Ticker

6/recent/ticker-posts

Ad Code

Responsive Advertisement

*ಸ್ವಚ್ಛತೆಯ ಪಾಠ : ಮಾಡಿ ತೋರಿಸಿದ ಮಧುಗಿರಿಯ ಉಪ ವಿಭಾಗಾಧಿಕಾರಿಗಳು*

ವಾರ್ತಾ ಜಾಲ ಸುದ್ದಿ ಮಧುಗಿರಿ: ಪಟ್ಟಣದ ಉಪ ವಿಭಾಗಾಧಿಕಾರಿಗಳ ಕಟ್ಟಡದ ಪಕ್ಕದಲ್ಲಿರುವ ಇಂದಿರಾ ಕ್ಯಾಂಟೀನ್ ಆವರಣದಿಂದ-ಡೂಮ್ ಲೈಟ್ ಸರ್ಕಲ್ ಮುಖೇನ ಸರ್ಕಾರಿ  ಪ್ರೌಢಶಾಲೆ ಮತ್ತು ಕಾಲೇಜು ಆವರಣದಲ್ಲಿರುವ ರಾಜೀವ್ ಗಾಂಧಿ ಕ್ರೀಡಾಂಗಣದವರೆಗೆ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಂಡಿದ್ದು ಕಾರ್ಯಕ್ರಮದಲ್ಲಿ ಮುಖ್ಯವಾಗಿ ಉಪವಿಭಾಗಾಧಿಕಾರಿ ಸೋಮಪ್ಪ ಕಡಕೋಳರವರು ಪಾಲ್ಗೊಂಡರು.

ಗಾಂಧಿ ಜಯಂತಿಯ ಅಂಗವಾಗಿ ಸಾರ್ವಜನಿಕರಲ್ಲಿ ಶುಚಿತ್ವದ ಅರಿವು ಮೂಡಿಸಲು ಖುದ್ದಾಗಿ ಎ.ಸಿ ಸೋಮಪ್ಪ ಕಡಕೋಳರವರು ದಾರಿಯುದ್ದಕ್ಕೂ ಸಿಕ್ಕಿದ ಕಸ ಕಡ್ಡಿ ಗಿಡಗಂಟೆಗಳನ್ನು ಶೇಖರಿಸುತ್ತಾ ಜನರಲ್ಲಿ  ಸ್ವಚ್ಛತೆಯ ಅರಿವು ಮೂಡಿಸುವುದರೊಂದಿಗೆ, 

ತಾವೇ ಖುದ್ದಾಗಿ ಟ್ರ್ಯಾಕ್ಟರ್ ಅನ್ನು ಚಲಾಯಿಸಿಕೊಂಡು ಬಂದರು.ಅಲ್ಲದೆ ಉಪವಿಭಾಗಾಧಿಕಾರಿಯಾಗಳು ತಮ್ಮ ಸೇವೆ ಎಂದೆಂದಿಗೂ ಸಾರ್ವಜನಿಕರಿಗೆ ಮುಡಿಪು ಎಂದೇಳುತ್ತಾ, ಸಾಮಾನ್ಯರಲ್ಲಿ ಸಾಮಾನ್ಯರಾಗಿ ಸಾರ್ವಜನಿಕರೊಂದಿಗೆ ಬೆರೆತರು. 

