ಕೊಳ್ಳೇಗಾಲ ಸುದ್ದಿ: ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಕೊಳ್ಳೇಗಾಲ ವಲಯ ಪರಮ ಪೂಜ್ಯ ರಾಜರ್ಷಿ ಡಾ. ವೀರೇಂದ್ರ ಹೆಗಡೆಯವರು ಮತ್ತು ಹೇಮಾವತಿ ಅಮ್ಮನವರ ಆಶೀರ್ವಾದಗಳೊಂದಿಗೆ ಒಕ್ಕೂಟದ ಪದಾಧಿಕಾರಿಗಳ ಪದಗ್ರಹಣ ಹಾಗು ಸಾಧನಾ ಸಮಾವೇಶ ಕಾರ್ಯಕ್ರಮವನ್ನ ಪಟ್ಟಣದ ನ್ಯಾಷಿನಲ್ ಶಾಲಾ ಆವರಣದ ಮಾತೆ ಸಾವಿತ್ರಿಬಾಯಿ ಪುಲೆ ರಂಗಮಂದಿರದಲ್ಲಿ ಆಯೋಜಿಸಲಾಗಿತ್ತು,
ಈ ಕಾರ್ಯಕ್ರಮವನ್ನ ಕೊಳ್ಳೇಗಾಲ ಶಾಸಕ ಎನ್. ಮಹೇಶ್ ಹಾಗೂ ಮುಡಿಗುಂಡ ಮಠದ ಶ್ರೀಕಂಠಸ್ವಾಮಿಗಳು ಉದ್ಘಾಟಿಸಿದರು,
ನಂತರ ಧರ್ಮಸ್ಥಳ ಸಂಘದ ಕೊಳ್ಳೇಗಾಲ ಘಟಕದ ಯೋಜನಾಧಿಕಾರಿ ಪುರುಷೋತ್ತಮ್ ರವರು ಮಾತನಾಡಿ
ಶ್ರೀ ಕ್ಷೇತ್ರ ಧರ್ಮಸ್ಥಳದ ರಾಜರ್ಷಿ ಡಾ. ವೀರೇಂದ್ರ ಹೆಗಡೆಯವರ ಮಾರ್ಗದರ್ಶನದಲ್ಲಿ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಮುಖಾಂತರ
ಹಲವಾರು ಯೋಜನೆಗಳನ್ನ ಅಭಿವೃದ್ಧಿ ಪಡಿಸುತ್ತ ಬಡತನದಿಂದ ಕಂಗೆಟ್ಟಿರುವ ಬಡವರಿಗೆ ಸಹಾಯ ಹಸ್ತವನ್ನು ನೀಡುತ್ತ ಬಡವರ ಅಭಿವೃದ್ಧಿಗಾಗಿ ಸಾಲ ಸೌಲಭ್ಯಗಳನ್ನು ಒದಗಿಸುತ್ತ ಬರುತ್ತಿದೆ, ಈ ಸಂಘಟನೆ ಸುಮಾರು 40 ವರ್ಷಗಳಿಂದ ಸ್ತ್ರೀ ಸಬಲೀಕರಣ ಮತ್ತು ಕುಟುಂಬಗಳ ಸ್ವಾವಲಂಬನೆ ಗೆ ಹಲವಾರು ತರಭೇತಿಗಳನ್ನು ಕೊಡಿಸಿ ಸ್ವಾವಲಂಬನೆಗೆ ಸಾಲ ಸೌಲಭ್ಯಗಳನ್ನು ಒದಗಿಸಿ ನಿರಂತರವಾಗಿ ಸೇವೆಯನ್ನು ಮಾಡುತ್ತಾ ಬರುತ್ತಿದೆ, ಕಳೆದ ಎರಡು ವರ್ಷ ಕೊರೋನ ಕಾರಣದಿಂದ ಸಂಸ್ಥೆಯ ಕಾರ್ಯ ಚಟುವಟಿಕೆ ಸ್ವಲ್ಪ ಮಟ್ಟಿಗೆ ಸ್ಥಗಿತಗೊಂಡಿದ್ದರು ಸಹ ನಂತರ ದಿನಗಳಲ್ಲಿ ಕಾರ್ಯ ಚಟುವಟಿಕೆಯು ಪ್ರಾರಂಭ ಮಾಡಿ ಸಂಕಷ್ಟದಲ್ಲಿರುವವರಿಗೆ ಸಾಲ ಸೌಲಭ್ಯಗಳನ್ನು ಕೊಡಿಸಿ ಸಹಕಾರವನ್ನು ನೀಡಲಾಗಿದೆ,
ಎಲ್ಲ ಸಂದರ್ಭದಲ್ಲಿಯು ಸಹ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಂಘಟನೆ ಜನರ ಜೊತೆ ಇದ್ದು ನಿರಂತರವಾಗಿ ಸೇವಾ ಕಾರ್ಯದಲ್ಲಿ ತೊಡಗಿದೆ ಎಂದರು,
