Ticker

6/recent/ticker-posts

Ad Code

Responsive Advertisement

*2000ಭಕ್ತರಿಗೆ ತೀರ್ಥಸ್ಥಳಗಳಿಗೆ ಉಚಿತ ಪ್ರವಾಸ*

ಬಡವರ, ಹಿರಿಯ ನಾಗರಿಕರ ಸೇವೆ ಮಾಡುವುದು ಪುಣ್ಯದ ಕೆಲಸ-ಕಾಂಗ್ರೆಸ್ ಪಕ್ಷದ ಯುವ ನಾಯಕ ರಘುವೀರ್ ಎಸ್.ಗೌಡ*



ರಾಜಾಜಿನಗರ ವಿಧಾನಸಭಾ ಕ್ಷೇತ್ರ: ನೇತಾಜಿ ಸುಭಾಶ್ ಚಂದ್ರ ಬೋಸ್ ಆಟದ ಮೈದಾನದಲ್ಲಿ 2000ಸಾವಿರ ಭಕ್ತರು ,30ಬಸ್ ಗಳಲ್ಲಿ ಮೈಲೆ ಮಹದೇಶ್ವರ ಬೆಟ್ಟ,ನಿಮಿಷಾಂಬದೇವಿ ದೇವಸ್ಥಾನ, ಶ್ರೀರಂಗಪಟ್ಟಣ ಶ್ರೀ ರಂಗನಾಥ ದೇವಸ್ಥಾನ,ಮೈಸೂರು ಚಾಮುಂಡಿಬೆಟ್ಟ, ನಂಜನಗೂಡು ಶ್ರೀ ಕಂಠೇಶ್ವರ ದೇವಸ್ಥಾನ ಉಚಿತ ಪ್ರವಾಸ ಕಾರ್ಯಕ್ರಮ 

 *ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಯುವ ನಾಯಕರಾದ ರಘುವೀರ್ ಎಸ್.ಗೌಡರವರು, ಶ್ರೀಮತಿ ಅಪೇಕ್ಷಾ ಕಟ್ಟಿರವರು*  ಗೋ ಪೂಜೆ ಸಲ್ಲಿಸಿ, ಆಗಮಿಸಿದ್ದ ಭಕ್ತ ಸಮುದಾಯಕ್ಕೆ ಶುಭಾ ಹಾರೈಸಿ,ಬೀಳ್ಕೂಡುಗೆ ನೀಡಿದರು.

ಮಾಜಿ ಮಹಾನಗರ ಪಾಲಿಕೆ ಸದಸ್ಯರುಗಳಾದ ಜಿ.ಕೃಷ್ಣಮೂರ್ತಿ,ಶ್ರೀಮತಿ ಮಂಜುಳ ವಿಜಯಕುಮಾರ್ ಹಾಗೂ ವಿಜಯಕುಮಾರ್, ಕಾಂಗ್ರೆಸ್ ಪಕ್ಷದ ರಾಕೇಶ್,ಗಂಗಾಧರ್ ರವರು ಪಾಲ್ಗೊಂಡಿದ್ದರು.

ಕಾಂಗ್ರೆಸ್ ಪಕ್ಷದ ಯುವ ನಾಯಕರಾದ *ರಘುವೀರ್ ಎಸ್.ಗೌಡರವರು* ಮಾತನಾಡಿ ಬಡವರ,ಹಿರಿಯ ನಾಗರಿಕರ ಸೇವೆ ಮಾಡುವುದು ಏಳು ಜನ್ಮದ ಪುಣ್ಯದ ಫಲ.

ತಂದೆ,ತಾಯಿ ಮತ್ತು ಗುರುಹಿರಿಯರ ಆಶೀರ್ವಾದದ ಫಲದಿಂದ ಕಳೆದ 20ವರ್ಷಗಳಿಂದ ಜನಸೇವೆಯನ್ನ ನಿರಂತರ ಮಾಡಿಕೊಂಡು ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಜನರಿಗೆ ಮನೆಯ ಮಗನಾಗಿ ಅವರ ನೋವು,ನಲಿವುಗಳಿಗೆ ಸದಾ ಸ್ಪಂದಿಸುತ್ತಾ ಬಂದಿದ್ದೇನೆ.

