Ticker

6/recent/ticker-posts

Ad Code

Responsive Advertisement

ರಂಗೇರಿದ ಮುಜಮಿಲ್ ಪಾಸ ಅಬ್ಬರದ ಪ್ರಚಾರ ಬಿಜೆಪಿಗೆ ಹಿನ್ನೆಡೆ

 ಕೊಳ್ಳೇಗಾಲ ಸುದ್ದಿ: ಹನೂರು ಕ್ಷೇತ್ರ,ಮೊದಲ ಹಂತದಲ್ಲಿಯೇ ನಿಶಾಂತ್ ಗೆ ಸೋಲು 

ಹನೂರು ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆ ಹಿನ್ನೆಲೆ ಬಿಜೆಪಿ ಟಿಕೇಟ್ ಗಾಗಿ ಬಾರಿ ಕುಳಗಳ ನಡುವೆ ಪೈಪೋಟಿ ಏರ್ಪಟ್ಟಿದೆ

ರಾಜಕೀಯ ಸಹವಾಸವೇ ಬೇಡ ಎಂದು ಮನೆಯಲ್ಲಿ ಕುಳಿತ್ತಿದ್ದ ಪರಿಮಳ ನಾಗಪ್ಪ ಹಾಗೂ ಖಾಸಗಿ ಉದ್ದೆಮಿ ನಿಶಾಂತ್ ಮತ್ತು ಮಾನಸ ಶಿಕ್ಷಣ ಸಂಸ್ಥೆ ದತ್ತೇಶ್ ಕುಮಾರ್

ಬಿಜೆಪಿ ಟಿಕೇಟ್ ಗಾಗಿ ನಾ ಮುಂದು ತ ಮುಂದು ಎಂದು ಅಗ್ಗ ಜಗ್ಗಾಟ ನಡೆಸುತ್ತಿದ್ದಾರೆ ಟಿಕೇಟ್ ಗಾಗಿ ಜನರ ಬೆಂಬಲ ಪಡೆದು ಹಿರಿಯ ನಾಯಕರ ಮನ ವೊಲಿಸಿ ಟಿಕೇಟ್ ಗಿಟ್ಟಿಸಿ ಕೊಳ್ಳಲು ಕೋಟಿ ಕೋಟಿ ಹಣ ಖರ್ಚು ಮಾಡುತ್ತಿದ್ದಾರೆ, ಇವರೆಲ್ಲರಿಗೂ ಟಕ್ಕರ್ ಕೊಟ್ಟ ಹನೂರು ಕ್ಷೇತ್ರದ ಬಡವರ ಮಗ ಅಪ್ಪು ಅಭಿಮಾನಿ ಮುಜಮಿಲ್ ಫಾಷ ರವರು ಹಣದ ಬಲ ಇಲ್ಲದೆ ಕೇವಲ ಜನ ಬಲವನ್ನು ನಂಬಿ ಹನೂರು ಕ್ಷೇತ್ರ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದು ಹನೂರು ತಾಲ್ಲೂಕಿನಾದ್ಯಂತ ಅಬ್ಬರದ ಪ್ರಚಾರದಲ್ಲಿ ತೊಡಗಿದ್ದಾರೆ,

 ಕ್ಷೇತ್ರದ ಕೆ. ಗುಂಡಪುರದವರಾದ ಮುಜಮಿಲ್ ಫಾಷ ರವರ ಕರ್ನಾಟಕ ಯುವ ಚಕ್ರವರ್ತಿ ಪುನೀತ್ ರಾಜ್ ಕುಮಾರ್ ಅಪ್ಪು ಅಭಿಮಾನಿಯಾಗಿದ್ದು

ತಾಲ್ಲೂಕಿನಾದ್ಯಂತ ಅಪ್ಪು ಅಭಿಮಾನಿ ಮುಜಮಿಲ್ ಫಾಷ ಎಂದೇ ಚಿರಪರಿಚಿತರು

ರಾಜ್ಯದ 224 ಕ್ಷೇತ್ರಗಳಲ್ಲಿಯೆ ಮೊದಲ ಬಾರಿಗೆ ಹನೂರು ವಿಧಾನಸಭಾ ಕ್ಷೇತ್ರದಲ್ಲಿ ಅಪ್ಪು ಹೆಸರಿನಲ್ಲಿ ಅಭಿಮಾನಿಯೊಬ್ಬರು ಪಕ್ಷೇತರ ಅಭ್ಯರ್ಥಿಯಾಗಿ ಮಾಡುತ್ತಿದ್ದಾರೆ ಎನ್ನಲಾಗಿದೆ,

ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಿರುವ ಮುಜಮಿಲ್ ಫಾಷರವರು ಕ್ಷೇತ್ರದ ಹಳ್ಳಿ ಹಳ್ಳಿಗೂ ಭೇಟಿ ನೀಡಿ ಬಡವರ ದೀನ ದಲಿತರ ಮನೆಗಳಿಗೂ ಹೋಗಿ ಅವರ ಕಷ್ಟ ಕಾರ್ಪುಣ್ಯ ವಿಚಾರಿಸಿ, ಅವರ ಕಷ್ಟಗಳಿಗೆ ಸ್ಪಂದಿಸಿ

ಸಮಸ್ಯೆಗಳನ್ನು ಬಗೆಹರಿಸುತ್ತಿದ್ದಾರೆ ಜೊತೆಗೆ ನಿರುದ್ಯೋಗಿಗಳಿಗೆ ಉದ್ಯೋಗ ಕೊಡಿಸುವ ಭರವಸೆಯನ್ನು ನೀಡುತ್ತಿದ್ದಾರೆ,

ಅಲ್ಲದೆ ಆರೋಗ್ಯ ಸಮಸ್ಯೆ ಇರುವವರಿಗೆ ತಾವೇ ಸ್ವತಃ ಚಿಕಿತ್ಸೆ ಕೊಡಿಸುತ್ತಿದ್ದಾರೆ,

ಹಾಗೂ ಕ್ಷೇತ್ರದ ಯಾವ ಸಮುದಾಯದವರನ್ನು ಕಡೆಗಣಿಸದೆ ಎಲ್ಲರು ಸಮನಾಗಿ ನೋಡಿಕೊಂಡು ಎಲ್ಲರ ಬೆರೆತು ಮನೆ ಮಗ ಸೇವೆಗಳನ್ನು ಮಾಡುತ್ತಿದ್ದಾರೆ,

ನಿರಾಶ್ರಿತರಿಗೆ  ಆಶ್ರಯವನ್ನು ಕೊಡಿಸುವ ನಿಟ್ಟಿನಲ್ಲಿ ಅವಶ್ಯಕತೆ ಇರುವ ಗ್ರಾಮಗಳಲ್ಲಿ ಅಲ್ಲಲ್ಲಿ ಯಾರಿಗೆ ಅವಶ್ಯಕತೆ ಇದೆಯೋ ಅಂತವರಿಗೆ ನಿವೇಶನಗಳನ್ನು ಕೊಡಿಸಿ ಮನೆ ನಿರ್ಮಾಣ ಮಾಡಿಕೊಳ್ಳಲು ಸಹಕಾರವನ್ನು ನೀಡುತ್ತಿದ್ದಾರೆ, ಜೊತೆಗೆ ಮಹಿಳಾ ಸಂಘಟನೆಗಳಿಗೆ ಆರ್ಥಿಕವಾಗಿ ಸಹಕಾರವನ್ನು ಕೊಟ್ಟು ಮುಂದಿನ ದಿನಗಳಲ್ಲಿ ಸಂಘದ ಅಭಿವೃದ್ಧಿಗೆ ಸರ್ಕಾರದಿಂದ ಅನುದಾನ ಕೊಡಿಸುವುದಾಗಿ ಭರವಸೆಯನ್ನು ಕೊಟ್ಟು ಎಲ್ಲರ ಗಮನ ಸೆಳೆಯುತ್ತಿದ್ದಾರೆ,

