****************************
"ವಸುಧಾತುಲವಿಖ್ಯಾತಂ ವೈರಾಗ್ಯದಿಗುಣಾರ್ಣವಂ/
ವೇದವೇದಾಂಗಚತುರಂ ವಸುಧೇಂದ್ರಗುರುಂಭಜೇ//
ಶ್ರೀವಸುಧೇಂದ್ರತೀರ್ಥಗುರುಗಳುಶ್ರೀರಾಘವೇಂದ್ರ
ಸ್ವಾಮಿಗಳವರ ಮಠದ ಪರಂಪರೆಯಲ್ಲಿ ಪೀಠವನ್ನಲಂಕರಿಸಿದ್ದ ಯತಿವರೇಣ್ಯರು.
ಇವರ ಆಶ್ರಮ ಗುರುಗಳುಶ್ರೀವಾದೀಂದ್ರತೀರ್ಥರು.
ಇವರ ಆಶ್ರಮ ಶಿಷ್ಯರು ಶ್ರೀವರದೇಂದ್ರತೀರ್ಥರು.
ಶ್ರೀಮಧ್ವಾಚಾರ್ಯರ ಪರಂಪರೆಯ 22 ನೇ ಯತಿಗಳಾಗಿದ್ದು ಶ್ರೀರಾಘವೇಂದ್ರಗುರುಸಾರ್ವ
ಭೌಮರ ನಂತರದ ಆರನೆಯ ಪೀಠಾಧಿಪತಿಗಳಾಗಿ ವೇದಾಂತಸಾಮ್ರಾಜ್ಯವನ್ನಾಳಿದ ಯತಿಗಳು.ಇವರು ಶ್ರೀರಾಘವೇಂದ್ರತೀರ್ಥರ ಪೂರ್ವಾಶ್ರಮದ ಮರಿಮೊಮ್ಮಕ್ಕಳೂ ಆಗಿದ್ದಾರೆ.
ಇವರು ನಾಲ್ಕು ವೇದಗಳಲ್ಲಿ ಹಾಗೂ ತರ್ಕ ಶಾಸ್ತ್ರದಲ್ಲಿಪರಿಣತರಾಗಿದ್ದುಅನೇಕದಾಸವರೇಣ್ಯರನ್ನು ಶಿಷ್ಯರನ್ನಾಗಿ ಹೊಂದಿದ್ದರು.ಇವರ ಕಾಲದಲ್ಲಿ ದಾಸಸಾಹಿತ್ಯದ ಕೃಷಿ ಹೆಚ್ಚಿನದಾಗಿತ್ತು.ಇವರು ಅನೇಕ ಗ್ರಂಥಗಳನ್ನು ರಚಿಸಿದ್ದು ಅವುಗಳಲ್ಲಿ ಶ್ರೀಆನಂದತೀರ್ಥ ವಿರಚಿತ ತಂತ್ರಸಾರ,ಸಂಗ್ರಹ ಟಿಪ್ಪಣಿ,ಶ್ರೀವಾದೀಂದ್ರತೀರ್ಥ ವಿರಚಿತ ಗುರುಗಣ ಸ್ತವನವ್ಯಾಖ್ಯಾನ,ಗುರುಸ್ತೋತ್ರದಂಡಕಪ್ರಮುಖ
ವಾಗಿವೆ.ಇವರ ಅವಧಿಯಲ್ಲಿಆದವಾನಿಯ ನವಾಬ ಸಬ್ಜಲ್ ಜಂಗ್ ಬಹದ್ದೂರ ಶ್ರೀಮಠದ ದಾಖಲೆಗಳನ್ನು ವಶಪಡಿಸಿಕೊಂಡಾಗ ಶ್ರೀಗಳು ನವಾಬರೊಂದಿಗೆ ಚರ್ಚಿಸಿ ಪುನಃ ದಾಖಲೆಗಳು ಶ್ರೀಮಠಕ್ಕೆಮರಳುವಂತೆಮಾಡಿದಮಹಾನು
ಭಾವರು.
