ಬೆಂಗಳೂರು: ಉದ್ಯಾನನಗರಿ ಬೆಂಗಳೂರಿನಲ್ಲಿಂದು ಗ್ರಾಮೀಣ ಸೊಗಡು ಮನೆ ಮಾಡಿತು. ಸಂಡೇ ಸ್ಪೆಷಲ್ ಎಂಬಂತೆ ಜನ ಬಸವನಗುಡಿ ಕಡಲೆಕಾಯಿ ಪರಿಷೆಯತ್ತ ಮುಖ ಮಾಡಿದ್ರು.
ಬಸವನಗುಡಿ ಬುಲ್ ಟೆಂಪಲ್ ರಸ್ತೆಯಲ್ಲಿಂದು ಬಡವರ ಬಾದಾಮಿಯ ರಂಗು ಪಸರಿಸಿತು. ಎಲ್ಲೆಡೆ ಕಡಲೆಕಾಯಿ ರಾಶಿ, ರಾಶಿ ಗ್ರಾಹಕರ ಕೈ ಬೀಸಿ ಕರೆಯುತ್ತಿತ್ತು. ಇಂದಿನಿಂದ ನಗರದ ಬಸವನಗುಡಿಯಲ್ಲಿ ಐತಿಹಾಸಿಕ ಕಡಲೆಕಾಯಿ ಪರಿಷೆ ನಡೆಯಲಿದೆ. ಸಿಎಂ ಬಸವರಾಜ ಬೊಮ್ಮಾಯಿ ಕಡಲೆ ಕಾಯಿ ಪರಿಷೆಗೆ ಚಾಲನೆ ನೀಡಿದ್ದಾರೆ.
ಕಡಲೆಕಾಯಿ ಜಾತ್ರೆಗೆ 500 ವರ್ಷಗಳ ಇತಿಹಾಸವಿದ್ದು, ಪಕ್ಕದ ತಮಿಳುನಾಡಿನಿಂದಲೂ ಕಡಲೆ ಕಾಯಿ ವ್ಯಾಪಾರಿಗಳು ಆಗ
ಮಿಸಿದ್ರು. ಈ ಬಾರಿ ಪರಿಷೆಯಲ್ಲಿ ಕಡಲೆ ಕಾಯಿ ಬಾರಿ ದುಬಾರಿ ಬೆಲೆಗೆ ಮಾರಾಟವಾಗುತ್ತಿದೆ. ಒಂದು ಸೇರು ಹಸಿ ಕಡಲೆಕಾಯಿ 50 ರೂ. ಹಾಗೇ ಹುರಿದ ಕಡಲೆಕಾಯಿ ಸೇರಿಗೆ 80 ರೂಪಾಯಿನಂತೆ ಮಾರಾಟವಾಗುತ್ತಿದೆ. 2 ಸಾವಿರ ವ್ಯಾಪಾರಿಗಳು ಪರಿಷೆಯಲ್ಲಿದ್ದಾರೆ.
ಕಡಲೆಕಾಯಿ ಪರಿಷೆಗೆ ಇತಿಹಾಸವೇ ಇದೆ. ಬೆಂಗಳೂರಿನ ಮೂಲೆ ಮೂಲೆಯಿಂದ ಜನ ಬಂದು ಕಡಲೆ ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ. ಪರಿಷೆ ಮುಗಿಯೋವರೆಗೂ ಬುಲ್ ಟೆಂಪಲ್ ದೇಗುಲದ ಮುಂಭಾಗ ವಾಹನ ಓಡಾಟ ನಿಷೇಧಿಸಲಾಗಿದೆ.
ಕಳೆಗಟ್ಟಿದ ಕಡಲೆಕಾಯಿ ಪರಿಷೆ, ಹರಿದುಬಂದ ಜನಸಾಗರ
ಕಾರ್ತಿಕ ಮಾಸದ ಅಂಗವಾಗಿ ಬಸವನಗುಡಿಯಲ್ಲಿ ನಡೆಯುವ ಐತಿಹಾಸಿಕ ಕಡಲೆಕಾಯಿ ಪರಿಷೆಗೆ ಜನಸಾಗರ ಹರಿದು ಬರುತ್ತಿದೆ.
ನಗರದ ಜನತೆ ಪರಿಷೆಗೆ ಬಂದು ದೊಡ್ಡಗಣಪತಿ ಹಾಗೂ ದೊಡ್ಡ ಬಸವಣ್ಣ ದೇವಸ್ಥಾನಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿ ಬಡವರ ಬಾದಾಮಿಯನ್ನು ಖರೀದಿಸಿ ಸವಿದರು.
ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ರೈತರು ರಾಶಿ ರಾಶಿ ಕಡಲೆಕಾಯಿ ಮಾರಾಟದಲ್ಲಿ ತೊಡಗಿದ್ದ ದೃಶ್ಯ ಒಂದು ಕಡೆ ಕಂಡು ಬಂದರೆ ಮತ್ತೊಂದೆಡೆ ಮಕ್ಕಳು ಆಟದಲ್ಲಿ ತೊಡಗಿದ್ದರು.
