Ticker

6/recent/ticker-posts

Ad Code

Responsive Advertisement

ಕೆ. ಆರ್. ಪುರಂ ವಿಧಾನಸಭಾ ಕ್ಷೇತ್ರದ ಮತಗಟ್ಟೆಗಳ ಪರಿಶೀಲನೆ ಮಾಡಿ ಮುಖ್ಯ ಆಯುಕ್ತ ತುಷಾರ್ ಗಿರಿ ನಾಥ್

ಕೆ.ಆರ್.ಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ *ಒಂದೇ ಸ್ಥಳದಲ್ಲಿ ಹೆಚ್ಚು ಮತಗಟ್ಟೆಗಳಿರುವ ಕಡೆ ಭೇಟಿ ನೀಡಿ* ಮತಗಟ್ಟೆಯ ಸ್ಥಳದಲ್ಲಿರಬೇಕಿರುವ ಕನಿಷ್ಠ ಮೂಲಭೂತ ಸೌಕರ್ಯಗಳನ್ನು ಮಾನ್ಯ *ಮುಖ್ಯ ಆಯುಕ್ತ ತುಷಾರ್ ಗಿರಿ ನಾಥ್ ರವರು* ಪರಿಶೀಲನೆ ನಡೆಸಿ, ಎಲ್ಲಾ ಮತಗಟ್ಟೆಗಳ ಬಳಿ ವಿಕಲ ಚೇತನರಿಗೆ ಸರಿಯಾದ ಸೌಲಭ್ಯವಿರುವಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದರು.




ಕೆ.ಆರ್.ಪುರ ವ್ಯಾಪ್ತಿಯಲ್ಲಿ ಮತಗಟ್ಟೆಗಳ ಪರಿಶೀಲನೆ ನಡೆಸಿದ ವೇಳೆ‌ ಮಾತನಾಡಿದ ಅವರು, ಎಲ್ಲಾ ಮತಗಟ್ಟೆಗಳಲ್ಲಿ ಕನಿಷ್ಟ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರಿನ ವ್ಯವಸ್ಥೆ, ವಿದ್ಯುತ್, ಕಾಯುವ ಕೊಠಡಿ, ಸಹಾಯ ಕೇಂದ್ರ, ಶೌಚಾಯಲ, ವಿಶೇಷವಾಗಿ ವಿಕಲಚೇತನರಿಗೆ ಕಡ್ಡಾಯವಾಗಿ ರ‍್ಯಾಂಪ್ ಸೌಲಭ್ಯವಿರುವಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು. 

ಮೊದಲಿಗೆ ಚಳ್ಕೆರೆಯ ಸೆ. ಪಾಲ್ ಹೈ ಸ್ಕೂಲ್ ನಲ್ಲಿ ಇದೇ ಮೊದಲಿಗೆ ಹೊಸದಾಗಿ 8 ಮತಗಟ್ಟೆಗಳು ಬರಲಿದ್ದು, ಒಂದು ಕಡೆ ರ‍್ಯಾಂಪ್ ಇದ್ದು, ಮತ್ತೊಂದೆಡೆ ರ‍್ಯಾಂಪ್ ಅವಶ್ಯಕತೆಯಿದ್ದು, ರ‍್ಯಾಂಪ್ ನಿರ್ಮಾಣ ಮಾಡಬೇಕು. ಜೊತೆಗೆ ಎಲ್ಲಾ ರೀತಿಯ ಸೌಲಭ್ಯಗಳಿರುವಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.

ತದನಂತರ ಗೆದ್ದಲಹಳ್ಳಿಯ ಬಳಿಯ ಸಿದ್ಧಾರ್ಥ ಸನಿವಾಸ ಪ್ರೌಢಶಾಲೆಯಲ್ಲಿ 5 ಮತಗಟ್ಟೆಗಳಿದ್ದು, ಅವುಗಳನ್ನು ಪರಿಶೀಲಿಸಿ ನೀರಿನ ವ್ಯವಸ್ಥೆ ಹಾಗೂ ಶೌಚಾಲಯದ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕೊನೆಯದಾಗಿ ಕೆ.ಆರ್ ಪುರದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿರುವ 8 ಮತಗಟ್ಟೆಗಳು ಹಾಗೂ ಪಕ್ಕದಲ್ಲಿಯೇ ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ  10 ಮತಗಟ್ಟೆಗಳಿದ್ದು, ಎರಡೂ ಕಡೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಎರಡೂ ಸರಿಯಾದ ವ್ಯವಸ್ಥೆಯಿದ್ದು, ಏನಾದರೂ ಸೌಲಭ್ಯಗಳು ಅವಶ್ಯಕತೆಯಿದ್ದಲ್ಲಿ ಅದನ್ನು ಮಾಡಿಕೊಳ್ಳಲು ಸಹಾಯಕ ಮತದಾರ ನೋಂದಣಾಧಿಕಾರಿಗೆ ಸೂಚನೆ ನೀಡಿದರು. 

*ಈ ವೇಳೆ ವಲಯ ಆಯುಕ್ತರಾದ ಡಾ. ತ್ರಿಲೋಕ್ ಚಂದ್ರ, ವಲಯ ಜಂಟಿ  ಆಯುಕ್ತರಾದ ವೆಂಕಟಾ ಚಲಪತಿ, ಚುನಾವಣಾ ವಿಭಾಗದ ಸಹಾಯಕ ಆಯುಕ್ತರಾದ ಉಮೇಶ್, ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.*

Post a Comment

0 Comments

Ad Code

Responsive Advertisement