Ticker

6/recent/ticker-posts

Ad Code

Responsive Advertisement

ಬೆಸ್ಕಾಂ ವಿದ್ಯುತ್‌ ಅದಾಲತ್‌

ಬೆಂಗಳೂರು: ಬೆಸ್ಕಾಂ ವ್ಯಾಪ್ತಿಯ 8 ಜಿಲ್ಲೆಗಳ 87 ಹಳ್ಳಿಗಳಲ್ಲಿ ನವೆಂಬರ್‌ 19ರಂದು (ಶನಿವಾರ) ವಿದ್ಯುತ್ ಅದಾಲತ್ ನಡೆಯಲಿದೆ. 


ಗ್ರಾಮೀಣ ಪ್ರದೇಶಗಳಲ್ಲಿ ಪ್ರತಿ ತಿಂಗಳ ಮೂರನೇ ಶನಿವಾರದಂದು ಬೆಸ್ಕಾಂ ವಿದ್ಯುತ್‌ ಅದಾಲತ್‌ ಆಯೋಜಿಸುತ್ತಿದ್ದು, ಗ್ರಾಹಕರಿಂದ ಅದಾಲತ್‌ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇದುವರೆಗೆ ಒಟ್ಟು 5 ವಿದ್ಯುತ್‌ ಅದಾಲತ್‌ ಗಳನ್ನು ಬೆಸ್ಕಾಂ ಗ್ರಾಮೀಣ ಭಾಗದಲ್ಲಿ ಆಯೋಜಿಸಿತ್ತು. 

ಗ್ರಾಹಕರ ವಿದ್ಯುತ್‌ ಸಂಬಂಧಿತ ಸಮಸ್ಯೆಗಳಿಗೆ ಅಧಿಕಾರಿಗಳು ಸ್ಥಳದಲ್ಲೇ ಪರಿಹಾರ ಸೂಚಿಸುತ್ತಿದ್ದು, ಇದರಿಂದ ಗ್ರಾಹಕರಿಗೆ ಅನುಕೂಲವಾಗುತ್ತಿದೆ. ಜೊತೆಗೆ ಬೆಸ್ಕಾಂ ಒದಗಿಸುತ್ತಿರುವ ಸೇವೆಗಳು ಮತ್ತು ಯೋಜನೆಗಳ ಕುರಿತು ಅದಲಾತ್‌ ನಲ್ಲಿ ಗ್ರಾಹಕರಿಗೆ ಮಾಹಿತಿ ಒದಗಿಸಲಾಗುತ್ತಿದೆ.

Post a Comment

0 Comments

Ad Code

Responsive Advertisement