ದೇಶದ ಭವಿಷ್ಯವನ್ನು ರೂಪಿಸುವ ಮಕ್ಕಳಿಗೆ ಉತ್ತಮ ವಿದ್ಯೆ, ಮಕ್ಕಳ ಪ್ರತಿಭೆ ಅರಳಲು ಸೂಕ್ತ ವಾತಾವರಣವನ್ನು ನಿರ್ಮಿಸುವುದು ಎಲ್ಲ ನಾಗರೀಕರ ಕರ್ತವ್ಯ ಮತು ಸಾಮಾಜಿಕ ಹೊಣೆಗಾರಿಕೆ ಎಂದು ತಟ್ಟನಹಳ್ಳಿ ಸರ್ಕಾರಿ ಶಾಲೆಯ ‘ಮಕ್ಕಳ ದಿನಾಚರಣೆ’ಯ ಸಮಾರಂಭದ ಅಧ್ಯಕ್ಷತೆವಹಿಸಿದ್ದ ಕನ್ನಡ ಚಿಂತಕ ರಾ.ನಂ. ಚಂದ್ರಶೇಖರ ತಿಳಿಸಿದರು.
ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ‘ಮಕ್ಕಳ ದಿನಾಚರಣೆ’ ಸೀಮಿತವಾಗಿದೆ. ಶಾಲೆಯಿಂದ ಹೊರಗುಳಿದಿರುವ ಮಕ್ಕಳಿಗೂ ಶಿಕ್ಷಣ ಪಡೆಯುವ ಹಕ್ಕಿದೆ. ಅವರಿಗೂ ಶಿಕ್ಷಣ ಪಡೆಯುವ ಹಕ್ಕಿದೆ. ಶಾಲೆಯಿಂದ ಹೊರಗುಳಿದಿರುವ ಮಕ್ಕಳನ್ನು ಶಾಲೆಗೆ ಕರೆತರಲು ಶಿಕ್ಷಕರು ಮತ್ತು ಊರಿನ ವಿದ್ಯಾವಂತರು ಮುಂದಾಗ ಬೇಕೆಂದು ತಿಳಿಸಿದರು. ಹಿರಯ ಸಂಶೋಧಕ ಡಾ. ಆರ್. ಶೇಷಶಾಸ್ತ್ರಿ ಅವರು ಮಕ್ಕಳ ದಿನಾಚರಣೆಯ ಮಹತ್ವ ಮತ್ತು ಜವಹಾರಲಾಲ್ ನೆಹರು ಅವರ ದೇಶ ಸೇವೆಯನ್ನು ವಿವರಸಿದರು.
ಶಾಲೆಯ ಶಿಕ್ಷಕಿ ಸುನಿತಾ ಕಾರ್ಯಕ್ರಮ ನಿರೂಪಿಸದರು. ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಕೃಷ್ಣ ರೆಡ್ಡಿ, ಕಾರ್ಯದರ್ಶಿ ರಾಮಚಂದ್ರಪ್ಪ ಅವರುಗಳು ಉಪಸ್ಥಿತರಿದ್ದರು. ಮಕ್ಕಳಿಂದ ಸಾಂಸಕೃತಿಕ ಕಾರ್ಯಕ್ರಮ ನಡೆಯಿತು. ಕೆಲವು ವರ್ಷಗಳ ಹಿಂದೆ ಶಾಲೆಯ ಮಕ್ಕಳ ಸಂಖ್ಯೆ ೫ಕ್ಕಿಳಿದು ಮುಚ್ಚಿ ಹೋಗುವ ಅಪಾಯ ಬಂದಾಗ ಉದ್ಯಮಿ ಕೃಷ್ಣಾ ರೆಡ್ಡಿ ಮಿತ್ರರು ಶಾಲೆಯ ಸ್ಥಿತಿಯನ್ನು ಉತ್ತಮ ಪಡಿಸಿ, ಇಂಗ್ಲಿಷ್ ಭಾಷೆಯ ಕಲಿಕೆಗೆ ವ್ಯವಸ್ಥೆ ಮಾಡಿ ಶಾಲೆಯಮಕ್ಕಳ ಸಂಖ್ಯೆ ೪೫ ಆಗುವಂತೆ ಮಾಡಿದ್ದಾರೆ. ಇದು ಸರ್ಕಾರಿ ಶಾಲೆಗಳನ್ನು ಉಳಿಸಿ ಕೊಳ್ಳಲು ಮಾದರಿ ಆಗಿದೆ.
ಇದೇ ಸಂದರ್ಭದಲ್ಲಿ (೧೪-೧೧-೨೦೨೨) ಆನೇಕಲ್ ಸಮೀಪದ ತಟ್ಟನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಶಾಲೆಯ ಎಲ್ಲ ೪೫ ವಿದ್ಯಾರ್ಥಿಗಳಿಗೆ ಮಕ್ಕಳ ದಿನಾಚರಣೆಯ ವಿಶೇಷ ಉಡುಗೊರೆಯನ್ನು ನೀಡಿತು. ಜೊತೆಗೆ ಪ್ರತಿ ತರಗತಿಯ ೩ ಮಕ್ಕಳಿಗೆ ವಿಶೇಷ ಬಹುಮಾನ ನೀಡಿದ್ದಲ್ಲದೆ, ಶಾಲೆಗೆ ಅಗತ್ಯ ವಸ್ತುವನ್ನು ಕೊಳ್ಳಲು ರೂ. ೭೦೦೦/-(ಏಳು ಸಾವಿರ ರೂಪಾಯಿ)ಹಣವನ್ನು ನೀಡಿತು. ಕನ್ನಡ ಗೆಳೆಯರ ಬಳಗದ ತಂಡದಲ್ಲಿ ಸಂಚಾಲಕ ರಾ.ನಂ. ಚಂದ್ರಶೇಖರ, ಹಿರಿಯ ಸಂಶೋಧಕ ಡಾ. ಆರ್. ಶೇಷಶಾಸ್ತ್ರಿ, ಲೇಖಕ, ತಂತ್ರಜ್ಞ ಬಾ.ಹ. ಉಪೇಂದ್ರ, ಕಾರ್ಮಿಕಲೋಕದ ಬಿ.ವಿ. ರವಿಕುಮಾರ್, ಎಚ್.ಎ.ಎಲ್. ಕೇಂದ್ರೀಯ ಕನ್ನಡ ಸಂಘದ ಅಧ್ಯಕ್ಷ ಆರ್. ರಾಮಸ್ವಾಮಿ ಮತ್ತು ಕೇಂದ್ರೀಯ ಸದನ ಕನ್ನಡ ಸಂಘದ ಅಧ್ಯಕ್ಷ ಮ. ಚಂದ್ರಶೇಖರ್, ಲೇಖಕಿ ಭಾರತಿ ಶೇಷಗಿರಿರಾವ್, ಭಾರತ್ ಸಂಚಾರ್ ನಿಗಮ್‌ನ ನಿವೃತ್ತ ಅಧಿಕಾರಿ ಸಂಜೀವರತ್ನ ಅವರುಗಳಿದ್ದರು. ಶಾಲೆಯ ಸ್ವಚ್ಛ ಪರಿಸರ, ಕಟ್ಟಡವನ್ನು ಸುಸಜ್ಜುಗಳಿಸಿರುವುದನ್ನು ಗಮನಿಸಿದ ತಂಡ ಶಾಲಾ ಅಭಿವೃದ್ಧಿ ಮಂಡಳಿಯ ಕೆಲಸವನ್ನು ಶ್ಲಾಘಿಸಿತು.



0 Comments