Ticker

6/recent/ticker-posts

Ad Code

Responsive Advertisement

*ಗಡಿನಾಡ ಕನ್ನಡಿಗರ ಹಿತರಕ್ಷಣೆಗೆ ಬದ್ಧ- ಸೋಮಶೇಖರ್*

ಬೆಂಗಳೂರು:   ಸಂಕಷ್ಟದಲ್ಲಿರುವ ಗಡಿನಾಡ ಕನ್ನಡಿಗರ ಏಳಿಗೆ ಮತ್ತು ಪ್ರಗತಿಗೆ ರಾಜ್ಯ ಸರಕಾರ ಕಟಿಬದ್ಧವಾಗಿದೆ ಎಂದು ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ  ಡಾ.ಸಿ.ಸೋಮಶೇಖರ್ ಅವರು ತಿಳಿಸಿದರು*.

ಬೆಸ್ಕಾಂ ನಿಗಮ ಕಾರ್ಯಲಯ ಆವರಣದಲ್ಲಿ ಬುಧವಾರ (ನವೆಂಬರ್ 30) ಹಮ್ಮಿಕೊಂಡಿದ್ದ 67ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಸಮರ್ಪಕ ಮೂಲಭೂತ ಸೌಕರ್ಯ ಇಲ್ಲದ ಕಾರಣ ಗಡಿ ಭಾಗದ ಜನರಲ್ಲಿ ಆಕ್ರೋಶವಿದೆ. ರಾಜ್ಯ ಸರಕಾರ ಗಡಿ ಭಾಗದ ಗ್ರಾಮಗಳಲ್ಲಿ ಶಾಲೆ ಗಳನ್ನು ತೆರೆಯಲು  ನೆರವು ನೀಡುತ್ತಿರುವುದು ಸ್ವಾಗತರ್ಹವಿಚಾರವಾಗಿದೆ ಎಂದರು. 

ಕರ್ನಾಟಕದ ಗಡಿ ಭಾಗದ ಜಿಲ್ಲೆಯಾದ ಕಾಸರಗೋಡು ಮತ್ತು ಮಹಾರಾಷ್ಟ್ರದ ಜತ್ತಾ ಮತ್ತು ಕೊಲ್ಲಾಪುರದಲ್ಲಿರುವ ಕನ್ನಡಿಗರ ಮನಸ್ಸು ಮತ್ತು ಹೃದಯ ಕನ್ನಡಿಗರಿಗಾಗಿ ಮಿಡಿಯುತ್ತಿದೆ. ಕನ್ನಡಿಗರು ಗಡಿನಾಡ ಕನ್ನಡಿಗರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದಾರೆ ಎಂದು ತಿಳಿಸಿದರು. 


ವ್ಯಕ್ತಿಯನ್ನು ಕಡತದಲ್ಲಿ ಕಾಣದೆ, ಕಡತದಲ್ಲಿ ವ್ಯಕ್ತಿಯನ್ನು ಕಾಣುವ ಮೂಲಕ ತಮ್ಮ ಅಧಿಕಾರವಧಿಯನ್ನು ಸದುಪಯೋಗ ಪಡಿಸಿಕೊಳ್ಳಿ ಮತ್ತು ಜನರ ಸಮಸ್ಯೆಗಳಿಗೆ ಸ್ಪಂದಿಸಿ ಎಂದು ಅಧಿಕಾರಿಗಳಿಗೆ ಸೋಮಶೇಖರ್ ಕಿವಿಮಾತು ಹೇಳಿದರು. 

ವಿಶ್ವವಿದ್ಯಾಲಯ, ಶಾಲಾ-ಕಾಲೇಜುಗಳಲ್ಲಿ ನಾವು ಕಲಿಯಬೇಕಾದದ್ದು ಪ್ರಮುಖವಾಗಿ ಮಾನವೀಯ ಸಂವೇದನೆಯನ್ನು. ತಲೆಯ ತುಂಬಾ ಹಿಂಸಾ ಪ್ರವೃತ್ತಿಯ ಕಸ ತುಂಬಿಕೊಳ್ಳದೆ ಸ್ವಾಭಿಮಾನ, ಸಹೋದರತ್ವದಿಂದ ಬಾಳುವ ಚಿಂತನೆಯನ್ನು ಮೈಗೂಡಿಸಿಕೊಳ್ಳಬೇಕು. ಕರ್ನಾಟಕದ ಸ್ಥಾನ ಇಂದು ಭಾರತ ಅಭಿವೃದ್ಧಿ ನಕ್ಷೆಯಲ್ಲಿ ಅಗ್ರ ಪಂಕ್ತಿಯಲ್ಲಿದೆ ಎಂದು ಅವರು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಾದ ಮಹಾಂತೇಶ ಬೀಳಗಿ ಮಾತನಾಡಿ, ಮೊಟ್ಟ ಮೊದಲ ಬಾರಿಗೆ ಬೆಸ್ಕಾಂ ಕಚೇರಿಯಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಆಚರಿಸುತ್ತಿರುವುದು ಸಂತಸದ ವಿಚಾರವಾಗಿದೆ.  

ಎಲ್ಲಾ ಅಧಿಕಾರಿಗಳು ಕಡತದಲ್ಲಿ ಆದಷ್ಟು ಕನ್ನಡವನ್ನು ಬಳಸಿ. ಸರ್ಕಾರದ ಪ್ರತಿಯೊಂದು ಹಂತದಲ್ಲಿ ಕನ್ನಡವನ್ನು ಆಡಳಿತ ಭಾಷೆಯಾಗಿ ಬಳಸುವುದು ನಮ್ಮೆಲ್ಲರ ಜವಬ್ದಾರಿಯಾಗಿದೆ. ಇಂಗ್ಲಿಷ್ ನಮ್ಮ ಅಗತ್ಯಕ್ಕೆ ಇರಬೇಕೆ ಹೊರತು ಅದೇ ನಮ್ಮ ಭಾಷೆಯಾಗಬಾರದು. ಆದರೆ ನಮ್ಮ ಕನ್ನಡ ಭಾಷೆಯನ್ನು ನಿತ್ಯ ಬಳಸೋಣ, ಬೆಳೆಸೋಣ. ಅನ್ಯಭಾಷಿಗರಿಗೂ ಕಲಿಸುವ ಪ್ರಯತ್ನ ಮಾಡೋಣ ಎಂದರು, 

ಕಾರ್ಯಕ್ರಮದಲ್ಲಿ ಬೆಸ್ಕಾಂನ ನಿರ್ದೇಶಕ (ತಾಂತ್ರಿಕ) ಡಿ. ನಾಗಾರ್ಜುನ, ನಿರ್ದೇಶಕರು (ಹಣಕಾಸು) ದರ್ಶನ್ ಹಾಗು ಹಿರಿಯ ಅಧಿಕಾರಿಗಳು ಹಾಜರಿದ್ದರು. ಬೆಸ್ಕಾಂ ಸಿಬಂದಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

Post a Comment

0 Comments

Ad Code

Responsive Advertisement