ಶ್ರೀ ರಾಮ ಸೇವಾ ಮಂಡಳಿ ಮತ್ತು ರಾಜಾಜಿನಗರ ನಿವಾಸಿಗಳ ಕ್ಷೇಮಾಭಿವೃದ್ದಿ ಸಂಘ, ನೆಲ್ಲಾನ್ ಚಕ್ರವರ್ತಿ ಟ್ರಸ್ಟ್ ವತಿಯಿಂದ ಶ್ರೀ ರಾಮಮಂದಿರ ದೇವಸ್ಥಾನ ಅವರಣದಲ್ಲಿ ಮೂರನೇಯ ಕಾರ್ತಿಕ ಸೋಮವಾರದಂದು ಲಕ್ಷದೀಪೋತ್ಸವ ಆಯೋಜಿಸಲಾಗಿತ್ತು.
ಶ್ರೀ ರಾಮಸೇವಾ ಮಂಡಳಿ ಅಧ್ಯಕ್ಷರಾದ ಶ್ರೀಧರ್, ನಟ, ನಿರ್ದೇಶಕ ಎಸ್.ನಾರಾಯಣ್, ನಗರ ಕೇಂದ್ರ ಜಿಲ್ಲಾ ಬಿ.ಜೆ.ಪಿ.ಅಧ್ಯಕ್ಷರಾದ ಮಂಜುನಾಥ್,ಬಿ.ಜೆ.ಪಿ.ಮುಖಂಡರಾದ ರಘುನಾಥ್ ಬಿ.ಜೆ.ಪಿ.ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ಮೋಹನ್ ಕುಮಾರ್, ಮಹೇಶ್,ಪದ್ಮನಾಭ್,ವೆಂಕಟೇಶ್ ಬಾಬು, ಬಾಬುನರಸಿಂಹಪ್ಪ, ಡಾ.ಮಂಜುನಾಥ್ ಸ್ವಾಮಿ, ಶ್ರೀಧರ್,ಪಟಾಕಿ ವರ್ತಕರ ಸಂಘದವರು ಮತ್ತು ಸಾವಿರಾರು ಮಹಿಳೆಯರು ದೀಪಾ ಬೆಳಗಿಸಿ ಲಕ್ಷದೀಪೋತ್ಸವಕ್ಕೆ ಚಾಲನೆ ನೀಡಿದರು.
ಈಶ್ವರ,ಆಂಜನೇಯ ಮತ್ತು ನವಗ್ರಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ಅಧ್ಯಕ್ಷರಾದ ಶ್ರೀಧರ್ ರವರು ಮಾತನಾಡಿ ಹಿಂದೂ ಸಂಪ್ರಾದಯದಲ್ಲಿ ಕಾರ್ತಿಕ ಮಾಸದಲ್ಲಿ ದೀಪಾ ಬೆಳಗುವುದರಿಂದ ಸಕಲ ಸಂಕಷ್ಟಗಳು ನಿವಾರಣೆಯಾಗಿ ಜೀವನದಲ್ಲಿ ನೆಮ್ಮೆದಿ ಸಿಗಲಿದೆ ಎಂದು ಪುರಾಣಗಳಲ್ಲಿ ಉಲ್ಲೇಖವಿದೆ.
ಶ್ರೀರಾಮ ಸೇವಾ ಮಂಡಳಿವತಿಯಿಂದ ಭಕ್ತರ ಸಂಕಷ್ಟಗಳು ನಿವಾರಣೆಯಾಗಲಿ ಎಂದು ಲಕ್ಷದೀಪೋತ್ಸವ ಅಚರಿಸಲಾಗುತ್ತಿದೆ.
ಪ್ರತಿ ವರ್ಷ ದೇವಸ್ಥಾನ ಲಕ್ಷದೀಪೋತ್ಸವ ಅಚರಿಸಿಕೊಂಡು ಬರಲಾಗುತ್ತಿದೆ.
ಬಂದ ಭಕ್ತಾಧಿಗಳಿಗೆ ಪ್ರಸಾದ ವಿನಿಯೋಗ ಏರ್ಪಡಿಸಲಾಗಿದೆ ಎಂದು ಹೇಳಿದರು.



0 Comments