಜನಗರ ಮಂಡಲ ಬಿ.ಜೆ.ಪಿ.ಅಧ್ಯಕ್ಷರಾದ ವಿಶ್ವನಾಥಗೌಡ ಮತ್ತು ಮಾಜಿ ಪಾಲಿಕೆ ಸದಸ್ಯರುಗಳು ಪಾಲ್ಗೊಂಡಿದ್ದರು.

Post a Comment

0 Comments

Ad Code

Responsive Advertisement