Ticker

6/recent/ticker-posts

Ad Code

Responsive Advertisement

ಕೊಳ್ಳೇಗಾಲ ತಾಲ್ಲೂಕಿನ ವಿವಿಧ ಸಂಘ ಸಂಸ್ಥೆಗಳ ನೇತೃತ್ವದಲ್ಲಿ ಕುಡಿತ ಬಿಡಿಸುವ ಉಚಿತ ಶಿಬಿರ

ಕೊಳ್ಳೇಗಾಲ ಸುದ್ದಿ : ಜಗದ್ಗುರು ಶ್ರೀ, ವೀರಸಿಂಹಾಸನ ಮಹಾಸಂಸ್ಥಾನ ಮಠ ಸುತ್ತೂರು ಕ್ಷೇತ್ರ,,ಜೆ.ಎಸ್. ಎಸ್. ಮಹಾವಿದ್ಯಾಪೀಠ ಮೈಸೂರು, ಇವರ ಸಹಯೋಗದಲ್ಲಿ ಕೊಳ್ಳೇಗಾಲ ತಾಲ್ಲೂಕಿನ ವಿವಿಧ ಸಂಘ ಸಂಸ್ಥೆಗಳ ನೇತೃತ್ವದಲ್ಲಿ ಕುಡಿತ ಬಿಡಿಸುವ ಉಚಿತ ಶಿಬಿರ ದ ಸಮಾರೋಪ ಸಮಾರಂಭವನ್ನ ಪಟ್ಟಣದ ಮುಡಿಗುಂಡಂ ರಸ್ತೆಯಲ್ಲಿರುವ ಭ್ರಮಾರಂಭ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿತ್ತು,

ಕೊಳ್ಳೇಗಾಲ ಮಾಜಿ ಶಾಸಕರಾದ ಎ. ಆರ್. ಕೃಷ್ಣಮೂರ್ತಿ, ಜಿ.ಎನ್. ನಂಜುಂಡ ಸ್ವಾಮಿ ರವರು ಉದ್ಘಾಟಿಸಿದರು, ನಂತರ ವೀರಶೈವ ಲಿಂಗಾಯತ ನೌಕರರ ಬಸವ ಸೇವಾ ಸಮಿತಿ, ಶ್ರೀ ಬಸವ ಸೇವಾ ಪತ್ತಿನ ಸಹಕಾರ ಸಂಘ ಗಳ  ಬಸವ ಮಹಮನೆ ಟ್ರಸ್ಟ್ ನ ಕ್ಯಾಲೆಂಡರ್ ನ್ನು ಬಿಡುಗಡೆ ಮಾಡಿದರು,

ಕಾರ್ಯಕ್ರಮವನ್ನು ಉದ್ಘಾಟಿಸಿ ಎ. ಆರ್. ಕೃಷ್ಣಮೂರ್ತಿರವರು ಮಾತನಾಡಿ  ಶ್ರೀ ಕ್ಷೇತ್ರ ಸುತ್ತೂರು ಒಂದು ಇತಿಹಾಸ ಪ್ರಸಿದ್ದಿ ಪಾರಂಪರಿಕ ಕ್ಷೇತ್ರ,

ಶ್ರೀ ಕ್ಷೇತ್ರ ಲಕ್ಷಾಂತರ ಮಕ್ಕಳಿಗೆ ಶಿಕ್ಷಣವನ್ನು ನೀಡಿ ಅವರ ಬದುಕಿಗೆ ದಾರಿ ದೀಪವಾಗಿದೆ ಅಲ್ಲದೆ ಸಾಮಾಜಿಕ ಸೇವೆಗಳನ್ನು ಮಾಡುತ್ತ ಜನತೆಯ ಒಳೆತಿಗಾಗಿ ಹಲವಾರು ಸೇವೆಗಳನ್ನು ಮಾಡುತ್ತಿದೆ ಅದರಲ್ಲಿ ಈ ಕುಡಿತ ಬಿಡಿಸುವ ಶಿಬಿರ ಕೂಡ ಒಂದು ಈ ಶಿಬಿರ ಅತ್ಯಂತ ಮಹತ್ವವಾದದ್ದು ಆಗಿದೆ ಯಾಕೆಂದರೆ ಗ್ರಾಮೀಣ ಭಾಗಗಳಲ್ಲಿ ಎಷ್ಟೋ ಕುಟುಂಬಗಳು ಈ ಕುಡಿತದ ಚಟದಿಂದ ಬೀದಿಪಾಲಾಗಿರುವ, ಎಷ್ಟೋ ಕುಟುಂಬಗಳು ಬಡತನದ ಕೂಪಕ್ಕೆ ಸಿಲುಕಿ ಬದುಕನ್ನ ನರಕ ಮಾಡಿಕೊಂಡಿವೆ, ಎಷ್ಟೋ ಮಕ್ಕಳು ತಮ್ಮ ಹಿರಿಯರ ಕುಡಿತದ ಚಟದಿಂದ ಉತ್ತಮ ಶಿಕ್ಷಣ ಪಡೆಯಲು ಆಗದೆ ಜೀವನ ಮಾರ್ಗಗಳೇ ಇಲ್ಲದೆ ಮಕ್ಕಳ ತಮ್ಮ ಭವಿಷ್ಯವನ್ನು ಕಳೆದುಕೊಂಡಿವೆ,

