Ticker

6/recent/ticker-posts

Ad Code

Responsive Advertisement

ಮುನಿಶಾಮಪ್ಪ ಹೆಸರು ದುರ್ಬಳಕೆ : ಪೊಲಿಸ್ ಠಾಣೆಯಲ್ಲಿ ಸಂದೀಪ್ ರೆಡ್ಡಿ ವಿರುದ್ಧ ದೂರು

ವರದಿ : ಚಿಕ್ಕತೇಕಹಳ್ಳಿ ಡಿ ಶಿವಕುಮಾರ್

ವಾರ್ತಾಜಾಲ,ಶಿಡ್ಲಘಟ್ಟ : ತಾಲ್ಲೂಕಿನಲ್ಲಿ ನೂತನ ಅಭ್ಯರ್ಥಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇತ್ತೀಚೆಗೆ ಸಂದೀಪ್ ರೆಡ್ಡಿ ಎಂಬುವವರು ನಮ್ಮ ತಂದೆಯಾದ ದಿವಂಗತ ಮಾಜಿ ಶಾಸಕ ಎಸ್ ಮುನಿಶಾಮಪ್ಪ ಅವರ ಹೆಸರನ್ನು ದುರ್ಬಳಕೆ ಮಾಡುತ್ತಿದ್ದಾರೆ ಎಂದು ಮಾಜಿ ಜಿಲ್ಲಾ ಪಂಚಾಯಿತಿ ಶಿವಲೀಲಾ ಅವರು ಆರೋಪ ವ್ಯಕ್ತಪಡಿಸಿದರು.
ನಗರದ ತಮ್ಮ ನಿವಾಸದಲ್ಲಿ ಪತ್ರಕರ್ತರೊಂದಿಗೆ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು.



ದಿವಂಗತ ಮಾಜಿ ಶಾಸಕ ಎಸ್ ಮುನಿಶಾಮಪ್ಪ ರವರು ನಮ್ಮ ತಾತ ಆಗಬೇಕು, ನಾನು ಅವರ ಗರಡಿಯಲ್ಲಿ ಬೆಳೆದು ಅವರ ಹಾದಿಯಲ್ಲೇ ರಾಜಕೀಯ ಮಾಡುತ್ತೇನೆ ಎಂದು ಹೇಳುತ್ತಿದ್ದಾರೆ. ಅವರು ಇಷ್ಟು ವರ್ಷಗಳ ಕಾಲ ಎಲ್ಲಿದ್ದರು. ನಮ್ಮ ತಂದೆಯ ಹೆಸರಲ್ಲಿ ರಾಜಕೀಯ ಮಾಡುವುದಕ್ಕೆ ಅವರ ಮಕ್ಕಳು ನಾವಿದ್ದೇವೆ .ನಾವು ಈಗಲೂ ಅವರ ಹೆಸರಲ್ಲೇ ರಾಜಕೀಯ ಮಾಡುತ್ತಿರುವುದು, ನಮ್ಮ ತಂದೆ ಇಲ್ಲದೇ ಇದ್ದರೂ, ಈ ಕ್ಷೇತ್ರದ ಜನತೆಗೆ ಅವರ ಆಡಳಿತವನ್ನು ಮಾಡಿ ತೋರಿಸಿದ್ದೇವೆ. ನಾವು ಸಂದೀಪ್ ರೆಡ್ಡಿ ವಿರುದ್ಧ ಈಗಾಗಲೇ ನಗರ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದೇವೆ ಎಂದರು.

