Ticker

6/recent/ticker-posts

Ad Code

Responsive Advertisement

ಸರ್ಕಾರಿ ನಿವೃತ್ತ ನೌಕರರಿಗೆ ಅಗತ್ಯ ನೆರವು ಆರೋಗ್ಯ ಶಿಬಿರ ಉದ್ಘಾಟಿಸಿ ಅಶೋಕ್ ಜಯರಾಂ ಭರವಸೆ

ಮಂಡ್ಯ: ಸರ್ಕಾರಿ ಸೇವೆ ಸಲ್ಲಿಸಿ, ಜೀವನಾನುಭವದೊಂದಿಗೆ ಮಾಗಿದ ಸರ್ಕಾರಿ ನಿವೃತ್ತ ನೌಕರರ ಸಂಘಕ್ಕೆ ಅಗತ್ಯ ನೆರವು ನೀಡುವುದಾಗಿ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಅಶೋಕ್ ಜಯರಾಂ ಭರವಸೆ ನೀಡಿದರು.

ನಗರದ ಸರ್ಕಾರಿ ನಿವೃತ್ತ ನೌಕರರ ಸಂಘದ ವತಿಯಿಂದ ಸಂಘದ ಆವರಣದಲ್ಲಿ ಏರ್ಪಡಿಸಿದ್ದ ಉಚಿತ ಆರೋಗ್ಯ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಇಂದು ಅವಿಭಕ್ತ ಕುಟುಂಬಗಳಿಲ್ಲ. ಎಲ್ಲ ವಿಭಜಿತ ಕುಟುಂಬಗಳಾಗಿದ್ದು, ಮಕ್ಕಳು ದೂರದ ನಗರಗಳಲ್ಲಿ ಉದ್ಯೋಗದಲ್ಲಿರುತ್ತಾರೆ. ಹಿರಿಯರನ್ನು ಜತನದಿಂದ ಕಾಪಾಡಿಕೊಳ್ಳುವ ಕಳಕಳಿ ಕಂಡುಬರುತ್ತಿಲ್ಲ. ಹಾಗಾಗಿ ನಿವೃತ್ತ ಜೀವನ ಸಾಗಿಸುತ್ತಿರುವ ಹಿರಿಯರು ದೈಹಿಕ ಹಾಗೂ ಮಾನಸಿಕವಾಗಿ ಚಟುವಟಿಕೆಯಿಂದಿರಲು ಇಂತಹ ಸಂಘ ಕಟ್ಟಿಕೊಂಡು ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸುವುದು ಸಹಕಾರಿಯಾಗಿದೆ ಎಂದು ತಿಳಿಸಿದರು.

ನಿವೃತ್ತ ನೌಕರರಿಗೆ ಉಪಯುಕ್ತವಾಗುವಂತೆ ಸಂಘಕ್ಕೆ ಅಗತ್ಯವಾದ ಸಹಕಾರಿ ಸಂಘ, ಸಹಕಾರಿ ಬ್ಯಾಂಕ್ ಮಾಡಿ ಸಮಾಜಕ್ಕೆ ಶಾಶ್ವತ ಕೊಡುಗೆ ನೀಡುವಂತಾಗಲಿ, ಅದಕ್ಕಾಗಿ ನಮ್ಮ ಎಸ್.ಡಿ.ಜಯರಾಂ ಸಂಸ್ಥೆ, ಆಸ್ಪತ್ರೆ ಮತ್ತು ಒಕ್ಕಲಿಗರ ಸಂಘದ ವತಿಯಿಂದ ಅಗತ್ಯ ಸಹಕಾರ ನೀಡಲಾಗುವುದು. ಮುಂದೆ ಮೆಗಾ ಆರೋಗ್ಯ ಮೇಳ ನಡೆಸಿ ಎಲ್ಲರಿಗೂ ಆರೋಗ್ಯ ಸಂಪತ್ತು ಲಭಿಸುವಂತಾಗಬೇಕು. ಆ ನಿಟ್ಟಿನಲ್ಲಿ ನಾನು ನಮ್ಮ ಸಂಸ್ಥೆ ನಿಮ್ಮೊಡನಿರುವುದಾಗಿ ಭರವಸೆ ನೀಡಿದರು.    

ಈ ವೇಳೆ ಮೈಸೂರಿನ ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯರು, ಸಿಬ್ಬಂದಿ ನೂರಾರು ನಿವೃತ್ತ ನೌಕರರ ಆರೋಗ್ಯ ತಪಾಸಣೆ ಮಾಡಿ ಔಷಧಿ ನೀಡಿದರು. ಎಸ್.ಡಿ.ಜಯರಾಂ ಸಂಸ್ಥೆ ವತಿಯಿಂದ ಔಷಧಿ ಹಾಗೂ ಸಲಕರಣೆಯನ್ನು ಒದಗಿಸಲಾಗಿತ್ತು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಬಿ.ಸಿದ್ದಯ್ಯ, ವಿಭಾಗೀಯ ಉಪಾಧ್ಯಕ್ಷ ಅಪ್ಪಜಯ್ಯ, ಪದಾಧಿಕಾರಿಗಳಾದ ಶಿವಲಿಂಗಯ್ಯ, ಕೆ.ಪಿ.ವೀರಪ್ಪ, ರಾಮೇಗೌಡ, ಚನ್ನಸಂದ್ರ ಮಹದೇವು ಮತ್ತಿತರರು ಪಾಲ್ಗೊಂಡಿದ್ದರು.

 ಸರ್ಕಾರಿ ನಿವೃತ್ತ ನೌಕರರ ಸಂಘದ ವತಿಯಿಂದ ಏರ್ಪಡಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ವೈದ್ಯರು, ಸಿಬ್ಬಂದಿ ನಿವೃತ್ತರ ಆರೋಗ್ಯ ತಪಾಸಣೆ ನಡೆಸಿದರು. ಒಕ್ಕಲಿಗರ ಸಂಘದ ನಿರ್ದೇಶಕ ಅಶೋಕ್ ಜಯರಾಂ, ಸಂಘದ ಅಧ್ಯಕ್ಷ ಬಿ.ಸಿದ್ದಯ್ಯ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

Post a Comment

0 Comments

Ad Code

Responsive Advertisement