ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಪಶ್ಚಿಮ ವಲಯ ವ್ಯಾಪ್ತಿಯಲ್ಲಿ *ಮಾನ್ಯ ಮುಖ್ಯ ಆಯುಕ್ತರಾದ ಶ್ರೀ ತುಷಾರ್ ಗಿರಿ ನಾಥ್ ರವರು ಇಂದು ಬೆಳಗ್ಗೆ 6.30 ರಿಂದ 9.30 ಗಂಟೆಯವರೆಗೆ ರವರೆಗೆ* ಸಂಬಂಧಪಟ್ಟ ಅಧಿಕಾರಿಗಳ ಜೊತೆಗೆ ಸುಮಾರು *6 ಕಿ.ಮೀ* ರಸ್ತೆಯನ್ನು *ಕಾಲ್ನಡಿಗೆಯ ಮೂಲಕ ವಾಟಾಳ್ ನಾಗರಾಜ್ ರಸ್ತೆ(ಸುಜಾತ ಟಾಕೀಸ್ ಬಳಿಯಿಂದ), ಡಾ. ರಾಜ್ ಕುಮಾರ್ ರಸ್ತೆ, ರಾಜಾಜಿನಗರ 6ನೇ ಬ್ಲಾಕ್ ವೃತ್ತ, ಮಾಗಡಿ ಜಂಕ್ಷನ್ ನಿಂದ ವೆಸ್ಟ್ ಆಫ್ ಕಾರ್ಡ್ ರಸ್ತೆ(ಟೋಲ್ ಗೇಡ್ ಕಡೆಗೆ), ಟೋಲ್ ಗೇಟ್ ಜಂಕ್ಷನ್, ಜೈ ಮುನಿರಾವ್ ವೃತ್ತ ಹಾಗೂ ಹೌಸಿಂಗ್ ಬೋರ್ಡ್ ಜಂಕ್ಷನ್ ವರೆಗೆ ಪರಿಶೀಲನೆ ನಡೆಸಿದರು.*
*ವಾಟಾಳ್ ನಾಗರಾಜ್ ರಸ್ತೆ ಪರಿಶೀಲನೆ:*
• ವಾಟಾಳ್ ನಾಗರಾಜ್ ರಸ್ತೆಯನ್ನು ಮಿಲ್ಲಿಂಗ್ ಮಾಡಿ ರಸ್ತೆ ಮೇಲ್ಮೈ ಸರಿಪಡಿಸಿ
• ಲೂಲು ಮಾಲ್ ಮುಂಭಾಗ ಪಾದಚಾರಿ ಮಾರ್ಗ ಒತ್ತುವರಿ ತೆರವುಗೊಳಿಸಿ
• ಪಾದಚಾರಿ ಮಾರ್ಗದ ದುರಸ್ತಿ ಹಾಗೂ ಚರಂಡಿ ಸಮಸ್ಯೆಯನ್ನು ಬಗೆಹರಿಸಿ ಹಾಕಿರುವ ಬ್ಯಾರಿಕೇಟ್ ಅನ್ನು ತೆರವುಗೊಳಿಸಿ ಪಾದಚಾರಿಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಿ
• ಮೀಡಿಯನ್ ನಲ್ಲಿ ದುರಸ್ತಿಯಲ್ಲಿರುವ ವಿದ್ಯುತ್ ದೀಪಗಳನ್ನು ಅಳವಡಿಸಿ
• ರಸ್ತೆ ಬದಿಯ ಮರದ ಕೊಂಬೆಗಳನ್ನು ಕಟಾವು ಮಾಡಿ
• ಹ್ಯಾಂಗಿ ಕೇಬಲ್ ತೆರವುಗೊಳಿಸಿ
• ರಸ್ತೆ ಬದಿ ಸಂಗ್ರಹವಾಗಿರುವ ಮಣ್ಣನ್ನು ತೆರವುಗೊಳಿಸಿ
• ನೀರು ಹೋಗುಲು ಅಗಲವಾದ ಪೈಪ್ ಹಾಕಿ
• ಸುಜಾತ ಟಾಕೀಸ್ ಮುಂಭಾಗದ ಗೋಡೆಯ ಮೇಲೆ ಅಂಟಿಸಿರುವ ಪೋಸ್ಟರ್ ಗಳನ್ನು ತೆರವುಗೊಳಿಸಿ
