Ticker

6/recent/ticker-posts

Ad Code

Responsive Advertisement

ವಿದೇಶಿ ಸಂಸ್ಕೃತಿ ಬೇಡ, ಭಾರತೀಯ ಸಂಸ್ಕೃತಿ ಉಳಿಸೋಣ-ಖ್ಯಾತ ಭರತನಾಟ್ಯ ಕಲಾವಿದೆ ಶ್ರೀಮತಿ ರೇಖಾ

ಗಾಂಧಿನಗರ:ಕರ್ನಾಟಕ  ಸಂಗೀತ ನೃತ್ಯ ಅಕಾಡೆಮಿ ಬೆಂಗಳೂರು ಮತ್ತು ಶ್ರೀ ಲಲಿತಾ ಕಲಾನಿಕೇತನ ವತಿಯಿಂದ ಗುರು ಶಿಷ್ಯ ಪರಂಪರೆ ಮುಕ್ತಾಯ ಸಮಾರಂಭ  ಆಯೋಜಿಸಲಾಯಿತು.


ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಅಧ್ಯಕ್ಷರಾದ ಶ್ರೀಮತಿ ರೇಖಾರವರು ಗುರುಶಿಷ್ಯ ಪರಂಪರೆ ಸಮಾರಂಭವನ್ನು ದೀಪಾ ಬೆಳಗಿಸಿ ಉದ್ಘಾಟಿಸಿದರು.

ಮಕ್ಕಳಿಂದ ಭರತನಾಟ್ಯ,ಕೂಚಿಪುಡಿ ನೃತ್ಯ ಭಾರತೀಯ ಕಲೆ ಸಾಹಿತ್ಯ ಸಾರುವ ಕಲಾ ಉತ್ಯವ ನೇರವೇರಿತು.

ಅಧ್ಯಕ್ಷರಾದ ಶ್ರೀಮತಿ ರೇಖಾರವರು ಮಾತನಾಡಿ ಭಾರತೀಯ ಕಲೆಯಲ್ಲಿ ಭರತನಾಟ್ಯ ಪುರಾತನ,ಪ್ರಾಚೀನ ಕಲೆಯಾಗಿದೆ .ವಿದೇಶಿ ಸಂಸ್ಕೃತಿ ಮಾರುಹೋದ ಯುವ ಜನತೆ ನಮ್ಮ ಭಾರತೀಯ ಸಂಸ್ಕೃತಿ, ಸಂಪ್ರಾದಯ ಮರೆಯುತ್ತಿದ್ದಾರೆ.

ನಮ್ಮ ದೇಶದ ಕಲಾ ಪ್ರಕಾರಗಳಾದ ಭರತನಾಟ್ಯ, ಕೂಚುಪುಡಿ ಮತ್ತು ಕರ್ನಾಟಕ, ಹಿಂದೂಸ್ತಾನಿ ಸಂಗೀತ ಉಳಿಸಿ,ಬೆಳಸಲು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಮತ್ತು ಶ್ರೀ ಲಲಿತಾ ಕಲಾನಿಕೇತನ ಸಹಯೋಗದಲ್ಲಿ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ.

ಬೆಂಗಳೂರುನಗರ ಮತ್ತು ಗ್ರಾಮೀಣ ಪ್ರದೇಶದ ಆಸಕ್ತಿ ಇರುವ ಮಕ್ಕಳಿಗೆ ಭರತನಾಟ್ಯ ಕಲೆಯನ್ನು ಕಲಿಸಲಾಗುತ್ತಿದೆ.

ನಮ್ಮ ಸಂಸ್ಥೆಯಿಂದ ಬಾಲಕ,ಬಾಲಕಿಯರಿಗೆ ಉಚಿತವಾಗಿ ತರಭೇತಿ ನೀಡಲಾಗುತ್ತಿದೆ ಎಂದು ಹೇಳಿದರು.

Post a Comment

0 Comments

Ad Code

Responsive Advertisement