Ticker

6/recent/ticker-posts

Ad Code

Responsive Advertisement

ನೀರಾವರಿ ವಿಷಯದಲ್ಲಿ ಭಾರೀ ಅನ್ಯಾಯ : ಕಾಂಗ್ರೆಸ್ ಆರೋಪ

ಬೆಂಗಳೂರು,ನ.೨೪- ತಮಿಳುನಾಡು ರ‍್ಕಾರ ಸುಪ್ರೀಂಕರ‍್ಟ್‍ಗೆ ಮೇಲ್ಮನವಿ ಸಲ್ಲಿಸಿ ಎರಡು ದಿನಗಳ ಕಳೆದರೂ ರಾಜ್ಯ ಮುಖ್ಯಮಂತ್ರಿಯಾಗಲಿ ಜಲಸಂಪನ್ಮೂಲ ಸಚಿವರಾಗಲಿ ಪ್ರತಿಕ್ರಿಯೆ ನೀಡಿಲ್ಲ. ಕೇವಲ ಭಾವನಾತ್ಮಕ ರಾಜಕಾರಣದಲ್ಲೇ ಮುಳುಗಿ ಹೋಗಿದ್ದಾರೆ. ಇವರಿಗೆ ಚುನಾವಣೆಯೇ ಮುಖ್ಯ ಎಂದು ಕಾಂಗ್ರೆಸ್ ವಕ್ತಾರರಾದ ಲಕ್ಷ್ಮಣ್  ಆರೋಪಿಸಿದರು.
ಕಾವೇರಿಗೆ ಅಡ್ಡಲಾಗಿ ತಮಿಳುನಾಡು ರ‍್ಕಾರ ನರ‍್ಮಿಸುತ್ತಿರುವ ಅಣೆಕಟ್ಟು ಯೋಜನೆಗೆ ರ‍್ನಾಟಕ ರ‍್ಕಾರ ಆಕ್ಷೇಪಣೆ ಸಲ್ಲಿಸದೆ ಇರುವುದರಿಂದ ಮುಂದಿನ ದಿನಗಳಲ್ಲಿ ನೀರಾವರಿ ವಿಷಯದಲ್ಲಿ ಭಾರೀ ಅನ್ಯಾಯ ಅನುಭವಿಸಬೇಕಾಗುತ್ತದೆ ಎಂದು ಆರೋಪಿಸಿದ್ದಾರೆ.


