ಕೊಳ್ಳೇಗಾಲ ಸುದ್ದಿ: ಕರುನಾಡ ಕಂದ, ಕರ್ನಾಟಕದ ರಾಜವಂಶದ ಸಿಂಗನಲ್ಲೂರು ಪುಟ್ಟಸ್ವಾಮಯ್ಯ ಮೊಮ್ಮಗ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರ ವಾರ್ಷಿಕ ಪುಣ್ಯ ಸ್ಮರಣೆಯ, ಅಂಗವಾಗಿ ಹನೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಮುಖಂಡರಾದ ಆರ್. ಮಂಜುನಾಥ್ ರವರ ನೇತೃತ್ವದಲ್ಲಿ ಅಪ್ಪು ನಮನ ಕಾರ್ಯಕ್ರಮದ ಅಂಗವಾಗಿ ರಾಜವಂಶದ ತವರೂರಾದ ಸಿಂಗನಲ್ಲೂರಿನ ಸರ್ಕಾರಿ ಶಾಲಾ ಆವರಣದಲ್ಲಿ ರಕ್ತದಾನ ಶಿಬಿರ, ಹಾಗೂ ನೇತ್ರದಾನ ಶಿಬಿರ ಮತ್ತು ಸಿಂಗನಲ್ಲೂರಿನ ಮಕ್ಕಳಿಂದ ಅಪ್ಪುನುಡಿ ನಮನ ಸಂಗೀತ ಸಂಜೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು,
ಈ ಕಾರ್ಯಕ್ರಮದಲ್ಲಿ ಚಿತ್ರ ನಟ ಅಕ್ಷನ್ ಪ್ರಿನ್ಸ್ ದೃವಸರ್ಜ ಹಾಗೂ ಕಿರುತೆರೆ ನಟ ಶಿವರಾಜ್ ಮುಖ್ಯ ಆಕರ್ಷಣೆಯಾಗಿದ್ದುಕಿರುತೆರೆ ನಟ ಶಿವರಾಜ್ ರವರ ನಿರೂಪಣೆ ಕಾರ್ಯಕ್ರಮಕ್ಕೆ ಮೆರುಗನ್ನು ನೀಡಿತ್ತು.
ಈ ಸಂದರ್ಭದಲ್ಲಿ ಹನೂರು ಜೆಡಿಎಸ್ ಮುಖಂಡರಾದ ಆರ್. ಮಂಜುನಾಥ್ ರವರು ಮಾತನಾಡಿ ಕರುನಾಡ ಕಂದ ವರ ನಟ ಡಾ. ರಾಜ್ ಕುಮಾರ್ ರವರ ಮಗ ಪುನೀತ್ ರಾಜ್ ಕುಮಾರ್ ರವರ ವಾರ್ಷಿಕ ಪುಣ್ಯ ಸ್ಮರಣೆಯ ಅಂಗವಾಗಿ ರಕ್ತದಾನ ಶಿಬಿರ ಮತ್ತು ನೇತ್ರದಾನ ಶಿಬಿರವನ್ನು ಆಯೋಜಿಸಲಾಗಿದೆ, ಹಾಗೂ ಸಿಂಗನಲ್ಲೂರಿನ ಮಕ್ಕಳಿಂದ ಸಂಗೀತ ಸಂಜೆ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ ಈ ಕಾರ್ಯಕ್ರಮದಲ್ಲಿ ಪುನೀತ್ ರಾಜ್ ಕುಮಾರ್ ರವರು ನಟಿಸಿರುವ ಎಲ್ಲ ಚಿತ್ರಗಳ ಸಾಂಗ್ ಗಳಿಗೆ ಮಕ್ಕಳು ನೃತ್ಯ ಮಾಡಲಿದ್ದಾರೆ,
ಅಪ್ಪು ರವರು ನಮ್ಮನಗಲಿ ಒಂದು ವರ್ಷ ಕಳೆದಿದೆ, ಅಪ್ಪು ಅಗಲಿಕೆಯ ನೋವು ಇನ್ನು ಸಹ ಮಾಸಿಲ್ಲ, ಪುನೀತ್ ರಾಜ್ ಕುಮಾರ್ ರವರು ಚಿತ್ರ ನಟರಾಗಿದ್ದು ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ ಅವರು ಜೀವತ ಕಾಲದಲ್ಲಿ ಹಲವಾರು ಜನಪರ ಸೇವೆಗಳನ್ನು ಮಾಡಿದ್ದಾರೆ ಅಪ್ಪು ರಾಜ್ ಕುಮಾರ್ ರವರ ಮಗನಾಗಿ ಹುಟ್ಟಿದ್ದರು ಸಾಮಾನ್ಯರಲ್ಲಿ ಸಾಮಾನ್ಯ ವ್ಯಕ್ತಿ ಯಾಗಿ ಒಂದು ಶಕ್ತಿಯಾಗಿ ಬದುಕಿದ್ದರು ಅಪ್ಪುರವರು ವೃದ್ದಾಶ್ರಮಗಳಿಗೆ ಅನಾಥಾಶ್ರಮಗಳಿಗೆ ನೆರವನ್ನು ನೀಡಿದ್ದಾರೆ, ಹಾಗೂ ಅನಾಥ ಮಕ್ಕಳಿಗೆ ವಿದ್ಯಾಭ್ಯಾಸವನ್ನು ಕೊಡಿಸಿದ್ದಾರೆ, ಅಪ್ಪು ಅವರ ಸೇವೆಯನ್ನು ವರ್ಣಿಸಲು ಅಸಾಧ್ಯ ನೋಡುವವರ ಕಣ್ಣಿಗೆ ಅವರು ತೆರೆಯ ಮೇಲೆ ಹೀರೊ ಆಗಿದ್ದು ತೆರೆಯ ಮರೆಯಲ್ಲಿ ಅವರು ನಿಜ ಹೀರೊ ಆಗಿ ಸೇವೆಯನ್ನು ಮಾಡಿದ್ದಾರೆ ಅವರ ಸೇವೆಯನ್ನು ಸ್ಮರಿಸುವಂತ ಕೆಲಸವನ್ನು ನಾವು ಮಾಡಬೇಕಾಗಿದೆ,
ಅಪ್ಪುರವರು ನಾಡಿಗೆ ನೀಡಿದಂತೆ ಕೊಡುಗೆ ಅಪಾರವಾದದ್ದು ಅವರು ಒಂದು ವ್ಯಕ್ತಿಯಲ್ಲ ಒಂದು ಶಕ್ತಿಯ ಚಿಲುಮೆ ಅವರ ನೆನಪಿನಲ್ಲಿ ನಾವು ಈ ಕಾರ್ಯಕ್ರಮವನ್ನ ಆಯೋಜಿಸಿದ್ದೇವೆ, ಇನ್ನು ಮುಂದೇನು ಕೂಡ ಅಪ್ಪು ಹೆಸರಿನಲ್ಲಿ ಹಲವಾರು ಸೇವ ಕಾರ್ಯಗಳನ್ನು ಮಾಡುತ್ತೇವೆ ಎಂದರು.
ಈ ಸಂದರ್ಭದಲ್ಲಿ ಕ್ಷೇತ್ರದ ಹಲವಾರು ಕಾರ್ಯಕರ್ತರು ಮುಖಂಡರು, ಯುವಕರು, ಸಿಂಗನಲ್ಲೂರಿನ ಹಿರಿಯರು ಯಜಮಾನರುಗಳು ಇದ್ದರು

0 Comments