ಕೊಳ್ಳೇಗಾಲ ಸುದ್ದಿ : ಕೊಳ್ಳೇಗಾಲ ತಾಲ್ಲೂಕಿನ ತೆಳ್ಳನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಏಳು ಗ್ರಾಮಗಳ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದ ಕಾರ್ಯಕರ್ತರು ತಮ್ಮ ಪಕ್ಷಗಳನ್ನು ತೊರೆದು ರಾಜ್ಯ ಜೆಡಿಎಸ್ ಉಪಾಧ್ಯಕ್ಷರು ಹಾಗೂ ಹನೂರು ಕ್ಷೇತ್ರದ ಜೆಡಿಎಸ್ ಮುಖಂಡರಾದ ಆರ್. ಮಂಜುನಾಥ್ ರವರ ನೇತೃತ್ವದಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡರು,
ತೆಳ್ಳನೂರು ಗ್ರಾಮ ಪಂಚಾಯಿತಿಯ ಬಾಳಗುಣುಸೆ, ಮಾಸ್ತಿಗೌಡನ ದೊಡ್ಡಿ, ಚಿಕ್ಕಲ್ಲೂರು, ರಾಚಪ್ಪಾಜಿನಗರ, ಅಂಕಣಪುರ, ಸುಂಡ್ರಳ್ಳಿ, ಬಾಣೂರು ಗ್ರಾಮಗಳ ಸುಮಾರು ಜನರು ಹನೂರು ಕ್ಷೇತ್ರದಲ್ಲಿ ಜೆಡಿಎಸ್ ಮುಖಂಡ ಆರ್. ಮಂಜುನಾಥ್ ರವರ ಕಾರ್ಯವೈಖರಿಯನ್ನು ಮೆಚ್ಚಿಕೊಂಡು, ಕಾಂಗ್ರೆಸ್ ಬಿಜೆಪಿ ಪಕ್ಷಗಳ ಕಾರ್ಯಕರ್ತರು ತಮ್ಮ ಹಿಂದಿನ ಪಕ್ಷವನ್ನು ತೊರೆದು ಜೆಡಿಎಸ್ ಮುಖಂಡ ಆರ್. ಮಂಜುನಾಥ್ ರವರ ನೇತೃತ್ವದಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡರು,
ಇದೆ ವೇಳೆ ಒಂದೊಂದು ಗ್ರಾಮಗಳಲ್ಲಿಯೂ ನೂರಾರು ಕಾರ್ಯಕರ್ತರೊಡನೆ ಸಮಾಲೋಚನೆ ನಡೆಸಿ ಜೆಡಿಎಸ್ ಪಕ್ಷವನ್ನು ಭೂತ್ ಮಟ್ಟದಿಂದ ಬಲಪಡಿಸುವ ಬಗ್ಗೆ ಚರ್ಚೆ ನಡೆಸಿದರು,
ಕುಮಾರಸ್ವಾಮಿಯವರು ತಮ್ಮ ಅವಧಿಯಲ್ಲಿ ಜನಪರವಾಗಿ, ರೈತರ ಪರವಾಗಿ, ಬಡವರ ಪರವಾಗಿ ಕೊಟ್ಟ ಯೋಜನೆಗಳು, ಬಡವರ ಪರವಾಗಿ ಮಾಡಿದ ಕೆಲಸಗಳನ್ನ ಮೆಚ್ಚುಕೊಂಡು ಮತದಾರರು ರಾಜ್ಯದಲ್ಲಿ ಜೆಡಿಎಸ್ ಪಕ್ಷ ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕು ಕುಮಾರಸ್ವಾಮಿಯವರು ಮತ್ತೊಮ್ಮೆ ಮುಖ್ಯಮಂತ್ರಿಗಳಾಗಿ ಸಂಪೂರ್ಣ ಐದು ಪೂರೈಸುವಂತಾಗಲಿ ಎಂಬ ಮಹದಾಸೆಯನ್ನಿಟ್ಟುಕೊಂಡು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡರು ಎನ್ನಲಾಗಿದೆ,
