*ಮತ್ತೀಕೆರೆಯಲ್ಲಿ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ರಿಂದ ದೇಶದಲ್ಲೇ ಪ್ರಪ್ರಥಮವಾಗಿ ಸುಧಾರಣೆಗೊಂಡ ಪ್ರಾಥಮಿಕ ಆರೋಗ್ಯ ಕೇಂದ್ರದ ಉದ್ಘಾಟನೆ
ಬೆಂಗಳೂರು : ಮಲ್ಲೇಶ್ವರಂ ವಿಧಾನ ಸಭಾ ಕ್ಷೇತ್ರದ ಮತ್ತೀಕೆರೆಯ ನೇತಾಜಿ ವೃತ್ತದ ಸಮೀಪದಲ್ಲಿ ಸುಮಾರು ನವೀಕೃತಗೊಂಡ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಹೆಚ್ಚುವರಿ ವೈದ್ಯಕೀಯ ಸೌಲಭ್ಯಗಳನ್ನೊಳಗೊಂಡ ಸಮಗ್ರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಪ್ರಧಾನ ಮಂತ್ರಿ ಜನೌಷಧಿ ಕೇಂದ್ರವನ್ನು ಕೇಂದ್ರ ರೈಲ್ವೆ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾದ ಅಶ್ವಿನಿ ವೈಷ್ಣವ್ ರವರು ಸ್ಥಳೀಯ ಶಾಸಕರು ಹಾಗೂ ಉನ್ನತ ಶಿಕ್ಷಣ, ಎಲೆಕ್ಟ್ರಾನಿಕ್ಸ್, ಐಟಿ-ಬಿಟಿ ವಿಜ್ಞಾನ ಮತ್ತು ತಂತ್ರಜ್ಞಾನ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆಗಳ ಸಚಿವರಾದ ಡಾ. ಸಿ.ಎನ್.ಅಶ್ವತ್ಥನಾರಾಯಣ ರವರ ಉಪಸ್ಥಿತಿಯಲ್ಲಿ ಉದ್ಘಾಟಿಸಿ, ಲೋಕಾರ್ಪಣೆಯನ್ನು ನೆರೆವೇರಿಸಿದರು. ಈ ಸಂದರ್ಭದಲ್ಲಿ ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕರುಗಳಾದ ಚೋಳನ್ ಐಎಎಸ್, ಮಂಜುನಾಥ್, ಬಿಬಿಎಂಪಿ ಇಇ ಜಯಶಂಕರ್, ಬಿಜೆಪಿ ಮುಖಂಡರುಗಳಾದ ಸಿ.ಎನ್.ಸತೀಶ್, ಡಾ. ಆರ್.ವಾಸುದೇವ್, ಸಮಾಜ ಸೇವಕರಾದ ಡಿ.ಸುರೇಶ್ ಗೌಡರು,
ಮಾಜಿ ಪಾಲಿಕೆ ಸದಸ್ಯರುಗಳಾದ ಮುನಿಸ್ವಾಮಿಗೌಡರು, ಎನ್.ಜೈಪಾಲ್, ಎಂ.ಸಿ.ಜಯಪ್ರಕಾಶ್, ಮಂಜುನಾಥ್, ಡಾ. ಜಿ.ಎಸ್.ಚೌಧರಿ, ಶ್ರೀ ಧನಲಕ್ಷ್ಮಿ ಕನಸ್ಟ್ರಕ್ಷನ್ಸ್ ಎಸ್.ರಮೇಶ್, ಎಂ.ಮುನಿರಾಜಯ್ಯ (ಅಯ್ಯು), ಎಂ.ಚನ್ನಕೇಶವ, ಕೆ.ವರದರಾಜು, ಸತ್ಯನಾರಾಯಣ (ನಾಣಿ), ಕೆ.ವಿಶ್ವನಾಥ್, ರಾಮಮೂರ್ತಿ, ಪಾಲಿಕೆ ಅಧಿಕಾರಿಗಳಾದ ಡಾ.ದೀಪಕ್, ಡಾ. ಬಾಲುಚಂದರ್, ಡಾ.ಮನೋರಂಜನ್ ಹೆಗಡೆ, ಬಿಜೆಪಿ ಪಕ್ಷದ ಕಾರ್ಯಕರ್ತರುಗಳಾದ ಬಾಬು, ಸುಬ್ಬಣ್ಣ, ಭಾಸ್ಕರ್, ಭಾರತಿ, ದತ್ತಾ, ಕೃಷ್ಣ, ಸುನೀಲ್ ಮುಂತಾದವರು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.


0 Comments