ಇನ್ನು ಯುವತಿಯರ ಅಲಂಕಾರಿಕ ಆರ್ಟಿಫಿಷಿಯಲ್ ಆಭರಣಗಳಗಳತ್ತ ಯುವತಿಯರು ಹಾಗೂ ಮಹಿಳೆಯರು ಕಣ್ಣು ಹಾಯಿಸಿ ಖರೀದಿಯಲ್ಲಿ ಬ್ಯುಸಿಯಾಗಿದ್ದ ದೃಶ್ಯಗಳು ಕಂಡು ಬಂದವು. ಬೆಂಗಳೂರಿನ ಜನರು ಮಾತ್ರವಲ್ಲದೆ ವಿದೇಶಿ ಪ್ರವಾಸಿ ಗರು ಐತಿಹಾಸಿಕ ಪರಿಷೆಗೆ ಬಂದು ಬಸವನಿಗೆ ನಮಸ್ಕರಿಸಿ ನಮ್ಮ ಉದ್ಯಾನ ನಗರಿಯ ಸಂಸ್ಕøತಿ ಪರಂಪರೆಯ ಬಗ್ಗೆ ಮಾಹಿತಿ ಪಡೆದು ಪೋಟೋಗಳನ್ನು ತೆಗೆದುಕೊಂಡು ಅವರೂ ಸಹ ಕಡಲೆಕಾಯಿ ಸವಿದು ಮೆಚ್ಚುಗೆ ವ್ಯಕ್ತಪಡಿಸಿದರು.ನಾಳೆ ಸಂಜೆ ಕೆಂಪಾಂಬುದಿ ಕೆರೆಯಲ್ಲಿ ಸಾಂಪ್ರಾದಾಯಿಕ ತೆಪ್ಪೋತ್ಸವ ಕಾರ್ಯ ಕ್ರಮ ಹಮ್ಮಿಕೊಳ್ಳಲಾಗಿದ್ದು, ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಬ್ಯುಗಲ್ ರಾಕ್ ಉದ್ಯಾನವನ ಮತ್ತು ನರಸಿಂಹಸ್ವಾಮಿ ಉದ್ಯಾನವನದಲ್ಲಿ ಇಂದಿನಿಂದ 22ರ ವರೆಗೂ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಸುಮಾರು ಎರಡು ಸಾವಿರ ಮಳಿಗೆಗಳಿಗೆ ಅವಕಾಶ ಕಲ್ಪಿಸಲಾಗಿದ್ದು, ಭಕ್ತಾದಿಗಳ ಹಿತದೃಷ್ಟಿಯಿಂದ ಸಿಸಿ ಕ್ಯಾಮೆರಾ ಹಾಗೂ ದೇವರ ದರ್ಶನಕ್ಕಾಗಿ ಎಲ್‍ಇಡಿ ಸ್ಕ್ರೀನ್ ಅಳವಡಿಸಲಾಗಿದೆ. ಭದ್ರತೆಗಾಗಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿದೆ.
ಜೀವನ ಕಟ್ಟಿಕೊಟ್ಟ ಪರಿಷೆ
ಕಳೆದೆರಡು ವರ್ಷಗಳಿಂದ ಕಡ್ಲೆಕಾಯಿ ಪರಿಷೆಗೆ ಕಡಿವಾಣ ಹಾಕಿದ್ದ ಕೊರೊನಾ ಸೋಂಕನ್ನೂ ಮೀರಿ ಈ ಬಾರಿ ಪರಿಷೆ ಕಳೆಗಟ್ಟಿತ್ತು. ಹೊರರಾಜ್ಯಗಳಿಂದಲೂ ಆಗಮಿಸಿದ್ದ ರೈತರು, ವ್ಯಾಪಾರಿಗಳು ಪರಿಷೆಗೆ ಸಂಭ್ರಮ ಹೆಚ್ಚಿಸಿದ್ರು. ಒಟ್ಟಾರೆ ಬೆಂಗಳೂರಿಗರಿಗೆ ಖುಷಿ, ಕಡ್ಲೆಕಾಯಿ ಬೆಳೆಗಾರರಿಗೆ ಜೀವನವನ್ನಂತೂ ಪರಿಷೆ ಕಟ್ಟಿಕೊಡ್ತು.
ಹಿರಿಯರು, ಕಿರಿಯರು ವಯೋವೃದ್ಧರು ಎಂಬ ಬೇಧವಿಲ್ಲದೇ ಪರಿಷೆಯಲ್ಲಿ ಖುಷಿಯಿಂದ ಸುತ್ತಾಡಿದ್ರು. ಮುಗಿಬಿದ್ದು ಕಡ್ಲೆಕಾಯಿಯನ್ನು ಖರೀದಿಸುವುದರಲ್ಲಿ ಬ್ಯುಸಿ ಆಗಿದ್ರು.

0 Comments