ಇದೆ ವೇಳೆ ಪುಟ್ಟ ಮಗುವೊಂದು ಕುಮಾರಣ್ಣ ಸಿಎಂ ಆಗಬೇಕು ಎಂದು ಕೂಗುತ್ತಿದ್ದು ಕಾರ್ಯಕರ್ತರಲ್ಲಿ ಹುಮ್ಮಸ್ಸನ್ನ ಹೆಚ್ಚಿಸಿತು, ಕುಮಾರಸ್ವಾಮಿಯವರ ಪರವಾದ ಪುಟ್ಟ ಮಗುವಿನ ನಿಸ್ಕಲ್ಮಷ ನುಡಿಗೆ ಕುಮಾರಸ್ವಾಮಿಯವರ ಮೇಲಿನ ಮಗುವಿನ ಅಭಿಮಾನಕ್ಕೆ ಕಾರ್ಯಕರ್ತರು ಸಂತಸ ವ್ಯಕ್ತ ಪಡಿಸಿದರು,
ಇದೆ ವೇಳೆ ಜೆಡಿಎಸ್ ಮುಖಂಡ ಆರ್. ಮಂಜುನಾಥ್ ರವರು ಮಾತನಾಡಿಹ ನೂರು ವಿಧಾನಸಭಾ ಕ್ಷೇತ್ರದಲ್ಲಿ ಹಲವಾರು ಸಮಸ್ಯೆಗಳು ತಾಂಡವಾಡುತ್ತಿದೆ, ನಿರುದ್ಯೋಗ ಸಮಸ್ಯೆ, ಮೂಲಭೂತ ಸೌಕರ್ಯಗಳ ಕೊರತೆ ಆರೋಗ್ಯ ಕೇಂದ್ರಗಳ ಸಮಸ್ಯೆ ಮುಖ್ಯವಾಗಿದೆ, ಕ್ಷೇತ್ರದಲ್ಲಿ ನಿರುದ್ಯೋಗ ಸಮಸ್ಯೆ ಇರುವುದರಿಂದ ಬಡತನ ತಾಂಡವಾಡುತ್ತಿದೆ, ಇದರಿಂದ ದೇವೇಗೌಡರವರು ಅಧಿಕಾರದಲ್ಲಿದ್ದಾಗ ರೈತರಿಗೆ ಅನುಕೂಲವಾಗಲೆಂದು ಈ ಕ್ಷೇತ್ರಕ್ಕೆ ನೀರಾವರಿ ವ್ಯವಸ್ಥೆಯನ್ನು ಮಾಡಿಸಿದರು, ಕುಮಾರಸ್ವಾಮಿಯವರು ಮುಖ್ಯಮಂತ್ರಿಗಳಾಗಿದ್ದಾಗ ರೈತರ ಸಾಲ ಮನ್ನಾ ಮಾಡಿದರು, ನಿರುದ್ಯೋಗಿಗಳಿಗೆ ಉದ್ಯೋಗ ಸೃಷ್ಟಿ ಮಾಡಿದರು,
ಬಡವರಿಗಾಗಿ ಹಲವಾರು ಯೋಜನೆಗಳನ್ನ ಜಾರಿ ಮಾಡಿದ್ದರು, ಮುಂದಿನ ದಿನಗಳಲ್ಲಿ ನಿರುದ್ಯೋಗಿಗಳ, ಉದ್ದಾರಕ್ಕಾಗಿ ಬಡವರಿಗಾಗಿ ಅಭಿವೃದ್ಧಿಗಾಗಿ ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರಬೇಕು, ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರಬೇಕಾದರೆ ತಳಮಟ್ಟದಿಂದ ಜೆಡಿಎಸ್ ಪಕ್ಷವನ್ನ ಸಂಘಟನೆ ಮಾಡಬೇಕಾಗಿದೆ ಆದ್ದರಿಂದ ನೀವೆಲ್ಲರೂ ಅ ನಿಟ್ಟಿನಲ್ಲಿ ಕೆಲಸ ಮಾಡಬೇಕು, ಹನೂರು ಕ್ಷೇತ್ರದಲ್ಲಿ ನನಗೆ ನೀವೆಲ್ಲರೂ ಆಶೀರ್ವಾದ ಮಾಡಿ ಜಯಗಳಿಸಿದರೆ, ಈ ಕ್ಷೇತ್ರದ ಅಭಿವೃದ್ಧಿಗಾಗಿ ದುಡಿಯುತ್ತೇನೆ ನಾನು ಈಗಾಗಲೇ ಕ್ಷೇತ್ರದಲ್ಲೂ ಹಲವಾರು ಜನಪರ ಸೇವಾಕಾರ್ಯಗಳನ್ನು ಮಾಡುತ್ತಿದ್ದೇನೆ, ಇನ್ನು ನನಗೆ ಶಾಸಕ ಸ್ಥಾನವನ್ನು ಕೊಟ್ಟರೆ ನಿಮ್ಮೆಲ್ಲರ ಅಭಿವೃದ್ಧಿಗಾಗಿ ನನ್ನ ಅಧಿಕಾರವನ್ನ ಮೀಸಲಾಗಿರಿಸುತ್ತೇನೆ ಎಂದರು,
ಈ ಸಂದರ್ಭದಲ್ಲಿ ತೆಳ್ಳನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲ ಗ್ರಾಮಗಳ ಮುಖಂಡರುಗಳು ಹಾಗೂ ಕಾರ್ಯಕರ್ತರುಗಳು ಇದ್ದರು,

0 Comments