ಕೊಳ್ಳೇಗಾಲ ಪಟ್ಟಣದಲ್ಲಿ ರಾಷ್ಟ್ರೀಯ ಹೆದ್ದಾರಿ 209. ನವರಿಂದ ನಡೆದಿರುವ ಕಳಪೆ ಕಾಮಗಾರಿಯಿಂದ ಯಮ ಸ್ವರೂಪಿ ಗುಂಡಿ ಬಿದ್ದು ವಾಹನ ಸಂಚಾರಕ್ಕೆ ತೊಡಕಾಗಿದ್ದ ಇಂದ್ರ ಕ್ಯಾಂಟೀನ್ ಮುಂಭಾಗದ ರಸ್ತೆಯನ್ನು ಕೊಳ್ಳೇಗಾಲ ಗ್ರೇಡ್ 1 ಗುತ್ತಿಗೆದಾರ ವಾಲೆ ಮಹಾದೇವರವರು ಗುಂಡಿ ಬಿದ್ದಿದ್ದ ರಸ್ತೆಗೆ ಕಾಂಕ್ರಿಟ್ ಹಾಕಿಸಿ ದುರಸ್ಥಿ ಮಾಡಿಸಿದರು,
ಐದಾರು ವರ್ಷಗಳ ಹಿಂದೆ ರಾಷ್ಟ್ರೀಯ ಹೆದ್ದಾರಿ 209 ಯೋಜನೆಯಲ್ಲಿ ಕೊಳ್ಳೇಗಾಲ ಪಟ್ಟಣದಲ್ಲಿ 40 ಅಡಿ ಅಗಲದ ಕಾಂಕ್ರಿಟ್ ರಸ್ತೆಯನ್ನು ಮಾಡಿಸಲಾಗಿತ್ತು,
ಎನ್ ಎಚ್ ರವರ ರಸ್ತೆ ಕಾಮಗಾರಿ ಕಳಪೆ ಗುಣಮಟ್ಟದಿಂದ ಕೂಡಿದ್ದು
ರಸ್ತೆಗಳಲ್ಲಿ ಗುಂಡಿಗಳು ನಿರ್ಮಾಣವಾಗಿ ವಾಹನ ಸಂಚಾರಕ್ಕೆ ತೊಡಕಾಗಿ ಪರಿಣಮಿಸಿದೆ, ಪಟ್ಟಣದ ಇಂದ್ರ ಕ್ಯಾಂಟೀನ್ ಮುಂಭಾಗದಲ್ಲಿ ರಸ್ತೆಯಲ್ಲಿ ಬಾರಿ ಗುಂಡಿ ಬಿದ್ದಿದ್ದು ವಾಹನ ಸವಾರರು ಪ್ರಾಣ ಕೈಯಲ್ಲಿಡಿದುಕೊಂಡು ವಾಹನ ಚಲಾಯಿಸುವಂತ ಪರಿಸ್ಥಿತಿ ನಿರ್ಮಾಣವಾಗಿತ್ತು, ಪಟ್ಟಣದ ಕೋರ್ಟ್ ಮುಂಭಾಗದಿಂದ ಮಧುವನಹಳ್ಳಿವರೆಗೆ ರಸ್ತೆ ಕಾಮಗಾರಿಯನ್ನು ನಡೆಸುತ್ತಿರುವ ಗ್ರೇಡ್ 1 ಗುತ್ತಿಗೆದಾರ ವಾಲೆ ಮಹಾದೇವರವರು ಎನ್. ಎಚ್ ರಸ್ತೆಯಲ್ಲಿರುವ ಯಮ ಸ್ವರೂಪಿ ಗುಂಡಿಗಳಿಂದ ಬೇಸತ್ತಿರುವ ಪ್ರಯಾಣಿಕರ ಕಷ್ಟ ವನ್ನು ನೋಡಿ, ತಮ್ಮ ವ್ಯಾಪ್ತಿಗೆ ಇಲ್ಲದೆ ಇರುವ ರಸ್ತೆಯಲ್ಲಿಯೂ ಸಹ ಪ್ರಯಾಣಿಕರ ಅನುಕೂಲಕ್ಕಾಗಿ ಕಾಮಗಾರಿಯನ್ನು ಮಾಡಿ ಬೃಹದಾಕಾರದ ಗುಂಡಿಗಳನ್ನು ಅಗೆಯಿಸಿ ಗುಣ ಮಟ್ಟದ ಕಾಂಕ್ರಿಟ್ ರಸ್ತೆಯನ್ನ ಮಾಡಿಸಿ ವಾಹನ ಸವಾರರಿಗೆ ಅನುಕೂಲ ಮಾಡಿಸಿದ್ದಾರೆ,
ಪಟ್ಟಣದ ಮದ್ಯ ಭಾಗದಲ್ಲಿ ಗ್ರೇಡ್ 1 ಗುತ್ತಿಗೆದಾರ ವಾಲೆ ಮಹಾದೇವರವರು ನಿರ್ಮಾಣ ಮಾಡಿಸುತ್ತಿರುವ ಬಾಬಾ ಸಾಹೇಬ್ ಅಂಬೇಡ್ಕರ್ ಪುತ್ತಳಿ ಹೊಂದಿರುವ ಅಂಬೇಡ್ಕರ್ ಸರ್ಕಲ್ ಉದ್ಘಾಟನೆ ದಿನಾಂಕ ಹತ್ತಿರವಾಗುತ್ತಿರುವ ಹಿನ್ನೆಲೆ
ಸರ್ಕಲ್ ಹತ್ತಿರದಲ್ಲಿ ದುಸ್ಥಿತಿಯಲ್ಲಿದ್ದ ಗುಂಡಿ ಬಿದ್ದ ರಸ್ತೆಗಳಲ್ಲಿ ಕಾಂಕ್ರಿಟ್ ಹಾಕಿಸಿ ಗುಣ ಮಟ್ಟದ ರಸ್ತೆಯನ್ನು ಮಾಡಿಸುತ್ತಿದ್ದಾರೆ,
ಕೊಳ್ಳೇಗಾಲ ಪಟ್ಟಣಕ್ಕೆ ವಾಲೆ ಮಹಾದೇವರವರ ಕೊಡುಗೆ ಅಪಾರವಾದದ್ದು, ಎನ್ನಲಾಗಿದೆ,

0 Comments