ಕೊಳ್ಳೇಗಾಲ ಸುದ್ದಿ : ಜಿನಕನಹಳ್ಳಿ ಗುರುಮಲ್ಲೇಶ್ವರ ದಾಸೋಹ ಭವನ ಉದ್ಘಾಟನೆ ಮಾಡಿದ ಮಹಾಂತೇಶ್ ಸ್ವಾಮೀಜಿಗಳು,
ಕೊಳ್ಳೇಗಾಲ ತಾಲ್ಲೂಕಿನ ಜಿನಕನಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಲಿಂಗಾಯತ ಸಮುದಾಯದ ಗುರುಮಲ್ಲೇಶ್ವರ ದಾಸೋಹ ಮಠದ ಉದ್ಘಾಟನೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಕಾರ್ಯಕ್ರಮಕ್ಕೆ ಆಗಮಿಸಿದ್ದ ದೇವನೂರು ಗುರುಮಲ್ಲೇಶ್ವರ ಸಂಸ್ಥಾನ ಮಠದ ಮಹಾಂತೇಶ್ ಮಹಾಸ್ವಾಮಿಗಳು ಹೋಮ ಪೂಜೆ ಕೈಂಕಾರ್ಯಗಳನ್ನು ನಡೆಸಿ ಗುರುಮಲ್ಲೇಶ್ವರ ದಾಸೋಹ ಮಠವನ್ನು ಉದ್ಘಾಟಸಿದರು,
ಉದ್ಘಾಟನೆ ಪೂಜೆಯಲ್ಲಿ ಪಾಲ್ಗೊಂಡಿದ್ದ ಸಮುದಾಯದ ಶರಣ ಶರಣೆಯರಿಗೆ ಮಹಾಂತೇಶ್ ಸ್ವಾಮೀಜಿಗಳು ಆಶೀರ್ವಚನ ನೀಡಿದರು,
ಸಮುದಾಯದ ಭಜನಾ ಕಲಾ ತಂಡದ ಬಸವ ತತ್ವ ಭಜನೆ ಪದಗಳ ಮೂಲಕ ಕಾರ್ಯಕ್ರಮವನ್ನು ನಡೆಸಲಾಯಿತು, ನಂತರ ನೆರೆದಿದ್ದ ಭಕ್ತರಿಗೆ ಪ್ರಸಾದ ವಿನಿಯೋಗವನ್ನು ನಡೆಸಲಾಯಿತು,
ಈ ಸಂದರ್ಭದಲ್ಲಿ, ಕುದೇರು ಹಾಲು ಉತ್ಪಾದನೆ ಘಟಕದ ಕೊಳ್ಳೇಗಾಲ ನಿರ್ದೇಶಕರಾದ ನಂಜುಂಡಸ್ವಾಮಿ, ಗ್ರಾಮದ ಮುಖಂಡರಾದ ಗುರುನಂಜಪ್ಪ , ಕುಮಾರಸ್ವಾಮಿ, ಬಸವಣ್ಣ, ನಟರಾಜು, ಸಂತೋಷ, ಶಾಂತರಾಜು, ನಟರಾಜು, ಹಾಗೂ ಇನ್ನಿತರರು ಇದ್ದರು,

0 Comments