" ಶ್ರೀ ಮಧ್ವ ನವಮೀ ಉತ್ಸವ- 30-1-2023 ರಂದು ಗುರು ರಾಯರ ಸನ್ನಿಧಿಯಲ್ಲಿ
ಬೆಂಗಳೂರಿನ ಜಯನಗರದ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀರಾಘವೇಂದ್ರ ಸ್ವಾಮಿಗಳ ಸನ್ನಿಧಿಯಲ್ಲಿ ಪರಮ ಪೂಜ್ಯ ಶ್ರೀ1008 ಶ್ರೀಸುಬುಧೇಂದ್ರ ತೀರ್ಥ ಶ್ರೀಪಾದಂಗಳವರ ಆದೇಶಾನುಸಾರ ಶ್ರೀ ಮಠದ ಹಿರಿಯ ವ್ಯವಸ್ಥಾಪಕರಾದ ರಾಜಾ, ಕೆ ವಾದೀಂದ್ರಾಚಾರ್ಯ, ಹಾಗೂ ಜಿ , ಕೆ ಆಚಾರ್ಯ, ಇವರ ನೇತೃತ್ವದಲ್ಲಿ ಜನವರಿ 30-1-2023 ಸೋಮವಾರ ದಂದು "ಶ್ರೀಮಧ್ವನವಮೀ" ಪ್ರಯುಕ್ತ ಬೆಳಗ್ಗೆ 7-30ಕ್ಕೆ ಶ್ರೀ ಮುಖ್ಯಪ್ರಾಣ ದೇವರಿಗೆ ಶ್ರೀ ಹರಿವಾಯು ಸ್ತುತಿ ಪಾರಾಯಣ ಸಹಿತ ಜೇನುತುಪ್ಪದ ಮಧು ಅಭಿಷೇಕ ದೊಂದಿಗೆ ವಿಶೇಷ ಪೂಜಾ ಕಾರ್ಯಕ್ರಮಗಳು ನೆರವೇರಲಿದೆ , ತದನಂತರ ಶ್ರೀ ಬೆಳಗ್ಗೆ 8 ಕ್ಕೆ ಸಾಮೂಹಿಕವಾಗಿ ಶ್ರೀ ಪವಮಾನ ಹೋಮವು ನಡೆಯಲಿದೆ, ವಿಶೇಷವಾಗಿ "ಲಕ್ಷಾವೃತ್ತಿ"ಶ್ರೀಹರಿವಾಯುಸ್ತುತಿ ಮಂತ್ರ ಪಾರಾಯಣ ಸಮಿತಿಯ ಅಧ್ಯಕ್ಷರಾದ ವೇಣುಗೋಪಾಲ್ ಹಾಗೂ ಮುರಳಿದರ್ ಟ್ರಸ್ಟ್ ನ ವೃಂದದವರಿಂದ ಶ್ರೀ ಸುಮದ್ವ ವಿಜಯ ಪಾರಾಯಣ ಶ್ರೀಮಧ್ವ ನಾಮ ಶ್ರೀಹರಿಭಜನೆ ಯೊಂದಿಗೆ ಉತ್ಸವಗಳು, ಸ್ವರ್ಣ ಲೇಪಿತ ಗಜವಾಹನದ ಮೇಲ್ಭಾಗದಲ್ಲಿ "ಗ್ರಂಥಗಳ"ಮೆರವಣಿಗೆ,ಪಲ್ಲಕ್ಕಿ, ಉತ್ಸವರಥೋತ್ಸವ ಪಾದಪೂಜೆ ಕನಕಾಭಿಷೇಕ, ವಿದ್ವಾಂಸರಿಂದ ಪ್ರವಚನ ಹಾಗೂ ಭಕ್ತರಿಗೆ ಅನ್ನಸಂತಪರ್ಣೆ ನೆರವೇರಲಿದೆ, ಈ ಪೂಜಾ ವೈಭವದ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತಹ ಭಕ್ತರು ಈ ನಂಬರ್ನ - 9449133929- ಆನ್ಲೈನ್ ಮುಖಾಂತರ ಸೇವೆ ಸಲ್ಲಿಸಿ ಶ್ರೀ ಹರಿಯುವಾಯು ಗುರುಗಳ ಅನುಗ್ರಹಕ್ಕೆ ಪಾತ್ರರಾಗಬಹುದು ಎಂದು ಶ್ರೀ ನಂದಕಿಶೋರಾಚಾರ್ ತಿಳಿಸಿದರು. ಹೆಚ್ಚಿನ ಮಾಹಿತಿಗಾಗಿ-9945429129-9449133929-08022443962-8660349906

0 Comments