Ticker

6/recent/ticker-posts

Ad Code

Responsive Advertisement

ಟಿ.ಮಲ್ಲೇಶ್ ಹೆಲ್ಪಿಂಗ್ ಟೀಮ್ ವತಿಯಿಂದ ಉಚಿತವಾಗಿ 5000ಮಹಿಳೆಯರಿಗೆ ಸೀರೆ ಮತ್ತು ಆಟೋ ಚಾಲಕರಿಗೆ ವಿಮಾ ಪಾಲಿಸಿ ಬಾಂಡ್ ವಿತರಣೆ

ಗಾಂಧಿನಗರ ವಿಧಾನಸಭಾ ಕ್ಷೇತ್ರ:ಟಿ.ಮಲ್ಲೇಶ್ ಹೆಲ್ಪಿಂಗ್ ಟೀಮ್ ವತಿಯಿಂದ 74ನೇ ಗಣರಾಜ್ಯೋತ್ಸವ ಪ್ರಯುಕ್ತ

 ಟಿ.ಮಲ್ಲೇಶ್ ಹೆಲ್ಪಿಂಗ್ ಟೀಮ್ ಗಾಂಧಿನಗರ, ಬೆಂಗಳೂರು ವತಿಯಿಂದ 74ನೇ ಗಣರಾಜ್ಯೋತ್ಸವ ಶುಭಾ ಸಂದರ್ಭದಲ್ಲಿ  ಗಾಂಧಿನಗರ ವಿಧಾನಸಭಾ ಕ್ಷೇತ್ರದ ಡಾ||ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ 

 ಶ್ರೀರಾಮಪುರ ಆಟದ ಮೈದಾನದಲ್ಲಿ ಉಚಿತವಾಗಿ 5000ಸಾವಿರ ಮಹಿಳೆಯರಿಗೆ ಸೀರೆ , 100ಜನ ಆಟೋ ಚಾಲಕರಿಗೆ 5ಲಕ್ಷರೂಪಾಯಿ ವಿಮಾ ಪಾಲಿಸಿ ಬಾಂಡ್, ಬೀದಿ ಬದಿಯ ವ್ಯಾಪಾರಿಗಳಿಗೆ ತಳ್ಳುವ ಗಾಡಿ, ವಿಕಲಚೇತನರಿಗೆ ವೀಲ್ ಚೇರ್ ,ಹಿರಿಯ ನಾಗರಿಕರಿಗೆ ಮತ್ತು ವಿಧವೆ ತಾಯಂದಿರಿಗೆ ಪಿಂಚಣಿ ಮಂಜೂರಾತಿ ಆದೇಶ ಪತ್ರ  ಕ್ರಿಕೆಟ್, ಪುಟ್ಬಾಲ್ ತಂಡಗಳಿಗೆ ಕ್ರೀಡಾ ಸಲತಕರಣೆ,ಕಣ್ಣಿನ ಶಸ್ತ್ರಚಿಕಿತ್ಯೆ ಒಳಗಾದವರಿಗೆ ಉಚಿತವಾಗಿ ಕನ್ನಡಕ ವಿತರಣೆ,ಆರ್ಥಿಕವಾಗಿ ಹಿಂದುಳಿದ ಬಡರೋಗಿಗಳಿಗೆ ಔಷಧಿ ವಿತರಣೆಯನ್ನು ಬ್ರಹ್ಮಾಂಡ ಗುರೂಜಿಗಳಾದ ನರೇಂದ್ರಬಾಬು ಶರ್ಮರವರು,ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯ ರಾಷ್ಟ್ರೀಯ ಅಧ್ಯಕ್ಷರಾದ ಎನ್.ಮೂರ್ತಿ, ಚಿತ್ರ ಸಾಹಿತಿ ನಾಗೇಂದ್ರ ಪ್ರಸಾದ್, ನಿಕಟಪೂರ್ವ ಬಿ.ಬಿ.ಎಂ.ಪಿ.ಸದಸ್ಯರಾದ ಟಿ.ಮಲ್ಲೇಶ್ ರವರು,ಡಾ||ಅರುಣ್ ಸಾಗರ್,ಸಾಹಿತಿ ತಲಕಾಡು ಚಿಕ್ಕರಂಗೇಗೌಡ, ಮಾಜಿ ಬಿ.ಡಿ.ಎ.ಸದಸ್ಯರಾದ ವೆಂಕಟೇಶ್, ದೀಪಾ ಬೆಳಗಿಸಿ, ಅರ್ಹ ಫಲಾನುಭವಿಗಳಿಗೆ ಸೌಲಭ್ಯ ಸೌವಲತ್ತು ವಿತರಣೆ ಮಾಡಿದರು.

