Ticker

6/recent/ticker-posts

Ad Code

Responsive Advertisement

ಸಮಗ್ರ ಭಾಷಾ ಕಾಯಿದೆಯನ್ನು ಸದನದಲ್ಲಿ ಮಂಡಿಸದೆ ಸರ್ಕಾರ ಕನ್ನಡಕ್ಕೆ ಅಪಮಾನ ಮಾಡಿದೆ –ಮುಖ್ಯಮಂತ್ರಿ ಚಂದ್ರು

 ಕರ್ನಾಟಕ ಸರ್ಕಾರವು ಬೆಳಗಾವಿಯ ಅಧಿವೇಶನದಲ್ಲಿ ‘ಕನ್ನಡ ಬಾಷಾ ಸಮಗ್ರ ಅಭಿವೃದ್ಧಿ ವಿಧೇಯಕ-೨೦೨೨ ಮಂಡಿಸುವುದಾಗಿ ಹೇಳಿತ್ತುರಾಜಕೀಯ ಲಾಭವನ್ನು ಗುರಿಯಾಗಿಸಿ ಕೊಂಡು ಮೀಸಲಾತಿಇತರ ಯೋಜನೆಗಳನ್ನು ಪ್ರಸ್ತಾಪಿಸಿದ ಮುಖ್ಯಮಂತ್ರಿಗಳು ಕಳೆದ ಅಧಿವೇಶನದಲ್ಲಿ ಮಂಡಿಸಿದ ವಿಧೇಯಕವನ್ನು ಮಂಡಿಸದೆ ಕನ್ನಡದ ಹಿತವನ್ನು ಕಡೆಗಣಿಸಿದ್ದಾರೆ ಎಂದು ಮುಖ್ಯಮಂತ್ರಿ ಚಂದ್ರು ಅವರು ಕನ್ನಡ ಗೆಳೆಯರ ಬಳಗ ಮತ್ತು ಕನ್ನಡ ವಿಕಾಸ ರಂಗ ವ್ಯವಸ್ಥೆ ಮಾಡಿದ್ದ ಕನ್ನಡ ಬಾವುಟ ಹಾರಿಸಿದವರು ನೆನಪಿನ ಮಾಲೆಯ ಅಧ್ಯಕ್ಷ ನುಡಿಯಲ್ಲಿ ತಿಳಿಸಿದರು(ಬೆಂಗಳೂರಿನ ಬಸವನಗುಡಿ ನ್ಯಾಷನಲ್ ಹೈಸ್ಕೂಲ್ ವೃತ್ತದಲ್ಲಿರುವ ಬಿ.ಎಂ.ಶ್ರೀ ಪ್ರತಿಮೆಯ ಮುಂಭಾಗ). ಈಗಲೂ ಕಾಲ ಮಿಂಚಿಲ್ಲಸರ್ಕಾರಕ್ಕೆ ನಿಜವಾಗಿ ಕನ್ನಡದ ಬದ್ಧತೆಯಿದ್ದರೆ ಸುಗ್ರಿವಾಜ್ಞೆಯ ಮೂಲಕ ಕನ್ನಡ ಕಾಯದೆಯನ್ನು ಜಾರಿಗೆ ತರಬೇಕೆಂದು ಒತ್ತಾಯಿಸಿದರು.  ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಹಿತದೃಷ್ಟಿಯಿಂದ ಸ್ಥಳೀಯರಿಗೆ ಆಧ್ಯತೆಯಿರುವ ‘ರಾಷ್ಟ್ರೀಯ ಉದ್ಯೋಗ ನೀತಿ ರೂಪಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.


ಕನ್ನಡಕ್ಕೆ ದುಡಿಯುತ್ತಿರುವವರಿಗೆ ಆರೋಗ್ಯ ವಿಮೆ ಮಾಡಿಸಲು ಒತ್ತಾಯ

      ರಾಮಮೂರ್ತಿಯವರ ಕನ್ನಡ ಹೋರಾಟದ ಬಗ್ಗೆ ಮಾತನಾಡಿದ ರಾ.ನಂಚಂದ್ರಶೇಖರ ಕನ್ನಡಕ್ಕೆ ಪತ್ತೇದಾರಿ ಕಾದಂಬರಿಯ ಪ್ರಾಕರಾವನ್ನು ಪರಿಚಯಿಸಿದ ರಾಮಮೂರ್ತಿಯವರು ಪ್ರಸಿದ್ಧ ಸಾಹಿತಿಯಾಗಿದ್ದರುಇಂದಿನ ಸ್ವರೂಪದ  

