Ticker

6/recent/ticker-posts

Ad Code

Responsive Advertisement

ಸಮಾವೇಶದಿಂದ ಕಾಂಗ್ರೆಸ್ ಮುಖಂಡರಿಗೆ‌ ದೊಡ್ಡ ಅಘಾತ-ಯಡಿಯೂರಪ್ಪ

 ಬಳ್ಳಾರಿ‌: ಹಿಂದುಳಿದ ಸಮುದಾಯಗಳ ಕುರಿತು ಕಾಂಗ್ರೆಸ್‌ಗೆ ಕಾಳಜಿ ಇಲ್ಲ ಎಂದು ನವಶಕ್ತಿ ಸಮಾವೇಶ ಕಾರ್ಯಕ್ರಮದಲ್ಲಿ ತಿಳಿಸಿದ ರಾಷ್ಟ್ರೀಯ ಬಿಜೆಪಿ ಸಂಸದೀಯ ಸಮಿತಿ ಸದಸ್ಯ ಬಿ.ಎಸ್‌. ಯಡಿಯೂರಪ್ಪ, ಎಸ್‌ಟಿ ಸಮುದಾಯದ ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತಿ ಮಾಡಿದ್ದು ಬಿಜೆಪಿ ಎಂದು ಸಮರ್ಥನೆ ಮಾಡಿಕೊಂಡರು.
ಜಿಲ್ಲೆಯ 10 ವಿಧಾನಸಭೆಯಲ್ಲಿ 10 ಕ್ಷೇತ್ರದಲ್ಲಿ ಗೆಲ್ಲುತ್ತೇವೆ ಎಂದು ಕೈ ಎತ್ತಿ‌ ಎಂದ ಮಾಜಿ‌ ಸಿಎಂ, ಎಸ್‌ಟಿ ಸಮುದಾಯಕ್ಕೆ ನ್ಯಾಯ ಕೊಡಿಸುವ ಕಾರ್ಯ ಬಿಜೆಪಿಯಿಂದ ಸಾಧ್ಯವಾಗಿದೆ.ನಾನು ಸಿಎಂ ಆಗಿದ್ದಾಗ, ಬಿಜೆಪಿ ಮತ್ತು ಜನಾರ್ದನ ರೆಡ್ಡಿ ಏನು ಕೆಲಸ ಕೇಳಿದ್ದಾರೋ‌ ಅದೆಲ್ಲವನ್ಮು ಬಳ್ಳಾರಿಗೆ ಮಾಡಿದ್ದೇವೆ. 


ಸಮಾವೇಶದಿಂದ ಕಾಂಗ್ರೆಸ್ ಮುಖಂಡರಿಗೆ‌ ದೊಡ್ಡ ಅಘಾತವಾಗಿದೆ. ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರ ಮಾತು ಮರೆಯಬೇಡಿ. ಮೂರು ತಲೆ ಮಾರಿಗೆ‌ ಆಗುವಷ್ಡು ಹಣ ಮಾಡಿದ್ದೇವೆ ಎಂದಿದ್ದರು.ರಾಜ್ಯ ಅಭಿವೃದ್ಧಿ ಆಗಬೇಕೆಂದರೆ ಬಿಜೆಪಿಯನ್ನು ರಾಜ್ಯದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ತರಬೇಕೆಂದು ಕರೆ ಕೊಟ್ಟರು.ನಿಜವಾದ ಅಹಿಂದ ಸಮಾವೇಶ ಇಲ್ಲಿ ನಡೆಯುತ್ತಿದೆ ಎಂದ ಸಿಎಂ ಬಸವರಾಜ ಬೊಮ್ಮಾಯಿ, ಸಿದ್ದರಾಮಯ್ಯ ವಿರುದ್ಧ ನವಶಕ್ತಿ ಸಮಾವೇಶ ಕಾರ್ಯಕ್ರಮದಲ್ಲಿ ಹರಿಹಾಯ್ದರು.

Post a Comment

0 Comments

Ad Code

Responsive Advertisement