ಕೆಪಿಸಿಸಿ ಕಚೇರಿಯಲ್ಲಿಂದು ಜಂಟಿ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜನಸಂಕಲ್ಪ ಯಾತ್ರೆಯಲ್ಲಿ ಸಮಯ ಕಳೆಯುತ್ತಿದ್ದಾರೆ. ಕಾಂಗ್ರೆಸ್ ನಾಯಕರನ್ನು ಟೀಕಿಸುವುದರಲ್ಲೇ ಅವರ ಸಮಯ ವ್ರ‍್ಥವಾಗುತ್ತಿದೆ. ರಾಜ್ಯ ಶ್ರೇಯೋಭಿವೃದ್ಧಿಗಿಂತ ಅವರಿಗೆ ಪಕ್ಷದ ರಾಜಕಾರಣವೇ ಮುಖ್ಯವಾಗಿದೆ ಎಂದು ಆರೋಪಿಸಿದರು.
ಹೊಗೆನಕಲ್ಲಿನಲ್ಲಿ ತಮಿಳುನಾಡು ರ‍್ಕಾರ ನರ‍್ಮಿಸಲು ಉದ್ದೇಶಿಸಿರುವ ೮೫೦೦ ಕೋಟಿ ರೂ. ವೆಚ್ಚದ ನೀರಾವರಿ ಯೋಜನೆಗಳಿಗೆ ೨೦೨೦ರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಈ ಯೋಜನೆಗೆ ರ‍್ನಾಟಕ ರ‍್ಕಾರ ಆಕ್ಷೇಪಣೆ ಸಲ್ಲಿಸಿತ್ತು. ಸುಪ್ರೀಂಕರ‍್ಟ್‍ನಲ್ಲಿ ವಿಚಾರಣೆ ನಡೆದಿದ್ದು, ಕಳೆದ ಆಗಸ್ಟ್‍ನಲ್ಲಿ ಯೋಜನೆಗೆ ಆಕ್ಷೇಪಣೆ ಸಲ್ಲಿಸಲು ನ್ಯಾಯಮರ‍್ತಿಗಳು ರ‍್ನಾಟಕಕ್ಕೆ ೧೫ ದಿನಗಳ ಕಾಲಾವಕಾಶ ನೀಡಿದ್ದರು. ಆದರೆ, ನಮ್ಮ ರ‍್ಕಾರ ಆಕ್ಷೇಪಣೆ ಸಲ್ಲಿಸಿಲ್ಲ.
ಹೀಗಾಗಿ ರ‍್ನಾಟಕ ರ‍್ಕಾರದಿಂದ ಯೋಜನೆಗೆ ಆಕ್ಷೇಪ ಇಲ್ಲ. ಈ ಮೊದಲು ಸಲ್ಲಿಸಿದ್ದ ರ‍್ಜಿಯನ್ನು ವಜಾಗೊಳಿಸಿ ಎಂದು ಕಳೆದ ಎರಡು ದಿನಗಳ ಹಿಂದೆ ತಮಿಳುನಾಡು ರ‍್ಕಾರ ಸುಪ್ರೀಂಕರ‍್ಟ್‍ಗೆ ಮನವಿ ಮಾಡಿದೆ.
ಬಹುತೇಕ ಈ ಮನವಿ ಆಧರಿಸಿ ಸುಪ್ರೀಂಕರ‍್ಟ್ ರಾಜ್ಯದ ರ‍್ಜಿಯನ್ನು ತಿರಸ್ಕರಿಸುವ ಸಾಧ್ಯತೆ ಇದೆ. ಇದು ನಡೆದಿದ್ದೇ ಆದರೆ ರ‍್ನಾಟಕಕ್ಕೆ ಭಾರೀ ಅನ್ಯಾಯವಾಗಲಿದೆ ಎಂದು ಅವರು ಎಚ್ಚರಿಸಿದರು.
ಕಾವೇರಿ ನದಿಗೆ ಅಡ್ಡಲಾಗಿ ಮೇಕೆದಾಟು ಬಳಿ ೧೦ ಸಾವಿರ ಕೋಟಿ ರೂ. ವೆಚ್ಚದಲ್ಲಿ ಸಮತೋಲನ ಅಣೆಕಟ್ಟು ನರ‍್ಮಿಸಲು ಸಿದ್ದರಾಮಯ್ಯ ರ‍್ಕಾರ ಯೋಜನೆ ರೂಪಿಸಿತ್ತು. ಈ ಯೋಜನೆ ಕುಡಿಯುವ ನೀರು ಮತ್ತು ವಿದ್ಯುತ್ ಉತ್ಪಾದನೆಗೆ ಮಾತ್ರ ಸೀಮಿತವಾಗಿತ್ತು.
ಅಣೆಕಟ್ಟು ನರ‍್ಮಾಣದಿಂದ ಶೇ.೯೬ರಷ್ಟು ಲಾಭ ತಮಿಳುನಾಡಿಗೆ ಆಗುತ್ತಿತ್ತು. ರಾಜ್ಯಕ್ಕೆ ಶೇ.೪ರಷ್ಟು ಮಾತ್ರ ಪ್ರಯೋಜನ ಸಿಗುತ್ತದೆ. ಆದರೆ, ಬೆಂಗಳೂರಿನ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ದೊರೆಯುವ ಸಾಧ್ಯತೆ ಇದೆ. ಈ ಯೋಜನೆಗೆ ತಮಿಳುನಾಡು ಅಡ್ಡಗಾಲಾಗಿದೆ. ಪದೇ ಪದೇ ಸುಪ್ರೀಂಕರ‍್ಟ್ ಮೊರೆಯೋಗುತ್ತಿದೆ.
ಕೇಂದ್ರ ಜಲಶಕ್ತಿ ಸಚಿವಾಲಯದ ಅೀನದಲ್ಲಿ ಬರುವ ನೀರು ನರ‍್ವಹಣಾ ಸಮಿತಿ ಸಭೆಯಲ್ಲಿ ಮೇಕೆದಾಟು ಅಣೆಕಟ್ಟಿನ ವಿಚಾರ ೧೭ ಬಾರಿ ವಿಷಯ ಪಟ್ಟಿಯಲ್ಲಿ ಸರ‍್ಪಡೆಯಾಗಿ ರ‍್ಚೆಯಾಗದೆ ಮುಂದೂಡಲ್ಪಟ್ಟಿದೆ. ಇದಕ್ಕೆ ಕೇಂದ್ರ ಜಲಶಕ್ತಿ ಸಚಿವ ಬೈರೋನ್‍ಸಿಂಗ್ ಶೇಖಾವತ್ ಅವರ ಹಸ್ತಕ್ಷೇಪವಿದೆ. ತಮಿಳುನಾಡಿನ ಬಿಜೆಪಿ ನಾಯಕರ ಚಿತಾವಣೆ ಎಂದು ಆರೋಪಿಸಿದರು.
ಹೊಗೆನಕಲ್ಲು ಯೋಜನೆಗೆ ನಾವು ಪ್ರತಿರೋಧ ವ್ಯಕ್ತಪಡಿಸುವಲ್ಲಿ ನರ‍್ಲಕ್ಷ್ಯ ವಹಿಸುತ್ತಿದ್ದೇವೆ. ಮತ್ತೊಂದೆಡೆ ಮೇಕೆದಾಟು ಯೋಜನೆಗೆ ತಮಿಳುನಾಡು ರ‍್ಕಾರ ತೀವ್ರ ವಿರೋಧ ವ್ಯಕ್ತಪಡಿಸುತ್ತಿದೆ ಎಂದು ಹೇಳಿದರು. 

Post a Comment

0 Comments

Ad Code

Responsive Advertisement