ಮಾಜಿ ಶಾಸಕ ಎಸ್ ಮುನಿಶಾಮಪ್ಪ ಅವರ ಮಗ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಡಾ.ಜಯರಾಮರೆಡ್ಡಿ ಮಾತನಾಡಿ ಕ್ಷೇತ್ರದ ಅಭಿವೃದ್ಧಿ ಮಾಡುವುದಕ್ಕೆ, ನೀನು ಚುನಾವಣೆ ಮುಗಿದ ನಂತರ ಬಂದು ನಮ್ಮ ತಂದೆ ಹೆಸರು ಹೇಳಿಕೊಂಡೇ ಮಾಡಿ ಸ್ವಾಮಿ ಆಗ ನಾವು ನಿಮಗೆ ಬೆಂಬಲವಾಗಿ ಇರುತ್ತೇವೆ. ಚುನಾವಣೆ ಸಮಯಕ್ಕೆ ದಿಢೀರ್ ಅಂತ ಬಂದು ನಮ್ಮ ತಂದೆ ಹೆಸರನ್ನ ಬಳಸಿಕೊಂಡು ಪ್ರಚಾರ ಯಾಕ್ ಮಾಡ್ತೀಯಾ.? ನಮ್ಮ ತಂದೆ ಹೆಸರನ್ನು ಬಳಸಿಕೊಳ್ಳುವುದಕ್ಕೆ ನಿನಗೆ ಯಾವ ಅಧಿಕಾರ ಇದೆ. ನಮ್ಮ ತಂದೆಯ ಮಕ್ಕಳು ನಾವಿದ್ದೇವೆ, ನಮ್ಮ ಚಿಕ್ಕಪ್ಪ ಮಕ್ಕಳಿದ್ದಾರೆ, ಅವರ ಅಳಿಯಂದಿರು ಇದ್ದಾರೆ ನಿಮ್ಮ ರಾಜಕೀಯ ನಮ್ಮ ತಂದೆಯ ಹೆಸರಲ್ಲಿ ಮಾಡುವುದು ಬೇಡ, ಒಂದು ವೇಳೆ ಇದೇ ರೀತಿ ಮುಂದುವರೆದರೆ ಕಾನೂನು ರೀತಿಯಲ್ಲಿ ಕ್ರಮ ಜರುಗಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಸುಮಾರು ಹತ್ತು ವರ್ಷದಿಂದ ಈ ಕ್ಷೇತ್ರ ಯಾವುದೇ ರೀತಿ ಅಭಿವೃದ್ಧಿಯಾಗಿಲ್ಲ ಅಂತ ಹೇಳುತ್ತಿದ್ದಾರಲ್ಲ. ನೀವು ಇಷ್ಟು ವರ್ಷಗಳ ಕಾಲ ಎಲ್ಲಿದ್ದೀರಿ ಸ್ವಾಮಿ. ನಮ್ಮ ಮಾವನ ಹೆಸರು ಉಳಿಸಲು ನಾವು ಏನೇನು ಮಾಡಿದ್ದೀವಿ ಅಂತ ನಿಮಗೆ ಗೊತ್ತಿದಿಯೇ. ಈ ಕ್ಷೇತ್ರ ನಾನು ಅಧಿಕಾರದಲ್ಲಿದ್ದಾಗ ಕರ್ನಾಟಕದಲ್ಲೇ ಏಳನೇ ಸ್ಥಾನಕ್ಕೇರಿಸಿದ ಕೀರ್ತಿ ಎಸ್ ಮುನಿಶಾಮಪ್ಪ ಅವರ ಅಳಿಯನಾದ ಮಾಜಿ ಶಾಸಕ ಎಂ ರಾಜಣ್ಣ ಅವರಿಗೆ ಇದೆ.ನೀನು ನಮ್ಮ ಮಾವನ ಹೆಸರು ಹೇಳಿಕೊಂಡು ರಾಜಕೀಯ ಮಾಡುವುದು ಅಷ್ಟು ಸರಿಬರಲ್ಲ, ಹೀಗೆ ಅವರ ಹೆಸರು ಹೇಳಿಕೊಂಡು ರಾಜಕೀಯ ಮಾಡಿದರೆ ಮುಂದೆ ಏನಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗುತ್ತದೆ ಎಂದು ಆಕ್ರೋಶವನ್ನು ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ದೊಡ್ಡತೇಕಹಳ್ಳಿ ಗ್ರಾಮ ಪಂಚಾಯಿತಿಯ ಸದಸ್ಯ ಮುರಳಿ,ಚಿಕ್ಕತೇಕಹಳ್ಳಿ ಸಿ ವೆಂಕಟೇಶಪ್ಪ,ಚಿಕ್ಕ ಮುನಿಯಪ್ಪ, ಕನಕಪ್ರಸಾದ್, ಅಶ್ವತ್ಥಪ್ಪ, ದೊಣ್ಣಳ್ಳಿ ರಾಮಣ್ಣ, ಮುರಳಿ, ಆಂಜಿನಪ್ಪ, ರಮೇಶ್, ಅಸದ್ ಖಾನ್, ನಾರಾಯಣಸ್ವಾಮಿ ಮುಂತಾದವರು ಹಾಜರಿದ್ದರು.

Post a Comment

0 Comments

Ad Code

Responsive Advertisement