ನಂತರ ಶಾಸಕ ಎನ್. ಮಹೇಶ್ ರವರು ಮಾತನಾಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ
ಯೋಜನೆ ಕೊಳ್ಳೇಗಾಲಕ್ಕೆ ಬಂದು ಸುಮಾರು 10 ವರ್ಷಗಳು ಆಗಿದೆ ಇಲ್ಲಿಯವರೆಗೆ 2500 ಸಂಘಗಳು 25 ಸಾವಿರ ಸದಸ್ಯರನ್ನು ಸೇರ್ಪಡೆ ಮಾಡಿದೆ ಇದರ ಮೂಲ ಉದ್ದೇಶ ಪ್ರತಿಯೊಂದು ಕುಟುಂಬವು ಸ್ವಾವಲಂಬಿಯಾಗಬೇಕು ಎನ್ನುವುದು ಒಂದೊಂದು ಕುಟುಂಬವನ್ನ ಸ್ವಾವಲಂಬಿ ಮಾಡುವುದು ಸರ್ಕಾರದಿಂದ ಸಾಧ್ಯವಿಲ್ಲ ಸರ್ಕಾರದ ಜೊತೆ ಇಂತಹ ಖಾಸಗಿ ಸಂಘಗಳು ಕೈ ಜೋಡಿಸಿ ಬಡವರನ್ನು ಸ್ವಾವಲಂಬಿ ಮಾಡುವುದಕ್ಕೆ ಶ್ರಮಿಸಬೇಕು, ಈಗಾಗಲೇ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘಟನೆಯಿಂದ ಹಿಡಿ ಜಿಲ್ಲೆಯಲ್ಲಿ 300 ಕೋಟಿ ಸಾಲವನ್ನ ನೀಡಲಾಗಿದೆ ವಸೂಲಾತಿ ಆಗಬೇಕಾಗಿರುವುದು 400 ಕೋಟಿ ಆಗಿದೆ, ಇದು ಬಡವರನ್ನ ಸ್ವಾವಲಂಬಿಗಳಾಗಿ ಮಾಡಿ ಅಭಿವೃದ್ಧಿ ಪಡಿಸುವುದಾಗಿದೆ,
ಹಳ್ಳಿಗಳ್ಳಿನ ಬಡವರು ಸ್ವಾವಲಂಬಿಗಳಾಗಿ ಅಭಿವೃದ್ಧಿ ಹೊಂದಬೇಕಾದರೆ ಇಂತಹ ಸಂಘಟನೆಗಳ ಅವಶ್ಯಕತೆ ಬಹಳ ಮುಖ್ಯವಾಗಿದೆ,
ಒಂದು ಸಂಘಟ ಣೆಯನ್ನು ಮಾಡಿ ಜನರನ್ನ ಒಗ್ಗೂಡಿಸುವುದು ತುಂಬಾ ಕಷ್ಟ ಇದೆ ಆದರೂ ಸಹ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜವಾಬ್ದಾರಿಯುತವಾಗಿ ಇಷ್ಟೊಂದು ಸಂಖ್ಯೆಯಲ್ಲಿ ಸದಸ್ಯರನ್ನ ಸೇರಿಸಿ ಸಂಘಟನೆಯನ್ನ ಅಭಿವೃದ್ಧಿ ಪಡಿಸಿದ್ದಾರೆ, ಇದಕ್ಕೆಲ್ಲ ಕಾರಣ ಶ್ರೀ ಕ್ಷೇತ್ರದ ಡಾ. ವೀರೇಂದ್ರ ಹೆಗಡೆಯವರು ಅವರ ಈ ಸೇವೆಗೆ ನಾನು ಕೃತಜ್ಞತೆಯನ್ನು ಅರ್ಪಿಸುತ್ತೇನೆ, ಎಂದರು.
ಈ ಸಂದರ್ಭದಲ್ಲಿ ಕೊಳ್ಳೇಗಾಲ ಶಾಸಕ ಎನ್. ಮಹೇಶ್ ನಗರಸಭೆ ಅಧ್ಯಕ್ಷೆ ರೇಖಾ ರಮೇಶ್, ನಗರಸಭೆ ಉಪಾಧ್ಯಕ್ಷೆ ಸುಶೀಲ ಶಾಂತರಾಜು, ಮುಡಿಗುಂಡ ಮನ್ನಿ ರಂಜನ ವಿರಕ್ತ ಮಠದ ಶ್ರೀಕಂಠಸ್ವಾಮೀಜಿಗಳು, ನಗರ ಸಭೆ ಸದಸ್ಯ ನಾಸಿರ್ ಷರೀಪ್, ಭಾಗ್ಯ, ಕ್ಷೆ,ಧ. ಗ್ರಾ.ಯೋ. ಲತಾ ಬಂಗೇರ, ಕೊಳ್ಳೇಗಾಲ ಮಹಿಳಾ ಸಾಂತ್ವನ ಕೇಂದ್ರದ ರಾಜೇಶ್ವರಿ, ಟೌನ್ ಸಬ್ ಇನ್ಸ್ಪೆಕ್ಟರ್ ವಿ. ಚೇತನ್,

0 Comments