Ticker

6/recent/ticker-posts

Ad Code

Responsive Advertisement

ಹೈಟೆನ್ಷನ್ ವಿದ್ಯುತ್ ತಗಲಿ ಇಬ್ಬರು ಬಾಲಕ ಸಾವು:ಸೂಕ್ತ ಕ್ರಮ ಹಾಗೂ ಮೃತಪಟ್ಟ ಕುಟುಂಬಕ್ಕೆ ಒತ್ತಾಯ

 ಹೈಟೆನ್ಷನ್ ವಿದ್ಯುತ್ ತಗಲಿ ಇಬ್ಬರು ಬಾಲಕ ಸಾವು:ಸೂಕ್ತ ಕ್ರಮ ಹಾಗೂ ಮೃತಪಟ್ಟ ಬಾಲಕರ ಕುಟುಂಬಕ್ಕೆ 25ಲಕ್ಷ ರೂಪಾಯಿ ನೀಡಬೇಕು ಎಂದು ಒತ್ತಾಯ*

ಬಿ.ಬಿ.ಎಂ.ಪಿ.ಮತ್ತು ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದಿಂದ ನಂದಿನಿ ಲೇಔಟ್ ವಾರ್ಡ್ ನಂಬರ್ 44 ವಿಜಯಾನಂದ ನಗರ 1ನೆ ಮೇನ್, ಎರಡನೇ ಅಡ್ಡ ರಸ್ತೆ, ಮಹಾಲಕ್ಷ್ಮಿ ಲೇಔಟ್ ನಲ್ಲಿ

ವಿದ್ಯುತ್ ಕಂಬಿಗೆ ಸಿಲುಕಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಎರಡು ಮಕ್ಕಳು ಚಿಕಿತ್ಸೆ ಫಲಕಾರಿಯಾಗದೆ   ನಾಲ್ಕನೇ ತರಗತಿ ಓದುತ್ತಿದ್ದ ಸುಪ್ರೀತ್ ಮೃತಪಟ್ಟಿರುತ್ತಾನೆ.

ನಂತರ ಇನ್ನೊಂದು ಮಗು  11 ವರ್ಷದ ಚಂದ್ರು  ಮೃತಪಟ್ಟಿರುತ್ತಾನೆ. ಈ ಎರಡು ಸಾವಿಗೆ ಕೆಇಬಿ ಮತ್ತು ಬಿಬಿಎಂಪಿ ಅಧಿಕಾರಿಗಳು ನೇರ ಹೊಣೆಯಾಗಿರುತ್ತಾರೆ.

ಇವರ ವಿರುದ್ಧ ಜಯ ಕರ್ನಾಟಕ ಜನಪರ ವೇದಿಕೆ ವತಿಯಿಂದ ಪ್ರತಿಭಟನೆ ಹಮ್ಮಿಕೊಂಡಿದ್ದರು.

ಜಯಕರ್ನಾಟಕ ಜನಪರ ವೇದಿಕೆ ರಾಜ್ಯ ಮಹಾ ಪ್ರಧಾನ ಸಂಚಾಲಕ ಶೇ.ಭೋ.ರಾಧಕೃಷ್ಣ, ನಗರ ಜಿಲ್ಲಾಧ್ಯಕ್ಷರಾದ ಜೆ.ಶ್ರೀನಿವಾಸ್, ರಾಜ್ಯ ಮಹಿಳಾ ಉಪಾಧ್ಯಕ್ಷರಾದ ಜಿ.ಎಸ್.ಪುಷ್ಪಲತಾ, ರಾಜ್ಯ,ಜಿಲ್ಲಾ ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.


ಮಕ್ಕಳ ಸಾವಿಗೆ ಕೇವಲ ಬೆಸ್ಕಾಂ ಅಷ್ಟೇ ಕಾರಣವಲ್ಲ..

ಬಿಬಿಎಂಪಿ ಕೂಡ ಮಕ್ಕಳ ಸಾವಿಗೆ ಕಾರಣ..

ಹೈಟೆನ್ಷನ್ ವಯರ್ ಕೆಳಗೆ ಮನೆ ಕಟ್ಟಲು ಬಿಬಿಎಂಪಿ ಹೇಗೆ ಪ್ಲಾನ್ ಕೊಡ್ತು.ಬೆಸ್ಕಾಂ ಹೇಗೆ ವಿದ್ಯುತ್ ಸಂಪರ್ಕ ನೀಡ್ತು..

ಇವೆಲ್ಲಾ ರೂಲ್ಸ್ ಉಲ್ಲಂಘನೆಯೆ ಮಕ್ಕಳ ಸಾವಿಗೆ ಕಾರಣ..

ಈ ಅಧಿಕಾರಿಗಳ ವಿರುದ್ಧ ಕ್ರಮವಾಗಬೇಕು..


ಮಕ್ಕಳ ಸಾವಿಗೆ ನ್ಯಾಯ ಸಿಗಬೇಕು..

ಪ್ರತಿಭಟನೆಯಲ್ಲಿ ಮಕ್ಕಳ ಪೋಷಕರು ಭಾಗಿಯಾಗಿದ್ದರು.

Post a Comment

0 Comments

Ad Code

Responsive Advertisement