ಶ್ರೀಗಳು ತಪಸ್ಸಿಗೆ ಇನ್ನೊಂದು ಹೆಸರೆನ್ನುವಂತೆ
ಮಹಾ ತಪೋನಿಧಿಗಳಾಗಿದ್ದಾರೆ. ಮಹಾ ಜ್ಞಾನಿಗಳಾದ ಶ್ರೀವಸುಧೇಂದ್ರತೀರ್ಥರು ಲೌಕಿಕ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿಯನ್ನು ತೋರಿಸಿದೆ ತಮ್ಮ ಪಾಠ,ಪ್ರವಚನ,ಜಪತಪಗಳಲ್ಲಿ,ಹೆಚ್ಚಿನ ಸಮಯ ತೊಡಗಿಸಿಕೊಂಡಿರುತ್ತಿದ್ದರು.ಅವರ ಜಪತಪ ವ್ರತಗಳ ಅನುಷ್ಠಾನದಿಂದಾಗಿ ಶ್ರೀಗಳು ಹೋದಲ್ಲೆಲ್ಲಾ ಜ್ಞಾನ ಪ್ರಭೆಯ ಸೂರ್ಯನಂತೆ ಭಕ್ತಜನರಿಗೆ ಕಾಣಿಸುತ್ತಿದ್ದರೆಂತ ತಿಳಿದು ಬರುತ್ತದೆ.ಜ್ಞಾನ ವೈರಾಗ್ಯ ಸಂಪನ್ನರಾದ ಶ್ರೀವಸುಧೇಂದ್ರತೀರ್ಥರು ಬಹಳಷ್ಟು ದಿನಗಳಕಾಲ ತಮ್ಮ ಶಿಷ್ಯರಿಗೆ ಪಾಠ ಪ್ರವಚನ ಮಾಡುವ ಕಾರ್ಯದಲ್ಲಿ ನಿರತರಾಗಿ ಮಂತ್ರಾಲಯವನ್ನು ಕಾರ್ಯಕ್ಷೇತ್ರವನ್ನು ಮಾಡಿಕೊಂಡಿದ್ದರು.ಮತ್ತು ಹೆಚ್ಚಿನ ಕಾಲ ಮಂತ್ರಾಲಯ ಕ್ಷೇತ್ರದಲ್ಲಿ ಇದ್ದು ಪರಮಗುರುಗಳಾದ ಶ್ರೀರಾಯರಸೇವಾದಿಗಳನ್ನು ಮಾಡಿವಿಶೇಷಅನುಗ್ರಹಕ್ಕೆಪಾತ್ರರಾಗಿದ್ದರು.ಇವರಆರಾಧನೆಯು ಆಶ್ವಯುಜಮಾಸದ ಕೃಷ್ಣ ಪಕ್ಷದ ಸಪ್ತಮಿಯಂದು ನೆರವೇರುವುದು.
ಇವರ ಮೂಲ ಬೃಂದಾವನವಿರುವುದು ಸಿರಗುಪ್ಪ
ತಾಲ್ಲೂಕುಕಾಂಚನಘಡದಲ್ಲಿ.ಈಕಾಂಚನಘಡ
ವನ್ನೇ ಕೆಂಚನಗುಡ್ಡ ಎಂದು ಕರೆಯುತ್ತಾರೆ.ತಾಯಿ ತುಂಗಭದ್ರೆಹರಿದುಹೋಗಿದ್ದಾಳೆಶ್ರೀವಸುಧೇಂದ್ರ
ತೀರ್ಥರು ನೆಲೆಸಿರುವಕೆಂಚನಗುಡ್ಡ ಕ್ಷೇತ್ರದಲ್ಲಿ.
ಇನ್ನೊಂದುವಿಶೇಷವೆಂದರೆಶ್ರೀವಸುಧೇಂದ್ರ
ತೀರ್ಥರುಬೃಂದಾವನದಲ್ಲಿಜಾಗೃತರಾಗಿದ್ದುಭಕ್ತರು
ನಿಯಮ,ನಿಷ್ಠೆಗಳನ್ನು ಆಚರಿಸದೇ ಇದ್ದ ಪಕ್ಷದಲ್ಲಿ ಸರ್ಪರೂಪದಲ್ಲಿಕಂಡು ಜಾಗೃತಿ ನೀಡಿದ್ದು,ಅನೇಕ ಭಕ್ತರಅನುಭವಕ್ಕೆಬಂದಿರುವದಾಗಿತಿಳಿದವರು
ಹೇಳುತ್ತಾರೆ.ಇಂದಿಗೂ ಬೃಂದಾವನದಲ್ಲಿ ಸನ್ನದ್ಧರಾಗಿದ್ದುಕೊಂಡೇಭಕ್ತರಕೋರಿಕೆಯನ್ನು
ಮನ್ನಿಸಿಭಕ್ತರನ್ನುಕಾಮಧೇನುವಿನಂತೆ ಅನುಗ್ರಹಿಸುತ್ತಿರುವ ಮಹಾ ಮಹಿಮರು ಶ್ರೀವಸುಧೇಂದ್ರತೀರ್ಥರು.
ಶ್ರೀಗುರುಗಳ ಆರಾಧನಾ ಪರ್ವದಿನವಾದ ಆಶ್ವಯುಜ ಬಹುಳ ಸಪ್ತಮಿಯ ದಿನದಂದು
ಭಕ್ತಿಯಿಂದಸ್ಮರಣೆಮಾಡಿ,ನಮಸ್ಕಾರಗಳನ್ನು
ಅರ್ಪಿಸಿ ,ಅವರ ಅನುಗ್ರಹಕ್ಕೆ ಪಾತ್ರರಾಗೋಣ.
-ಲೇಖಕರು : ಜಯಸಿಂಹ ಜೋಯಿಸ್, ಶಿವಮೊಗ್ಗ

0 Comments