• ಗೋಲ್ಡನ್ ಹೈಟ್ಸ್ ಮುಂಭಾಗ ಹಾಕಿದ್ದ ಫ್ಲೆಕ್ಸ್ ಅನ್ನು ತೆರವುಗೊಳಿಸಲಾಯಿತು
*ಡಾ. ರಾಜ್ ಕುಮಾರ್ ರಸ್ತೆ ಪರಿಶೀಲನೆ(ಮಾಗಡಿ ರಸ್ತೆ ಕಡೆಗೆ):*
• ಡಾ. ರಾಜ್ ಕುಮಾರ್ ರಸ್ತೆಯ ಗೋಡೆಗಳ ಮೇಲೆ ಅಂಟಿಸಿರುವ ಪೋಸ್ಟರ್ ಗಳನ್ನು ತೆರವುಗೊಳಿಸಿ
• ಮುಖ್ಯ ರಸ್ತೆಗಳ ಬದಿಯಿರುವ ವಾರ್ಡ್ ರಸ್ತೆಗಳ ಸುಮಾರು 500 ಮೀಟರ್ ಪ್ರದೇಶ ಸ್ವಚ್ಛವಾಗಿರುವಂತೆ ನೋಡಿಕೊಳ್ಳಬೇಕು
• ರಸ್ತೆ ಬದಿಯ ಮರದ ಕೊಂಬೆಗಳನ್ನು ಕಟಾವು ಮಾಡಬೇಕು. ಕಟಾವು ಮಾಡಿದ ಕೊಂಬೆಗಳನ್ನು ಒಂದು ಸ್ಥಳಕ್ಕೆ ತೆಗೆದೊಯ್ದು ಶೆಡ್ಡರ್ ಮೂಲಕ ಪುಡಿ ಮಾಡಲು ಸೂಚನೆ ನೀಡಿದರು.
• ಶಿಲ್ಟ್ ಅಂಡ್ ಟ್ರ್ಯಾಕ್ಟರ್ ಮೂಲಕ ರಸ್ತೆ ಬಿದಿ ಸಂಗ್ರಹವಾಗಿರುವ ಮಣ್ಣು/ತ್ಯಾಜ್ಯ ಹಾಗೂ ಕಟ್ಟಡ ಭಗ್ನಾವಶೇಷಗಳನ್ನು ಸ್ಥಳದಲ್ಲೇ ತೆರವುಗೊಳಿಸಲು ಸೂಚನೆ
• ಪಾದಚಾರಿ ಮಾರ್ಗದಲ್ಲಿ ಅಳವಡಿಸಿರುವ ಗ್ರಿಲ್ ಅನ್ನು ಸರಿಪಡಿಸಲು ಸೂಚನೆ
• ಮೀಡಿಯನ್ ನಲ್ಲಿ ಹೊಸದಾಗಿ ವಿದ್ಯುತ್ ದೀಪಗಳನ್ನು ಅಳವಡಿಸಿ
• ರಸ್ತೆ ಬದಿ ಮಳೆ ನೀರು ಹೋಗಲು ಇರುವ ಶೋಲ್ಡರ್ ಡ್ರೈನ್ ಗಳ ಬಳಿ ತುಂಬಿರುವ ತ್ಯಾಜ್ಯವನ್ನು ತೆರವುಗೊಳಿಸಿ ಮಳೆ ನೀರು ಸರಾಗವಾಗಿ ಹೋಗಲು ವ್ಯವಸ್ಥೆ ಮಾಡಿ
• ಕೆ.ಬಿ ಟೆಂಪಲ್ ಸ್ಟ್ರೀಟ್ ರಸ್ತೆಯ ಭಾಗದಲ್ಲಿ ಮ್ಯಾನ್ ಓಲ್ ರಸ್ತೆ ಮಟ್ಟಕ್ಕಿಂತ ಮೇಲ್ಬಾಗದಲ್ಲಿದ್ದು, ಅದನ್ನು ಸರಿಪಡಿಸಲು ಮನವಿ
• ಪಾದಚಾರಿ ಮಾರ್ಗಗಳ ಒತ್ತುವರಿಯನ್ನು ತೆರವುಗೊಳಿಸಿ
• ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ಮುಂಭಾಗದ ರಸ್ತೆಯಲ್ಲಿ ಬ್ಲಾಕ್ ಸ್ಪಾಟ್(ಕಸ ಸುರಿಯುವ ಸ್ಥಳ)ಅನ್ನು ತೆರವುಗೊಳಿಸಿ.
