ಕೊಳ್ಳೇಗಾಲ ಸುದ್ದಿ : ಕೊಳ್ಳೇಗಾಲ ಕಸಬಾ ರೈತ ಸಂಪರ್ಕ ಕೇಂದ್ರದಲ್ಲಿ ಶಾಸಕ ಎನ್. ಮಹೇಶ್ ರವರುಕೃಷಿ ಯಂತ್ರೋಪಕರಣಗಳು ಹಾಗೂ ಪವರ್ ಟಿಲ್ಲರ್ ಗಳನ್ನು ವಿತರಿಸಿದರು.
ಕೃಷಿ ಇಲಾಖೆ, ಮತ್ತು ಕಸಬಾ ರೈತ ಸಂಪರ್ಕ ಕೇಂದ್ರ ವತಿಯಿಂದ ಕೃಷಿ ಅವಲಂಬಿತ ರೈತರಿಗೆ 2022- 23 ಸಾಲಿನ ಕೃಷಿ ಯಾಂತ್ರೀಕರಣ ಯೋಜನೆಯಡಿಯಲ್ಲಿ, ಪವರ್ ಟಿಲ್ಲರ್, ಟ್ರಾಕ್ಟರ್, ಕಟಾವು ಮಿಷನ್, ಬಿತ್ತನೆ ಉಳುಮೆಯಿಂದ ಕೂಯ್ಲಿನ ವರೆಗೂ ವಿವಿಧ ರೀತಿಯ ಯಂತ್ರೋಪಕರಣಗಳನ್ನು ಶಾಸಕರು ವಿತರಿಸಲಾಯಿತು,
ಕೃಷಿ ಯಂತ್ರೋಪರಣಗಳನ್ನು ವಿತರಿಸಿ ಶಾಸಕರು ಮಾತನಾಡಿ, 2022-23ನೇ ಸಾಲಿನ ಕೃಷಿ ಯಾಂತ್ರೀಕರಣ ಯೋಜನೆಯಡಿಯ ಕಸಬಾ ಕೇಂದ್ರ ಸುಮಾರು 10 ಪಲಾನುಭವಿಗಳಿಗೆ ಕೃಷಿಗೆ ಸಂಬಂಧಿಸಿದ ಸಣ್ಣ ಟ್ರಾಕ್ಟರ್, ಪವರ್ ಟಿಲ್ಲರ್, ಭೂಮಿ ಸಿದ್ಧತೆ ಉಪಕರಣ, ನಾಟಿ-ಬಿತ್ತನೆ ಉಪಕರಣಗಳು, ಅಂತರ ಬೇಸಾಯ ಉಪಕರಣಗಳು, ಡೀಸಲ್ ಪಂಪ್ ಸೆಟ್, ಟ್ರಾಕ್ಟರ್ / ಟಿಲ್ಲರ್ / ಇಂಜನ್ ಚಾಲಿತ ಸಸ್ಯ ಸಂರಕ್ಷಣಾ ಕಟಾವು/ ಒಕ್ಕಣೆ ಯಂತ್ರಗಳು ಉಪಕರಣಗಳು, ತ್ಯಾಜ್ಯ ವಸ್ತುಗಳ ನಿರ್ವಹಣಾ ಉಪಕಾರಣಗಳನ್ನು ಸಾಮಾನ್ಯ ರೈತರಿಗೆ ಶೇ 50% ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ರೈತರಿಗೆ ಶೇ 90% ರಷ್ಟು ಸಹಾಯಧನದಡಿ ವಿತರಿಸಲಾಗುತ್ತಿದೆ,
ಇದರ ಉದ್ದೇಶ ಕೃಷಿ ಕಾರ್ಮಿಕರ ಸಮಸ್ಯೆಯನ್ನು ನಿವಾರಿಸಿ ಕೃಷಿಯನ್ನು ಆಧುನೀಕರಣಗೊಳಿಸಿರೈತರ ಶ್ರಮವನ್ನು ನಿಗಿಸುವ ಸಲುವಾಗಿ ಕೃಷಿ ಚಟುವಟಿಕೆಗಳಿಗೆ ಅನುಗುಣವಾಗಿ ಯಂತ್ರೋಪಕರಣಗಳನ್ನು ವಿತರಿಸಲಾಗುತ್ತಿದೆ,
ಈವಾಗ ಆಯ್ಕೆಯಾಗಿದ್ದ 10 ಫಲಾನುಭವಿಗಳಿಗೆ ಪವರ್ ಟಿಲ್ಲರ್, ಸಣ್ಣ ಟ್ರಾಕ್ಟರ್,ಉ,ಳುಮೆ ಯಂತ್ರಗಳನ್ನು ವಿತರಿಸಲಾಗಿದೆ,
ಮುಂದಿನ ದಿನಗಳಲ್ಲಿ ಇನ್ನಷ್ಟು ಫಲಾನುಭವಿಗಳನ್ನು ಆಯ್ಕೆ ಮಾಡಿ ಅಗತ್ಯ ಇರುವ ಯಂತ್ರೋಪಕರಣಗಳನ್ನು ವಿತರಿಸಲಾಗುವುದು ಎಂದರು
ನಾಗರಾಜು, ಮಾಳಿಗಯ್ಯ, ಸಂತೋಷ್, ಗಿರಿಜಮ್ಮ, ಮಸಣಶೆಟ್ಟಿ, ಗುಣಶೇಖರ್ , ಬಸಮ್ಮ ಎಂಬ ಫಲಾನುಭವಿಗಳಿಗೆ ಯಂತ್ರೋಪಕಾರಣಗಳನ್ನು ವಿತರಿಸಲಾಯಿತು,
ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ಪ್ರಕಾಶ್, ಕೃಷಿ ಸಹಾಯಕ ನಿರ್ದೇಶಕಿ ಸುಂದ್ರಮ್ಮ, ಕೃಷಿ ಅಧಿಕಾರಿ ನಾಗೇಂದ್ರ, ಜಗದೀಶ್, ಹಾಗೂ ಇನ್ನಿತರರು ಇದ್ದರು

0 Comments