ತ್ಯಾಗರಾಜನಗರದ ಶ್ರೀ ಸಾಯಿ ದೇವಸ್ಥಾನದ ರಸ್ತೆಯಲ್ಲಿರುವ ಶ್ರೀ ಸಾಯಿ ಆಧ್ಯಾತ್ಮಿಕ ಕೇಂದ್ರದಲ್ಲಿ ಶಿರಡಿ ಸಾಯಿಬಾಬಾರವರ 104ನೇ ಮಹಾಸಮಾಧಿ ಮಹೋತ್ಸವದ ಪ್ರಯುಕ್ತ ಅಕ್ಟೋಬರ್ 7, ಶುಕ್ರವಾರ ಸಂಜೆ ಏರ್ಪಡಿಸಿದ್ದ ಗಾಯನ ಕಾರ್ಯಕ್ರಮದಲ್ಲಿ ಕು|| ಭೂಮಿಕಾ ಎಲ್. ಮಧುಸೂದನ್ ಅವರು, ಹಿಂದಿ ಭಜನ್, ಭಕ್ತಿಗೀತೆ ಮತ್ತು ಹರಿದಾಸರ ಪದಗಳನ್ನು ಪ್ರಸ್ತುತ ಪಡಿಸಿದರು.
ವಾದ್ಯ ಸಹಕಾರದಲ್ಲಿ, ಶ್ರೀ ದುಶ್ಯಂತ್ ಕೀ-ಬೋರ್ಡ್ ನಲ್ಲಿ ಶ್ರೀ ಕಾರ್ತಿಕ್ ಭಟ್ ತಬಲಾದಲ್ಲಿ ಸಾಥ್ ನೀಡಿದರು. ನಂತರ ಪ್ರಸಾದ ವಿತರಿಸಲಾಯಿತು.

0 Comments