• ವಾರ್ಡ್ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳನ್ನು ತ್ವರಿತವಾಗಿ ಮುಚ್ಚಲು ಸೂಚನೆ
*ರಾಜಾಜಿನಗರ 6ನೇ ಬ್ಲಾಕ್ ವೃತ್ತ ಪರಿಶೀಲನೆ(ಶ್ರೀ ಎನ್.ವಿ.ಚನ್ನಕೃಷ್ಣಯ್ಯ ವೃತ್ತರಿಂದ ಮಾಗಡಿ ರಸ್ತೆ ಜಂಕ್ಷ ಕಡೆಗೆ):*
• ಪಾದಚಾರಿ ಮಾರ್ಗಗಳಲ್ಲಿ ಹಾಳಾಗಿರುವ ಕರ್ಬ್ ಸ್ಟೋನ್ ಗಳನ್ನು ಅಳವಡಿಸಿ
• ನೇತಾಡುವ ಹಾಗೂ ಮರಗಳಿಗೆ ಸುತ್ತಿರುವ ಒಎಫ್‌ಸಿ ಕೇಬಲ್ ಗಳನ್ನು ತೆರವುಗೊಳಿಸಿ
• ಮರದ ಕೊಂಬೆಗಳನ್ನು ಕಟಾವು ಮಾಡಿಲ್ಲವೆಂದರೆ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಜರುಗಿಸಲಾಗುವುದೆಂದು ಎಚ್ಚರಿಕೆ ನೀಡಿದರು
• ರಸ್ತೆ ಬದಿ ಬ್ಲಾಕ್ ಸ್ಪಾಟ್ ತೆರವುಗೊಳಿಸಿ
*ಮಾಗಡಿ ಜಂಕ್ಷನ್ ನಿಂದ ವೆಸ್ಟ್ ಆಫ್ ಕಾರ್ಡ್ ರಸ್ತೆ(ಟೋಲ್ ಗೇಡ್ ಕಡೆಗೆ):*
• ಮಾಗಡಿ ಜಂಕ್ಷನ್ ರಸ್ತೆ ಬದಿ ದೊಡ್ಡ ಕಸದ ರಾಶಿ ಬಿದ್ದಿದ್ದು, ಕೂಡಲೆ ತೆರವುಗೊಳಿಸಲು ಸೂಚನೆ
• ಮಾಗಡಿ ಜಂಕ್ಷನ್ ನಲ್ಲಿ ಅಳವಡಿಸಿದ್ದ ಫ್ಲೆಕ್ಸ್ ಗಳನ್ನು ಗ್ಯಾಂಗ್ ಮ್ಯಾನ್ ಗಳು ತೆರವುಗೊಳಿಸಿದರು
• ಸಂಚಾರಿ ಪೊಲೀಸ್ ಇಲಾಖೆಯಿಂದ ಅಳವಡಿಸಿರುವ ನಾಮಫಲಕವನ್ನು ಪಾದಚಾರಿ ಮಾರ್ಗದಲ್ಲಿ ಅಳವಡಿಸಿದ್ದು, ಅದನ್ನು ಪಾದಚಾರಿಗಳಿಗೆ ಸುಗಮವಾಗಿ ಓಡಾಡಲು ಅನುವಾಗುವಂತೆ ಅಳವಡಿಸಲು ಸೂಚನೆ
• ಜಿಟಿ ಮಾಲ್ ಬಳಿಯ ರಸ್ತೆಯ ಮೇಲ್ಮೈ ಹಾಳಾಗಿದ್ದು, ಅದನ್ನು ಕೂಡಲೆ ದುರಸ್ತಿಪಡಿಸಲು ಸೂಚನೆ
*ಟೋಲ್ ಗೇಟ್ ಜಂಕ್ಷನ್ ಪರಿಶೀಲನೆ:*
• ಮೆಟ್ರೋ ಫಿಲ್ಲರ್ ಬಳಿಯ ಪಾದಚಾರಿ ಮಾರ್ಗದ ಕರ್ಬ್ ಸ್ಟೋನ್ ಹಾಳಾಗಿದ್ದು, ಅದನ್ನು ಸರಿಪಡಿಸಲು ಸೂಚನೆ.