ರಾಜೀವ್ ಗಾಂಧಿ ಕ್ರೀಡಾಂಗಣಕ್ಕೆ ಆಗಮಿಸಿ ಸುತ್ತಮುತ್ತಲೂ ಬೆಳೆದು ನಿಂತಿದ್ದ ಗಿಡ ಗಂಟಿಗಳನ್ನು , ಕಡಿದು ಕ್ರೀಡಾಂಗಣದಲ್ಲಿ ಬಿದ್ದಿದ್ದ ತಂಬಾಕಿನ ಪೌಚುಗಳನ್ನು ,  ಬಿದ್ದಿದ್ದ ಗಾಜಿನ ಚೂರುಗಳನ್ನು , ಹಳೆಯ ಬಟ್ಟೆ ಹಾಗೂ ಮತ್ತಿತರೆ  ತ್ಯಾಜ್ಯಗಳನ್ನು ತಾವೇ ಖುದ್ದಾಗಿ ಶೇಖರಿಸಿ ಚೀಲಗಳಿಗೆ ತುಂಬಿದರು. ಜೊತೆಗೆ ಎಲ್ಲಾ ನೌಕರರು ಮತ್ತು ಸಿಬ್ಬಂದಿ ವರ್ಗದವರು  ಕ್ರೀಡಾಂಗಣವನ್ನು ಸ್ವಚ್ಚಗೊಳಿಸಿದರು. ಕ್ರೀಡಾಂಗಣದಲ್ಲಿ ಬೆಳೆದಿರುವ ಪಾರ್ಥೆನಿಯಂ ಗಿಡಗಳು ಮತ್ತು ಇನ್ನಿತರೆ ಗಿಡಗಂಟಿಗಳನ್ನು ಬುಡ ಸಹಿತ ಕಿತ್ತು ಟ್ರ್ಯಾಕ್ಟರ್ ಗೆ ತುಂಬುದರ ಮೂಲಕ

ಸ್ವಚ್ಚತೆಯ ಮಹತ್ವವನ್ನು ತಿಳಿಸಿದರು. ಇತ್ತೀಚಿಗೆ ಸುರಿದ ಅತಿಯಾದ  ಮಳೆಯಿಂದಾಗಿ ಕ್ರೀಡಾಂಗಣದಲ್ಲಿ ಕೆಸರು ಮತ್ತು ನೀರು ಹರಿಯುತ್ತಿರುವುದನ್ನು ಗಮನಿಸಿದ್ದ ಸೋಮಪ್ಪ ರವರು ಜೆಸಿಬಿಯ ಮುಖೇನ ನೀರನ್ನು ಹೊರ ಹೋಗಲು ಮಾರ್ಗೋಪಾಯವನ್ನು ತೋರಿಸಿದರು. ಇದರೊಂದಿಗೆ ಕ್ರೀಡಾಂಗಣದ ಕೊಠಡಿಗಳನ್ನು, ಜಿಮ್ ಕೊಠಡಿಯನ್ನು ಪರಿಶೀಲಿಸಿ  ಸೂಚನೆಗಳನ್ನು ನೀಡಿದರು. ಹಾಗೂ ಕ್ರೀಡಾಂಗಣದ ಆವರಣದಲ್ಲಿರುವ ಶೌಚಾಲಯವನ್ನು ಶುಚಿಯಾಗಿ ಇಟ್ಟುಕೊಳ್ಳಬೇಕೆಂದು ಮತ್ತು ನಿರ್ವಹಣೆಗಾಗಿ ನೀರಿನ ಕೊಳವೆಗಳನ್ನು ಸರಿಪಡಿಸಲು ಸೂಚಿಸಿದರು. ಈ ಸಂದರ್ಭದಲ್ಲಿ ಉಪ ವಿಭಾಗಾಧಿಕಾರಿಗಳಾದ ಸೋಮಪ್ಪ ಕಡಕೋಳರವರು ಮತ್ತು ಕಚೇರಿಯ ಎಲ್ಲಾ ನೌಕರರು ಹಾಗೂ ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಪುರಸಭೆಯ ನೌಕರರು ಸಂಬಂಧಪಟ್ಟಂತಹ ಇತರೆ ಅಧಿಕಾರಿಗಳು. ಹಾಗೂ ಸಾರ್ವಜನಿಕರು ಈ ಸ್ವಚ್ಚತಾ  ಕಾರ್ಯದಲ್ಲಿ ಉಪಸ್ಥಿತರಿದ್ದರು.

ವರದಿ:ನಾಗೇಶ್ ಜೀವಾ ಮಧುಗಿರಿ.

Post a Comment

0 Comments

Ad Code

Responsive Advertisement