ಈಗಾಗಲೇ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಸೀರೆ ವಿತರಣೆ ಮತ್ತು ದಿನಸಿ ಕಿಟ್ ವಿತರಣೆ ಮತ್ತು ನೂರಾರು ಆಟೋ ಚಾಲಕರಿಗೆ ಉಚಿತವಾಗಿ ಆಟೋ ಟೈಯರ್ ಗಳು, ಇನ್ಯೂರೆನ್ಸ್ ಬಾಂಡ್ ಗಳನ್ನು ವಿತರಿಸಲಾಗಿದೆ.

ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಆನಾರೋಗ್ಯ ಪೀಡಿತರಿಗೆ ವೈದ್ಯಕೀಯ ವೆಚ್ಚದ ಸಹಾಯಹಸ್ತ ನೀಡಲಾಗಿದೆ.

ಸಮಾಜ ನಮಗೆ ಏನು ಕೊಟ್ಟಿದೇ ಏನ್ನುದಕ್ಕಿಂತ,ಸಮಾಜಕ್ಕೆ ನಾವು ಏನು ಕೊಡುಗೆ ನೀಡಿದ್ದೇವೆ ಏನ್ನುವುದು ಮುಖ್ಯ.

ರಾಜಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ಪ್ರತಿಯೊಂದು ಬಡಾವಣೆ ದೇವರುಗಳು ಹೆಸರುಗಳು ಇಡಲಾಗಿದೆ ಮತ್ತು ಅತಿ ಹೆಚ್ಚು ದೇವಾಲಯಗಳು ಇಲ್ಲಿದೆ.

ಹಿರಿಯ ನಾಗರಿಕರು, ಮಕ್ಕಳು ಮತ್ತು ಮಹಿಳೆಯರು ದೇವಾಲಯಕ್ಕೆ ತೆರಳಬೇಕು ಮತ್ತು ದೇವರ ದರ್ಶನ ಪಡೆಯಬೇಕು ಆಭಿಲಾಶೆ ಹೊಂದಿರುತ್ತಾರೆ ಅದರೆ ನಾನ ರೀತಿಯ ಆನಾನುಕೂಲತೆಯಿಂದ ಹೋಗಲು ಸಾಧ್ಯವಾಗಿರುವುದಿಲ್ಲ .


ದೈವ ಭಕ್ತರಾದ ಇರುವರಿಗೆ ರಾಜ್ಯದ ತೀರ್ಥಸ್ಥಳ ಉಚಿತವಾಗಿ ಕಳುಹಿಸಬೇಕು ಎಂದು ನಿರ್ಧಾರಿಸಿ ರಾಜಾಜಿನಗರ ಏಳು ವಾರ್ಡ್ ನಲ್ಲಿರುವ ನಿವಾಸಿಗಳಿಗೆ ಸುವರ್ಣ ಅವಕಾಶ ಮಾಡಿಕೊಡಲಾಗಿದೆ.

ಇಂದು 2000ಸಾವಿರ ಭಕ್ತರಿಗೆ ತೀರ್ಥಸ್ಥಳಗಳಿಗೆ ತೆರಳಲಿದ್ದಾರೆ.

ಈ ಹಿಂದೆ ಮೂರು ಬಾರಿ ಅಂದಾಜು 8000ಸಾವಿರ ಭಕ್ತರಿಗೆ ತೀರ್ಥಸ್ಥಳ ಪ್ರವಾಸ ಕಳುಹಿಸಿಕೊಡಲಾಗಿದೆ.

ದೇವರು ದರ್ಶನ ಮಾಡಬೇಕು ಎಂಬ ಅವರ ಆಶಯವನ್ನು ಈಡೇರಿಸಿದ ಪುಣ್ಯದ ಕೆಲಸ ಮಾಡಿದ ಆತ್ಮತೃಪ್ತಿ, ಸಂತೋಷವಿದೆ ಎಂದು ಹೇಳಿದರು.

Post a Comment

0 Comments

Ad Code

Responsive Advertisement