ಎಷ್ಟೋ ಸಂಸಾರಗಳು ಜೀವನದ ಸ್ವಾರಷ್ಯವನ್ನೇ ಕಳೆದುಕೊಂಡಿವೆ,

ನಿಜವಾಗಿಯೂ ಹೇಳಬೇಕಾದರೆ ಗ್ರಾಮೀಣ ಭಾಗದ ಜನ ಬಡತನದ ಕೂಪದಿಂದ ಹೊರಬರಲಾಗದೆ ಇರುವುದು  ಕುಡಿತದ ಚಟದಿಂದ,

ಕುಡಿತದ ಚಟಕ್ಕೆ ದಾಸರಾದವರು ತಮ್ಮ ಮನೆ ಮಠ ಮಕ್ಕಳು ಮರಿ ಯಾವುದರ ಮೇಲು ಜವಾಬ್ದಾರಿ ಇಲ್ಲದೆ ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುವುದರ ಜೊತೆ ಅನಾರೋಗ್ಯ ಪೀಡಿತರಾಗಿ ಮಕ್ಕಳನ್ನು ಕಷ್ಟಕ್ಕೆ ಸಿಲುಕಿಸುತ್ತಿದ್ದಾರೆ, ಆದ್ದರಿಂದ ಗ್ರಾಮೀಣ ಭಾಗದ ಮಹಿಳಾ ಸಂಘಟನೆಗಳು  ಕುಡುತದ ಚಟದಿಂದ ತಮ್ಮವರನ್ನ ಕಾಪಾಡಿಕೊಳ್ಳಲು, ಇಂತಹ ಶಿಬಿರಗಳನ್ನ ನಡೆಸಲು ಮೊರೆ ಹೋಗುತ್ತಿದ್ದಾರೆ, ಇದನ್ನ ಮನಗಂಡ ಶ್ರೀ ಕ್ಷೇತ್ರ ಸುತ್ತೂರು ಮಠದ ಶ್ರೀಗಳಾದ ಶ್ರೀಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು  ಜನತೆಯ ಉದ್ದಾರಕ್ಕಾಗಿ ಇಂತಹ ಮಹತ್ವಪೂರ್ಣವಾದ ಶಿಬಿರವನ್ನ ಆಯೋಜಿಸಿದ ನೂರಾರು ಜನರು ಕುಡಿತದ ಚಟವನ್ನ ಬಿಡಿಸಿ ಅವರ ಬಾಳಿಗೆ ಹೊಸ ಬೆಳಕನ್ನ ಕೊಟ್ಟಿದ್ದಾರೆ,

ಇಂತಹ ಶಿಬಿರಗಳು ಇನ್ನು ಹೆಚ್ಚಿನ ಮಟ್ಟದಲ್ಲಿ ನಡೆಯಬೇಕು, ಯಾಕೆಂದರೆ ಗ್ರಾಮೀಣ ಭಾಗದ ಲಕ್ಷಾಂತರ ಜನ ಕುಡಿತದ ಚಟಕ್ಕೆ ದಾಸರಾಗಿದ್ದಾರೆ, ಅವರನ್ನೆಲ್ಲ ಕುಡಿತದ ಚಟದಿಂದ ಬಿಡುಗಡೆಗೊಳಿಸಿದರೆ ಮಹಿಳೆಯರಿಗೆ ಹೊಸ ಜೀವನವನ್ನ ಕೊಟ್ಟಂತಾಗುತ್ತದೆ,

ಸುತ್ತೂರು ಶ್ರೀಗಳು ಬಹಳ ಮುಂದಾಲೋಚನೆ ಮಾಡಿ ಇಂತಹ ಶಿಬಿರವನ್ನ ಆಯೋಜನೆ ಮಾಡಿದೆ ಇದರಿಂದ ಜನತೆಗೆ ತುಂಬಾ ಉಪಯೋಗವಾಗಲಿದೆ ಈಗಾಗಲೇ ಸಾಕಷ್ಟು ಜನ ಈ ಶಿಬಿರದ ಪ್ರಯೋಜನವನ್ನ ಪಡೆದುಕೊಂಡಿದ್ದಾರೆ ಮುಂದೆಯೂ ಕೂಡ ಯಾರ್ಯಾರು ಕುಡಿತದಿಂದ ವಿಮುಕ್ತಿ ಹೊಂದಬೇಕು ಎಂಬ ಅಸೆ ಇರುವವರು ಇಂತಹ ಶಿಬಿರಗಳಲ್ಲಿ ಪಾಲ್ಗೊಂಡು ತಮ್ಮ ಸಮಸ್ಯೆಯನ್ನ ಪರಿಹರಿಸಿಕೊಳ್ಳಬೇಕು ಎಂದರು,

ಈ ಸಂದರ್ಭದಲ್ಲಿ ಕೊಳ್ಳೇಗಾಲ ಮಾಜಿ ಶಾಸಕ ಜಿ.ಎನ್. ನಂಜುಂಡಸ್ವಾಮಿ, ನಾಗಸುಂದರಮ್ಮ ಜಗದೀಶ್,

ತೊಟೇಶ್, ವೀರಭದ್ರಸ್ವಾಮಿ, ಲಯನ್ ನಾಗರಾಜು, ಹಾಗೂ ಇನ್ನಿತರರು ಇದ್ದರು

Post a Comment

0 Comments

Ad Code

Responsive Advertisement