Ticker

6/recent/ticker-posts

Ad Code

Responsive Advertisement

ಪತ್ರಕರ್ತ ಜಾನ್ ಪ್ರೇಮ್ ಅವರಿಗೆ ರಾಷ್ಟ್ರೀಯ ಮಾನವೀಯ ಪ್ರಶಸ್ತಿ

ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಮಾನವ ಹಕ್ಕುಗಳು ಹಾಗೂ ಭ್ರಷ್ಟಾಚಾರ ವಿರೋಧಿ ಸಂಸ್ಥೆ- ನವದೆಹಲಿ, ಪತ್ರಕರ್ತರು ಹಾಗೂ ಸಂಪಾದಕರು ಜಾನ್ ಪ್ರೇಮ್ ಅವರಿಗೆ ರಾಷ್ಟ್ರೀಯ ಮಾನವೀಯ ಪ್ರಶಸ್ತಿ-2022 ದಿನಾಂಕ  10-12-22 ರಂದು ಬೆಂಗಳೂರಿನಲ್ಲಿ ನೀಡಲಾಯಿತು.


2022 ಸಾಲಿನ ಈ ಪ್ರಶಸ್ತಿಗೆ ಇವರನ್ನು ಆಯ್ಕೆ ಮಾಡಲಾಗಿದ್ದು, ಸಮಾಜ ಸೇವೆ, ಪತ್ರಿಕೋದ್ಯಮದಲ್ಲಿ, ಕಾನೂನು ಅರಿವು ಕಾರ್ಯಕ್ರಮಗಳು, ಕೋವಿಡ್ 19 ರ ಸಂದರ್ಭದಲ್ಲಿ ಕೋವಿಡ್ ಕುರಿತು ಜಾಗೃತಿ ಮೂಡಿಸಿರುವುದು, ಸಂತ್ರಸ್ತರಿಗೆ ಆಹಾರ ಸಾಮಗ್ರಿಗಳು, ಮಾಸ್ಕ್, ಸ್ಯಾನಿಟೈಸರ್ ನೀಡಿ ಸಮರ್ಪಿತವಾಗಿ  ಸೇವೆ ಮಾಡಿರುವುದನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗಿದೆ.

ಡಿಸೆಂಬರ್ 10ರಂದು ಎಸ್ ಜೆ ಆರ್ ಲಾ ಕಾಲೇಜ್ ಬೆಂಗಳೂರಿನಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

 ಕಾರ್ಯಕ್ರಮವನ್ನು ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಾಧೀಶರುಗಳಾದ   ಶ್ರೀ. ಎನ್ ಸಂತೋಷ್ ಹೆಗ್ಡೆ ರವರು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಹಿರಿಯ ಸಿವಿಲ್ ನ್ಯಾಯಾಧೀಶರು ಶ್ರೀ. ಪುರುಷೋತ್ತಮ್ ಎಂ ಹಾಗೂ ಕಾರ್ಯಕ್ರಮದ ಅಧ್ಯಕ್ಷತೆಯನ್ನು HRACF ರಾಷ್ಟ್ರೀಯ ಅಧ್ಯಕ್ಷರು ಡಾ|| ಮೋಹನ್ ರಾವ್ ನಾಲ್ವಡೆ ನೇತೃತ್ವದಲ್ಲಿ ನಡೆಸಲಾಯಿತು.

Post a Comment

0 Comments

Ad Code

Responsive Advertisement