ಕನ್ನಡ ಚಳವಳಿಯನ್ನುಆರಂಭಿಸಿದವರುಅವರು ಕನ್ನಡಕ್ಕಾಗಿ ತಮ್ಮ ಪ್ರಾಣವನ್ನೇ ಕೊಟ್ಟರುಬೆಂಗಳೂರಿನಲ್ಲಿ ಡಿಎಂಕೆ ಬಾವುಟದ ಹಾವಳಿಯನ್ನು ಎದುರಿಸಲು ಹಳದಿ ಕೆಂಪು ಕನ್ನಡ ಬಾವುಟವನ್ನು ರೂಪಿಸಿಕನ್ನಡ ಹೋರಾಟಗಾರರಿಗೆ ಸ್ಫೂರ್ತಿಯನ್ನು ನೀಡಿದರು.  ಇಂದು ಅವರ ಪತ್ನಿ ಅನಾಥರಾಗಿದ್ದಾರೆ೯೭ರ ಇಳಿವಯಸ್ಸಿನಲ್ಲಿ ಅವರು ಸರ್ಕಾರದ ನೆರವು ಕೋರಿದರೆ ಅದನ್ನು ಕನ್ನಡ ಸಂಸ್ಕೃತಿ ಇಲಾಖೆ ತಿರಸ್ಕರಿಸಿತ್ತುಪತ್ರಿಕೆಗಳಲ್ಲಿ ಸುದ್ಧಿಯಾದ ಮೇಲೆ ಎಚ್ಚೆತ್ತ ಸಚಿವ ಸುನಿಲ್ ಕುಮಾರ್ ಅವರು 

ಕಮಲಮ್ಮನವರಿಗೆ ನೆರವು ನೀಡುವಂತೆ ಆದೇಶ ಮಾಡಿದ್ದಾರೆಅದಕ್ಕೆ ನಾವು ಅವರನ್ನು ಅಭಿನಂಧಿಸುತ್ತೇವೆಇಂದಿಗೂ ಹಲವು ಕನ್ನಡ ಹೋರಾಟಗಾರರು ತೀರ ಸಂಕಷ್ಟದಲ್ಲಿದ್ದು ಅವರಿಗೆ ತಮಿಳುನಾಡು ಸರ್ಕಾರವು ನಾಡು-ನುಡಿಗೆ ದುಡಿದವರಿಗೆ ಆರೋಗ್ಯ ವಿಮೆ ಮಾಡಿಸುತ್ತಿರುವಂತೆ ಕರ್ನಾಟಕ ಸರ್ಕಾರವೂ ನೆರವಾಗಬೇಕೆಂದು ಕೋರಿದರು.

 ಕನ್ನಡ ಪರಿಚಾರಿಕೆಗೆ ಹೊಸ ಆಯಾಮ ನೀಡಿದ ರತ್ನನ ಪದಗಳ ಜಿ.ಪಿರಾಜರತ್ನಂ ಅವರು ಹೇಗೆ ಕನ್ನಡವನ್ನು ಕಟ್ಟಿ ಬೆಳಸಬಹುದು ಎಂಬುದನ್ನು ತೋರಿಸಿ ಕೊಟ್ಟರು ಎಂದು ಪ್ರೊಚಂದ್ರಶೇಖರ ನಾದೂರ ಅವರು ತಿಳಿಸಿ

.ಅರ್.ಕೃಷ್ಣಶಾಸ್ತ್ರಿಯವರು ಆರಂಭಿಸಿದ ‘ಸೆಂಟ್ರಲ್ ಕಾಲೇಜು ಕನ್ನಡ ಸಂಘದ ಮೂಲಕ ೫೦ಕ್ಕೂ ಹೆಚ್ಚು ಯುವ  ಬರಹಗಾರರ ಕೃತಿಗಳನ್ನು ಪ್ರಕಟಿಸಿ ಪ್ರೋತ್ಸಾಹಿಸಿದರುಮನೆ ಮನೆಗೆ ಹೋಗಿ ಕನ್ನಡ ಪುಸ್ತಕಗಳನ್ನು ಮಾರಿಕನ್ನಡ ಸಂಘಗಳಿಗೆ ಹೋಗಿ ಕನ್ನಡ ಜಾಗೃತಿ ಮೂಡಿಸಲು ಶ್ರಮಿಸದರು ಎಂದರು.

 ಪ್ರಾಸ್ತಾವಿಕ ಮಾತುಗಳನ್ನಾಡಿದ .ಚನ್ನೇಗೌಡ ಅವರು ಕನ್ನಡ ಬಾವುಟ ಹಾರಿಸದವರು ಮಾಲಿಕೆಯ ಆಶಯಗಳನ್ನು ತಿಳಿಸಿಕನ್ನಡಕ್ಕೆ ಹೋರಾಡಿದ ಹಿರಿಯ ಚೇತನಗಳ ಕಾರ್ಯ ನಮಗೆ ಸ್ಫೂರ್ತಿಯಾಗುತ್ತವೆ  ಎಂದರು.  

ಬಾ..ಉಪೇಂದ್ರ ವಂದಿಸಿದರುಹಲವು ಸಂಘಟನೆಗಳ ಮುಖಂಡರು ಹಾಜರಿದ್ದರು.  



Post a Comment

0 Comments

Ad Code

Responsive Advertisement