Ticker

6/recent/ticker-posts

Ad Code

Responsive Advertisement

ತೇಜಸ್ವಿ ವಿಮಾನದ ಬಾಗಿಲು ಎಳೆದಿಲ್ಲ, ಕೈ ತಾಗಿದೆ ಅಷ್ಟ: ಅಣ್ಣಾಮಲೈ

ಚಿಕ್ಕಮಗಳೂರು: ಬಿಜೆಪಿ ಸಂಸದ ತೇಜಸ್ವಿ ಸೂರ್ಯ ತುಂಬಾ ಬುದ್ಧಿವಂತ ಅವರು ವಿಮಾನದ ಬಾಗಿಲು ಎಳೆದಿಲ್ಲ, ಕೈ ತಾಗಿದೆ ಅಷ್ಟೇ ಎಂದು ತಮಿಳುನಾಡು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಅಣ್ಣಾಮಲೈ ಸ್ಪಷ್ಟನೆ ನೀಡಿದ್ದಾರೆ.


ಈ ಬಗ್ಗೆ ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಣ್ಣಾಮಲೈ, ಸಂಸದ ಸೂರ್ಯ ತೇಜಸ್ವಿ ಅವರು ವಿಮಾನದ ತುರ್ತು ನಿರ್ಗಮನದ ದ್ವಾರ ತೆರೆದರು ಎಂಬುದರಲ್ಲಿ ಹುರುಳಿಲ್ಲ. ಕಾಂಗ್ರೆಸ್’ನವರು ವೃಥಾ ಹುಯಿಲು ಹಬ್ಬಿಸುತ್ತಿದ್ದಾರೆ ಎಂದು ಅಣ್ಣಾಮಲೈ ಹೇಳಿದರು.

‘ಎಟಿಆರ್–72 ಸಣ್ಣ ವಿಮಾನದಲ್ಲಿ ತುರ್ತು ನಿರ್ಗಮನ ದ್ವಾರದ ಬದಿಯ ಸೀಟಿನಲ್ಲಿ ಸಂಸದ ತೇಜಸ್ವಿ ಸೂರ್ಯ ಕುಳಿತಿದ್ದರು. ಅವರು ಮಾತನಾಡುವಾಗ ಕೈ ಬಾಗಿಲಿಗೆ ತಗುಲಿದೆ. ತಕ್ಷಣವೇ ಗಗನಸಖಿಗೆ ವಿಷಯ ತಿಳಿಸಲಾಯಿತು. ಪೈಲಟ್ ಬಂದು ಪರಿಶೀಲಿಸಿದರು. ತೇಜಸ್ವಿ ವಿಮಾನದಲ್ಲಿ ಬಾಗಿಲನ್ನು ಎಳೆದಿಲ್ಲ. ಅವರು ಇದೆಲ್ಲವನ್ನು ಇನ್ಸಿಡೆಂಟ್ ರಿಪೋರ್ಟ್ ಫಾರ್ಮ್ ನಲ್ಲಿ (ಘಟನಾ ವಿವರ) ಉಲ್ಲೇಖಿಸಿದ್ದಾರೆ ಎಂದು ಅವರು ಹೇಳಿದರು.

Post a Comment

0 Comments

Ad Code

Responsive Advertisement