Ticker

6/recent/ticker-posts

Ad Code

Responsive Advertisement

ಹಾಲಿನ ನಂತರ ಗ್ರಾಹಕರಿಗೆ ತುಪ್ಪದ ಬರೆ, ೨ ತಿಂಗಳಲ್ಲಿ ೪ ಬಾರಿ ದರ ಏರಿಕೆ


ಬೆಂಗಳೂರು: ಗ್ರಾಹಕರಿಗೆ ಹಾಲು, ಮೊಸರಿನ ದರದ ಬಿಸಿ ತಟ್ಟಿದೆ. ಇದರ ಮಧ್ಯೆ ಕೆಎಂಎಫ್ ಎಲ್ಲ ಇತರ ಉತ್ಪನ್ನಗಳ ದರವನ್ನೂ ಏರಿಕೆ ಮಾಡಿದ್ದು, ಈ ಮೂಲಕ ಗ್ರಾಹಕರಿಗೆ ಗಾಯದ ಮೇಲೆ ಬರೆ ಎಳೆದಿದೆ. ಹಾಲು, ಮೊಸರಿನ ದರವನ್ನು ಲೀಟರ್‌ಗೆ ಎರಡು ರೂಪಾಯಿ ಹೆಚ್ಚಳ ಮಾಡಿದ್ದ ಕೆಎಂಎಫ್ ಮತ್ತೆ ಗ್ರಾಹಕರಿಗೆ ಬರೆ ನೀಡಿದೆ.


ದಸರಾ ಹಬ್ಬದಿಂದಲೂ ತುಪ್ಪದ ದರ ಹೆಚ್ಚಾಗುತ್ತಲೇ ಇದೆ. ಒಮ್ಮೆಗೆ ದರ ಏರಿಕೆ ಮಾಡದೇ ಕಳೆದ ೨ ತಿಂಗಳಿನಲ್ಲಿ ೪ ಬಾರಿ ಹಂತ-ಹAತವಾಗಿ ತುಪ್ಪದ ದರ ಏರಿಕೆ ಮಾಡಿದೆ. ಸದ್ಯ ಒಟ್ಟು ೧೭೦ ರೂ.ವರೆಗೆ ದರ ಹೆಚ್ಚಳ ಮಾಡಿದೆ. ಕೇವಲ ತುಪ್ಪ ಮಾತ್ರವಲ್ಲ ಇದೀಗ ಕೆಎಂಎಫ್‌ನ ಎಲ್ಲ ಉತ್ಪನ್ನಗಳ ದರವೂ ಶೇ.೫ ರಿಂದ ೧೫ ರಷ್ಟು ಏರಿಕೆ ಕಂಡಿದೆ. ಒಂದು ಕೆಜಿಗೆ ತುಪ್ಪದ ದರ ೫೦ ರೂ. ಹೆಚ್ಚಳವಾಗುವ ಸಾಧ್ಯತೆಯಿದೆ.
ಈ ಮೊದಲು ಹಾಲು, ಮೊಸರು ದರ ಹೆಚ್ಚಳಕ್ಕೆ ಕೆಎಂಎಫ್ ಹಲವು ಬಾರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ ಚುನಾವಣೆ ವರ್ಷ ದರ ಏರಿಕೆಗೆ ಸಿಎಂ ಒಪ್ಪಿರಲಿಲ್ಲ. ಇದರಿಂದಾಗಿ ಸೈಲೆಂಟಾಗಿಯೇ ತುಪ್ಪದ ದರ ಏರಿಕೆ ಮಾಡುತ್ತಿತ್ತು. ಅದೇ ರೀತಿ ಕೆಎಂಎಫ್ ತನ್ನ ಇತರೆ ಉತ್ಪನ್ನಗಳ ದರವನ್ನೂ ಹೆಚ್ಚಳ ಮಾಡಿದೆ. ಈ ಬಗ್ಗೆ ಕೆಎಂಎಫ್  ಅಧ್ಯಕ್ಷರನ್ನು ಕೇಳಿದ್ರೆ ತುಪ್ಪದ ದರ ಹೆಚ್ಚಳ ಮಾಡಿದ್ದು ನಿಜ. ಇತರ ಉತ್ಪನ್ನಗಳ ದರವೂ ಜಾಸ್ತಿ ಮಾಡಿದ್ದೇವೆ. ತುಪ್ಪ, ಇತರ ಪ್ರಾಡೆಕ್ಟ್ ದರ ಹೆಚ್ಚು ಮಾಡೋದಿಲ್ಲ ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ.
ಇನ್ನೊಂದೆಡೆ ಹಾಲಿನ ದರ ಹೆಚ್ಚಳ ಬೆನ್ನಲ್ಲೆ ಟೀ ಕಾಫಿ ದರ ಏರಿಕೆಯ ಭೀತಿ ಎದುರಾಗಿತ್ತು. ಆದರೆ ಸದ್ಯ ಈ ವಿಚಾರಕ್ಕೆ ಹೊಟೇಲ್ ಮಾಲೀಕರ ಸಂಘ ಫುಲ್‌ಸ್ಟಾಪ್ ಇಟ್ಟಿದೆ. ಹಾಲು, ಮೊಸರಿನ ದರ ಎರಡು ರೂಪಾಯಿ ಹೆಚ್ಚಳ ಮಾಡಿದರೂ ಹೊಟೇಲ್‌ನಲ್ಲಿ ದರ ಏರಿಕೆ ಮಾಡಲ್ಲ. ಈ ವಿಚಾರದ ಬಗ್ಗೆ ಸ್ವಲ್ಪ ದಿನ ಕಾದು ಚರ್ಚೆ ಮಾಡ್ತೀವಿ ಎಂದು ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ ರಾವ್ ಸ್ಪಷ್ಟನೆ ನೀಡಿದ್ದಾರೆ.

Post a Comment

0 Comments

Ad Code

Responsive Advertisement