• ಪಾದಚಾರಿ ಮಾರ್ಗಗಳಲ್ಲಿ ತಾತ್ಕಾಲಿಕವಾಗಿ ಅಳವಡಿಸಿರುವ ಅಂಗಡಿಗಳನ್ನು ಕೂಡಲೆ ತೆರವುಗೊಳಿಸಲು ಸೂಚನೆ
• ಟೋಲ್ ಗೇಟ್ ಜಂಕ್ಷನ್ ನಲ್ಲಿರುವ ಪೆಟ್ರೋಲ್ ಬಂಕ್ ಬಳಿ ಮಳೆ ನೀರು ಹೋಗಲು ಅಳವಡಿಸಿರುವ ಗ್ರೇಟಿಂಗ್ ಮಣ್ಣಿನಿಂದ ಮುಚ್ಚಿದ್ದು, ಅದನ್ನು ಸರಿಪಡಿಸಲು ಸೂಚನೆ
*ಮಾಗಡಿ ರಸ್ತೆ ಮಾರ್ಗ ಪರಿಶೀಲನೆ(ಟೋಲ್ ಗೇಟ್ ನಂತರದ ರಸ್ತೆ/ವೀರೇಶ್ ಚಿತ್ರ ಮಂದಿರ):*
• ಮಾಗಡಿ ರಸ್ತೆ ಶೆಲ್ ಪೆಟ್ರೋಲ್ ಬಂಕ್ ಬಳಿ ರಸ್ತೆ ಬದಿಯ ಖಾಲಿ ಜಾಗದಲ್ಲಿ ಕಸ/ಕಟ್ಟಡ ಭಗ್ನಾವಶೇಷಗಳಿದ್ದು, ಸಂಬಂಧಪಟ್ಟ ಮಾಲೀಕರಿಗೆ ದಂಡ ವಿಧಿಸಿ ಕಸ ತೆರವುಗೊಳಿಸಲು ಸೂಚನೆ
• ವೀರೇಶ್ ಚಿತ್ರಮಂದಿರ ಜಂಕ್ಷನ್ ಬಳಿ ಪಾದಚಾರಿ ಒತ್ತುವರಿ ತೆರವು ಮಾಡಲು ಸೂಚನೆ
• ವೀರೇಶ್ ಚಿತ್ರಮಂದಿರ ಜಂಕ್ಷನ್ ಬಳಿ ರಸ್ತೆಯಲ್ಲಿ ಸೀವೇಜ್ ಲೈನ್ ಲೀಕೇಜ್ ಆಗುತ್ತಿದ್ದು, ಕೂಡಲೆ ಜಲಮಂಡಳಿ ವತಿಯಿಂದ ದುರಸ್ತಿ ಕಾರ್ಯ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ
• ರಸ್ತೆ ಬದಿ ಚರಂಡಿಯ ಸ್ಲ್ಯಾಬ್ ಹಾಳಾಗಿದ್ದು, ಅದನ್ನು ಕೂಡಲೆ ಅಳವಡಿಸಲು ಸೂಚನೆ
• ಪ್ಲಾಸ್ಟಿಕ್ ಬಳಕೆ ಮಾಡುತ್ತಿರುವ ಅಂಗಡಿಗಳಿಗೆ ದಂಡ ವಿಧಿಸಲು ಸೂಚನೆ
• ಪ್ರೇರಣಾ ಕಾರ್ಸ್ ವತಿಯಿಂದ ಪಾದಚಾರಿ ಮಾರ್ಗ ಒತ್ತುವರಿ ಮಾಡಿಕೊಂಡು ಕಾರ್ ಗಳನ್ನು ನಿಲ್ಲಿಸಿದ್ದು, ಟ್ರೇಟ್ ಲೈಸೆನ್ಸ್ ಇದೆಯೇ ಪರಿಶೀಲಸಿ ನೋಟೀಸ್ ನೀಡಿ ದಂಡ ವಿಧಿಸಲು ಸೂಚನೆ
• ಮಾಗಡಿ ಮುಖ್ಯ ರಸ್ತೆಯ ಕೆಲ ಭಾಗ ಡಾಂಬರೀಕರಣ ಮಾಡಬೇಕಿದ್ದು, ಮಳೆ ನಿಂತ ಕೂಡಲೆ ದುರಸ್ತಿಪಡಿಸಲು ಸೂಚನೆ
• ಸಿ.ವಿ ಗುರುಕುಲ ಕಾಲೇಜ್ ಮುಂಭಾಗ ಪಾದಚಾರಿ ಮಾರ್ಗದಲ್ಲಿ ವಾಹನಗಳ ನಿಲುಗಡೆ ಮಾಡುತ್ತಿದ್ದು, ಅದಕ್ಕೆ ಪರ್ಯಾಯ ವ್ಯವಸ್ಥೆ ಮಾಡಿಕೊಂಡು ಪಾದಚಾರಿ ಮಾರ್ಗದಲ್ಲಿ ವಾಹನಗಳನ್ನು ನಿಲುಗಡೆ ಮಾಡದಂತೆ ಕಾಲೇಜು ವ್ಯವಸ್ಥಾಪಕರಿಗೆ ಸೂಚನೆ ನೀಡಿದರು.