ಟಿ.ಮಲ್ಲೇಶ್ ರವರು ಮಾತನಾಡಿ ಬಡವರ ಏಳಿಗೆಗಾಗಿ ಶ್ರಮಿಸಿದ ವಿಶ್ವದ ಮಹಾನ್ ನಾಯಕರುಗಳಾದ ರಾಷ್ಟ್ರಪಿತ ಮಹಾತ್ಮ ಗಾಂಧಿಜೀರವರು, ಭಾರತರತ್ನ ಸಂವಿಧಾನ ಶಿಲ್ಪಿ ಡಾ||ಬಿ.ಆರ್.ಅಂಬೇಡ್ಕರ್ ರವರ ಆದರ್ಶ ಮಾರ್ಗದರ್ಶನದಲ್ಲಿ ಟಿ.ಮಲ್ಲೇಶ್ ಹೆಲ್ಪಿಂಗ್ ಟೀಮ್ ಕಳೆದ ಐದು ವರ್ಷಗಳಿಂದ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ಬಂದಿದೆ.

ಎಲ್ಲ ವರ್ಗ, ಧರ್ಮದವರಿಗೆ ಸರಿಸಮಾನವಾಗಿ ಜೀವಿಸುವ, ಬಾಳುವ ಹಕ್ಕನ್ನು ಭಾರತದ ಸಂವಿಧಾನ ನೀಡಿದೆ.

ಶಿಕ್ಷಣ ಮತ್ತು ಆರೋಗ್ಯ ಬಡವರ ಸುಲಭವಾಗಿ ಲಭಿಸಬೇಕು ಅದರಿಂದ ನಮ್ಮ ಸಂಘಟನೆಯಿಂದ ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಿ, ಉಚಿತ ಪಠ್ಯಪುಸ್ತಕ, ನೋಟ್ ಬುಕ್ ಹಾಗೂ ವಿದ್ಯಾರ್ಥಿ ವೇತನ ಪ್ರತಿ ವರ್ಷ ವಿತರಿಸಲಾಗುತ್ತಿದೆ.

ಬಡವರ ಆರೋಗ್ಯ ಕಡೆ ಗಮನಹರಿಸಿ ಹತ್ತಕ್ಕೂ ಹೆಚ್ಚು ಜನರಿಗೆ ಹೃದಯ ಶಸ್ತಚಿಕಿತ್ಯೆ ಮತ್ತು 10ಕ್ಕೂ ಬಡ ಕುಟುಂಬಗಳಿಗೆ ಮನೆ ನಿರ್ಮಾಣ ಮಾಡಿಕೊಳ್ಳಲು ಸಹಾಯ ಹಸ್ತ ನೀಡಲಾಗಿದೆ.





ಬಡವರಿಗೆ ಹುಟ್ಟಿರಬಹುದು, ಬಡತನ ನಿರ್ಮೂಲನೆ ಮಾಡಲು ಮಹಿಳೆಯರಿಗೆ ಟೈಲರಿಂಗ್ ಯಂತ್ರ, ಬೀದಿ ಬದಿಯ ವ್ಯಾಪಾರಿಗಳಿಗೆ ತಳ್ಳುವ ಗಾಡಿ ವಿತರಿಸಲಾಗಿದೆ.

ನಾವೆಲ್ಲರು ಒಂದೇ ಎಂದು ಬಾಳಬೇಕು, ಆರ್ಥಿಕವಾಗಿ ಹಿಂದುಳಿದವರು ಸ್ವಾವಲಂಭಿ ಜೀವನ ಸಾಗಿಸಲು ನಮ್ಮ ಸಂಘಟನೆ ಅವಿರತ ಶ್ರಮಿಸುತ್ತಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಾನಸ ಗ್ರೂಪ್ ಅಧ್ಯಕ್ಷರಾದ ಡಾ.ಆನಂದ್ ಕುಮಾರ್, ನಿವೃತ್ತ ಮುಖ್ಯ ಅಭಿಯಂತರಾದ ಜಗದೀಶ್, ಕೆ.ಐ.ಎ.ಡಿ.ಬಿ.ಸಹಾಯಕ ಕಾರ್ಯದರ್ಶಿ ಶಿವರಾಮಯ್ಯ ,ಪ್ರಧಾನ ಅಭಿಯಂತರಾದ ಶ್ರೀಧರನ್,ಮುರುಗನ್ ಆರ್ಟ್ಸ ಮಾಲೀಕರಾದ ಮುರುಗನ್ ರವರು ಪಾಲ್ಗೊಂಡಿದ್ದರು.

Post a Comment

0 Comments

Ad Code

Responsive Advertisement