ಕ್ಷೇತ್ರದಲ್ಲಿ ಮುಜಮಿಲ್ ಫಾಷರವರ ನಿಶ್ವಾರ್ಥ ಸೇವೆಯನ್ನು ಗಮನಿಸಿ ಮಹಿಳೆಯರು ಯುವಕರು ಮುಜಮಿಲ್ ಫಾಷ ರವರ ಜೊತೆ ಸೇರ್ಪಡೆಗೊಳ್ಳುತ್ತಿದ್ದಾರೆ ಹಣವಂತರಾದ ಬಿಜೆಪಿಯ ಬಾರಿ ಕುಳಗಳನ್ನ ಹಿಂದಿಕ್ಕಿ  ಕ್ಷೇತ್ರ ಮಿಂಚಿನ ಸಂಚಲನ ಮಾಡುತ್ತಿದ್ದಾರೆ , ಟಿಕೇಟ್ ಪಡೆಯುವ ವಿಚಾರದಲ್ಲಿ ಬಿಜೆಪಿ ವಲಯದಲ್ಲಿರುವ  ದ್ವೇಷ ಅಸೂಯೆ, ವೈಶಮ್ಯಗಳಿಂದ ಬಿಜೆಪಿಯ ಕಾರ್ಯಕರ್ತರು ಸ್ಥಳೀಯ ಅಭ್ಯರ್ಥಿಯಾದ ಮುಜಮಿಲ್ ಫಾಷರವರನ್ನು ಬೆಂಬಲಿಸಿ ಪಕ್ಷೇತರ ಅಭ್ಯರ್ಥಿಗೆ ಬೆಂಬಲ ಸೂಚಿಸಿ ಅಧಿಕ ಸಂಖ್ಯೆಯಲ್ಲಿ ಸೇರ್ಪಡೆಗೊಳ್ಳುತ್ತಿದ್ದಾರೆ,

ಕ್ಷೇತ್ರದಲ್ಲಿ ನಡೆಯುತ್ತಿರುವ ಮುಜಮಿಲ್ ಫಾಷರವರ ಅಬ್ಬರಕ್ಕೆ ಪ್ರಚಾರದಿಂದ ಹಾಗೂ ಕ್ಷೇತ್ರದ ಹಳ್ಳಿ ಹಳ್ಳಿಗಳಲ್ಲಿ ಪಕ್ಷೇತರ ಅಭ್ಯರ್ಥಿ ಪರ ಸಿಗುತ್ತಿರುವ ಅಭೂತ ಪೂರ್ವ ಬೆಂಬಲದಿಂದ ಬಿಜೆಪಿ ವಲಯದಲ್ಲಿ  ನಿದ್ದೆಗೆಡಿಸಿದೆ ಎನ್ನಲಾಗಿದೆ, ಒಂದೊಂದು ಸಮುದಾಯಗಳನ್ನು ಎರಡೆರಡು ಗುಂಪುಗಳಾಗಿ ಹಿಬ್ಬಾಗ ಮಾಡಿ  ವೈಶಮ್ಯ ದ್ವೇಷ ಅಸೂಯೆ ಹುಟ್ಟುವಂತೆ ಮಾಡುತ್ತಿರುವ ನಿಶಾಂತ್ ಕೃತ್ಯಕ್ಕೆ ಬೇಸತ್ತ ಬಿಜೆಪಿ ಕಾರ್ಯಕರ್ತರೇ ನಿಶಾಂತ್ ನನ್ನು ಕ್ಷೇತ್ರ ಬಿಟ್ಟು ತೊಲಗುವಂತೆ ವಿರೋಧ ವ್ಯಕ್ತ ಪಡಿಸಿ ಗಲಾಟೆ ನಡೆಸಿದ್ದಾರೆ ಎನ್ನಲಾಗಿದೆ,

ಅಪ್ಪು ಅಭಿಮಾನಿಯಂದೇ ಖ್ಯಾತಿ ಹೊಂದಿರುವ ಮುಜಮಿಲ್ ಪಾಸರವರು ಮೊದಲ ಪ್ರಯತ್ನದಲ್ಲಿಯೂ ಇಷ್ಟೊಂದು ದೊಡ್ಡ ಮಟ್ಟದ ಬೆಂಬಲವನ್ನು ಪಡೆಯುತ್ತಿರುವುದು ನಿಜಕ್ಕೂ ಸ್ಲಾಘನೀಯ, ಹೊರಗಿನವರನ್ನು ನಂಬುವ ಬದಲು ಸ್ಥಳೀಯರಿಗೆ ಹೆಚ್ಚಿನ ಆದ್ಯತೆ ಕೊಡುವುದು ಸೂಕ್ತ ಎಂಬ ಮಾತಗಳು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ ಎನ್ನಲಾಗಿದೆ,

Post a Comment

0 Comments

Ad Code

Responsive Advertisement