Ticker

6/recent/ticker-posts

Ad Code

Responsive Advertisement

ಕುವೆಂಪು ಪೂರ್ಣ ದೃಷ್ಟಿ ಇಂದಿಗೆ ಹೆಚ್ಚು ಪ್ರಸ್ತುತ: ಪ್ರೊ.ಕೆ.ಸಿ.ಶಿವಾರೆಡ್ಡಿ

ಬೆಂಗಳೂರುದಿನಾಂಕ ೨೯ ಡಿಸಂಬರ್‌, ೨೦೨೨

ಕುವೆಂಪು ಅವರ ಪೂರ್ಣದೃಷ್ಟಿ ಇಂದಿಗೆ ಹೆಚ್ಚು ಪ್ರಸ್ತುತ” ಎಂದ ಹೇಳಿದ ವಿಮರ್ಶಕ ಪ್ರೊಕೆ.ಸಿಶಿವಾರೆಡ್ಡಿಯವರುʼಅವರ ಕನ್ನಡ ಪರ ಚಿಂತನೆಗಳು ಕೇವಲ ಭಾವನಾತ್ಮಕ ನೆಲೆಯಲ್ಲಿ ಇಲ್ಲದೆ ಅದು ಚಿಂತನಾತ್ಮಕ ನೆಲೆಯಲ್ಲಿದ್ದು ಇಂದು ಕನ್ನಡ ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ರೂಪದಲ್ಲಿದೆ” ಎಂದು ಗುರುತಿಸಿದರು.

ಅವರು ಕನ್ನಡ ಸಾಹಿತ್ಯ ಪರಿಷತ್ತು ಶ್ರೀ ಕೃಷ್ಣರಾಜ ಪರಿಷತ್ತಿನ ಮಂದಿರದಲ್ಲಿ ಏರ್ಪಡಿಸಿದ್ದ ಕುವೆಂಪು ಜನ್ಮದಿನದ ಕಾರ್ಯಕ್ರಮ ʻನೆನಪಿನ ದೋಣಿಯಲ್ಲಿʼ ಯಲ್ಲಿ ಮಾತನಾಡುತ್ತಿದ್ದರುಅನಿಕೇತನದ ಕಲ್ಪನೆಯನ್ನು ನೀಡಿದ ಕುವೆಂಪು ಬಹಿರಂಗದಲ್ಲಿ ಮಾತ್ರವಲ್ಲದೆ ಅಂತರಂಗದಲ್ಲಿಯೂ ಎಲ್ಲಿಗೂ ಸೀಮಿತವಾಗಿದ ಬೆಳೆಯುವ ವಿಸ್ತಾರವನ್ನು ಸೂಚಿಸಿದ್ದರುಕನ್ನಡವನ್ನು ಎಲ್ಲಾ ರಂಗದಲ್ಲಿಯೂ ಅನುಷ್ಠಾನಕ್ಕೆ ತರುವ ಕುರಿತು ಸ್ಪಷ್ಟ ಚಿಂತನೆಗಳನ್ನು ಹೊಂದಿದ್ದ ಅವರು ಅತಿ ಕಡಿಮೆ ಕಾಲದಲ್ಲಿ ಪಠ್ಯಪುಸ್ತಕಗಳನ್ನು ಸಿದ್ಧಪಡಿಸಿ ಕನ್ನಡ ಮಾಧ್ಯಮವನ್ನು ಜಾರಿಗೆ ತರಲು ಪ್ರಯತ್ನಿಸಿದ್ದರುಅವರ ಮೇಲ್ಪಂಕ್ತಿಯನ್ನು ಅನುಸರಿಸಿದ್ದರೆ ಕನ್ನಡದ ಸ್ಥಿತಿ ಈ ರೀತಿಯನ್ನು ತಲುಪುತ್ತಿರಲಿಲ್ಲ ಎಂದು ಅವರ ವಿಷಾದಿಸಿದರು.

ಕುವೆಂಪು ಅವರ ಸ್ತ್ರೀ ಸಂವೇದನೆ ಕುರಿತು ಮಾತನಾಡಿದ ಡಾಮಹೇಶ್ವರಿ ಜಿ.ಬಿ.ಯವರುಕುವೆಂಪು ಅವರು ಗಂಡು-ಹೆಣ್ಣಿನ ಸಮಾನತೆಯನ್ನು ಪ್ರತಿಪಾದಿಸಿದ್ದರುತಮ್ಮ ಪತ್ನಿಯ ಕುರಿತೇ ಅವರು ರಚಿಸಿದ ಅವರ ಕವಿತೆಗಳು ಅವರ ಉನ್ನತ ಭಾವಗಳಿಗೆ ನಿದರ್ಶನ ಎಂದರುತಾಯ್ತನದ ಕುರಿತೂ ಸಾಕಷ್ಟು ಸೂಕ್ಷ್ಮವಾಗಿ ಸ್ಪಂದಿಸಿದ ಕುವೆಂಪು ಅವರು ಗಂಡಿನಲ್ಲಿನ ಹೆಣ್ತನ ಮತ್ತು ಹೆಣ್ಣಿನಲ್ಲಿನ ಗಂಡುತನದ ಕುರಿತು ಬಿಂಬಿಸಿದ್ದರು ಎಂದು ಗುರುತಿಸಿದರು.

ಶ್ರೀ ಗಂಗನಹಳ್ಳಿ ಶಿವಲಿಂಗಯ್ಯನವರು ಕುವೆಂಪು ಅವರ ಶ್ರೀರಾಮಾಯಣ ದರ್ಶನಂ ಅವರ ಮಹಾಕಾವ್ಯವನ್ನು ವಾಚನ ಮಾಡಿದರುಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ನೇ.ರಾಮಲಿಂಗ ಶೆಟ್ಟಿಯವರು ಎಲ್ಲರನ್ನೂ ಸ್ವಾಗತಿಸಿದರುಪ್ರಕಟಣಾ ವಿಭಾಗದ ಸಂಚಾಲಕರಾದ ಎಸ್ನಯನಾ ವಂದನೆಗಳನ್ನು ಸಲ್ಲಿಸಿದರೆ ಎನ್.ಎಸ್ಶ್ರೀಧರ ಮೂರ್ತಿ ಕಾರ್ಯಕ್ರಮವನ್ನು ನಿರೂಪಿಸಿದರುಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿಯ ಸದಸ್ಯರಾದ ಡಾಪದ್ಮಿನಿ ನಾಗರಾಜ್‌  ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

-     ಎನ್‌ .ಎಸ್ಶ್ರೀಧರ ಮೂರ್ತಿ

ಪ್ರಕಟಣಾ ವಿಭಾಗದ ಸಂಚಾಲಕರು

ಕನ್ನಡ ಸಾಹಿತ್ಯ ಪರಿಷತ್ತು

Post a Comment

0 Comments

Ad Code

Responsive Advertisement