ಕೊಳ್ಳೇಗಾಲ ಪಟ್ಟಣದ ಗ್ರೇಡ್. 1 ಗುತ್ತಿಗೆದಾರರಾದ ವಾಲೆ ಮಹಾದೇವರವರ ವಂತಿಗೆಯಿಂದ ಪಟ್ಟಣದಲ್ಲಿ ನಿರ್ಮಾಣವಾಗಿರುವ ಡಾ. ಅಂಬೇಡ್ಕರ್ ರವರ ಪ್ರತಿಮೆ ಉಳ್ಳ ಬಾಬಾ ಸಾಹೇಬ್ ಅಂಬೇಡ್ಕರ್ ಸರ್ಕಲ್ ಮಂಟಪ ದಲ್ಲಿ ಪ್ರತಿಮೆ ಪ್ರತಿಷ್ಠಾಪನೆ ಕುರಿತು ಕರೆದ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತನ್ನುದ್ದೇಶಿಸಿ ಡಾ. ಅಂಬೇಡ್ಕರ್ ರವರ ಅನುಯಾಯಿಯಾದ ಗುತ್ತಿಗೆದಾರ ವಾಲೆ ಮಹದೇವರವರು ಮಾತನಾಡಿ, ಪಟ್ಟಣದಲ್ಲಿ ಸರ್ಕಾರಿ ಆಸ್ಪತ್ರೆ ಪಕ್ಕದಲ್ಲಿ ನಿರ್ಮಾಣವಾಗಿರುವ ಬಾಬಾ ಸಾಹೇಬ್ ಅಂಬೇಡ್ಕರ್ ರವರ ನೂತನ ಮಂಟಪದ ಕಾಮಗಾರಿ ಪೂರ್ಣಗೊಂಡಿದ್ದು ದಿನಾಂಕ 26 ರ ಸಂವಿಧಾನ ಸಮರ್ಪಣೆ ದಿನದ ಅಂಗವಾಗಿ ನೂತನ ಮಂಟಪದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಕಂಚಿನ ಪ್ರತಿಮೆ ಪ್ರತಿಷ್ಠಾಪನೆ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು,
ಬಾಬಾ ಸಾಹೇಬ್ ಅಂಬೇಡ್ಕರ್ ರವರ ಕಂಚಿನ ಪ್ರತಿಮೆ ದಿನಾಂಕ 26 ರಂದು ಬೆಳಿಗ್ಗೆ 10:30 ಗಂಟೆಗೆ ಬೆಂಗಳೂರಿನಿಂದ ಆಗಮಿಸಲಿದೆ,
ಪಟ್ಟಣದ ಹಿರಿಯ ಮುಖಂಡರು ಹಾಗೂ ಸಂಘದ ಅಧ್ಯಕ್ಷರು ಹಾಗೂ ಯಜಮಾನರುಗಳ ಮಾರ್ಗದರ್ಶನದ ಮೇರೆಗೆ ವಾದ್ಯಗೋಷ್ಠಿ, ತಮಟೆ, ನಗಾರೆ, ಹಾಗೂ ವಿವಿಧ. ಕಲಾ ತಂಡಗಳೊಡನೆ ಹ್ಯಾಂಡ್ ಪೋಸ್ಟ್ ನಿಂದ ಅಲಂಕೃತ ತೆರೆದ ವಾಹನದಲ್ಲಿ ಪ್ರತಿಮೆ ಮೆರವಣಿಗೆ ಮಾಡಿಕೊಂಡು ಕೊಳ್ಳೇಗಾಲಕ್ಕೆ ತಂದು ಮಂಟಪದಲ್ಲಿ ಪ್ರತಿಮೆಯನ್ನು ಪ್ರತಿಷ್ಠಾಪನೆ ಮಾಡಲು ತೀರ್ಮಾನಿಸಲಾಗಿದೆ, ತಾಲ್ಲೂಕಿನ ಎಲ್ಲ ಗ್ರಾಮಗಳ ಮುಖಂಡರು ಹಿರಿಯರು, ಸಂಘ ಸಂಸ್ಥೆಗಳ ಸದಸ್ಯರುಗಳು ಮಹಿಳಾ ಸಂಘದವರುಗಳು ಕಾರ್ಯಕ್ರಮಕ್ಕೆ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಕೇಳಿಕೊಂಡರು,
ಪತ್ರಿಕಾಗೋಷ್ಟಿಯಲ್ಲಿ ಡಾ.ಬಿ. ಆರ್. ಅಂಬೇಡ್ಕರ್ ಪ್ರತಿಮೆ ಲೋಕಾರ್ಪಣೆ ಸಮಿತಿ ಉಪಾಧ್ಯಕ್ಷ, ಮಹೇಶ್ವರ್, ಕಾರ್ಯದರ್ಶಿ ಸಿದ್ದಪ್ಪ, ಭೀಮನಗರದ ಯಜಮಾನರು ಚಿಕ್ಕಮಾಳಿಗೆ, ಶಿವಸ್ವಾಮಿ, ಸಿದ್ದು, ಜವರಯ್ಯ, ರಾಜಶೇಖರ್, ಸಂಚಾಲಕ ರಂಗಜೋಳಿಗೆ ಮೂರ್ತಿ ಇದ್ದರು,

0 Comments