• ಮಧು ಆಸ್ಪತ್ರೆಯ ಮುಂಭಾಗ ನಿಲುಗಡೆ ಮಾಡಿರುವ ವಾಹನಗಳನ್ನು ತೆರವುಗೊಳಿಸಲು ಸೂಚನೆ
*ಜೈ ಮುನಿರಾವ್ ವೃತ್ತದಿಂದ ಹೌಸಿಂಗ್ ಬೋರ್ಡ್ ಜಂಕ್ಷನ್ ವರೆಗೆ:*
• ಕಟ್ಟಡ ನಿರ್ನಾಣದ ಸಾಮಗ್ರಿಗಳು ಪಾದಚಾರಿ ಮಾರ್ಗದಲ್ಲಿದ್ದು, ಅದನ್ನು ಕೂಡಲೆ ಶಿಲ್ಟ್ ಅಂಡ್ ಟ್ರ್ಯಾಕ್ಟರ್ ಗೆ ತುಂಬಿಸಲು ಸೂಚನೆ
• ಪಾದಚಾರಿ ಮಾರ್ಗಗಳಲ್ಲಿ ಅಳವಡಿಸಿರುವ ಫ್ಲೆಕ್ಸ್ ಗಳನ್ನು ತೆರವು
*ಇಲಾಖೆಗಳ ಜೊತೆ ಸಮನ್ವಯ ಮಾಡಿಕೊಂಡು ಸಮಸ್ಯೆಗಳನ್ನು ಬಗೆಹರಿಸಿ:*
ಆಯಾ ವಲಯ ವ್ಯಾಪ್ತಿಯಲ್ಲಿ ಬಿಬಿಎಂಪಿ ಅಧಿಕಾರಿಗಳು ಕಾಲ್ನಡಿಗೆಯ ಮೂಲಕ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಸ್ಥಳೀಯ ಸಮಸ್ಯೆಗಳನ್ನು ಪರಿಶೀಲನೆ ನಡೆಸುವ ವೇಳೆ ಜಲಮಂಡಳಿ ಹಾಗೂ ಬೆಸ್ಕಾಂ ಅಧಿಕಾರಿಗಳು ಕೂಡಾ ಹಾಜರಿರಬೇಕು. ಇದರಿಂದ ಸಮನ್ವಯ ಮಾಡಿಕೊಂಡು ಸ್ಥಳೀಯ ಸಮಸ್ಯೆಗಳನ್ನು ತ್ವರಿತವಾಗಿ ಬಗೆಹರಿಸಲು ಸಾಧ್ಯವಾಗುತ್ತದೆ. ಈ ಸಂಬಂಧ ಅಗತ್ಯ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
*ಪರಿಶೀಲನೆಯ ವೇಳೆ ಯಂತ್ರೋಪಕರಣಗಳ ಬಳಕೆ:*
ಪರಿಶೀಲನೆಯ ವೇಳೆ ಜೆಸಿಬಿ, ಶಿಲ್ಟ್ ಅಂಡ್ ಟ್ರ್ಯಾಕ್ಟರ್ ಗಳು ಹಾಗೂ ಗ್ಯಾಂಗ್ ಮ್ಯಾನ್, ಆಟೋ ಟಿಪ್ಪರ್ ಗಳು, ಮರದ ಕೊಂಬೆ ಕಟಾವು ಮಾಡುವ ಯಂತ್ರ, ಪೌರಕಾರ್ಮಿಕರ ತಂಡವು ಸ್ವಚ್ಛತಾ ಕಾರ್ಯದಲ್ಲಿ ನಿರತವಾಗಿದ್ದವು.
*ಈ ವೇಳೆ ಸ್ಥಳೀಯ ಶಾಸಕರಾದ ಶ್ರೀ ಸುರೇಶ್ ಕುಮಾರ್, ವಲಯ ಆಯುಕ್ತರಾದ ಡಾ. ಆರ್.ಎಲ್.ದೀಪಕ್, ವಲಯ ಜಂಟಿ ಆಯುಕ್ತರಾದ ಯೋಗೇಶ್, ಪ್ರಧಾನ ಅಭಿಯಂತರರಾದ ಪ್ರಹ್ಲಾದ್, ವಲಯ ಮುಖ್ಯ ಅಭಿಯಂತರರಾದ ದೊಡ್ಡಯ್ಯ, ವಿದ್ಯುತ್, ಅರಣ್ಯ, ಘನತ್ಯಾಜ್ಯ ಹಾಗೂ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.*











0 Comments