Ticker

6/recent/ticker-posts

Ad Code

Responsive Advertisement

:ಹೊಟೇಲ್ ಬಿಲ್ ಪ್ರಕರಣ: ಪ್ರಿನ್ಸಿಪಾಲ್ ರಾಮಕೃಷ್ಣಯ್ಯ ಎಸಿಬಿ ಬಲೆಗೆ

 ವಾರ್ತಾ ಜಾಲ ಸುದ್ದಿ ಮಧುಗಿರಿ:ಹೊಟೇಲ್ ನ ಬಿಲ್ ಮಾಡಿಕೊಡುವ ವಿಚಾರದಲ್ಲಿ ಲಂಚ ಪಡೆಯುತಿದ್ದ ಪ್ರಿನ್ಸಿಪಾಲ್ ರಾಮಕೃಷ್ಣಯ್ಯ ರವರನ್ನು ಎಸಿಬಿ ಬಲೆಗೆ ಕೆಡವಿದ್ದಾರೆ. 

ಶೈಕ್ಷಣಿಕ ಜಿಲ್ಲೆ ಡಯಟ್ ನ ಪ್ರಿನ್ಸಿಪಾಲ್ ಆಗಿರುವ ರಾಮಕೃಷ್ಣಯ್ಯ ಇವರು ಹನುಮಂತರಾಜು ಎಂಬುವರ ಹೊಟೇಲ್ ಬಿಲ್ ಮಾಡಿಕೊಡುವ ವಿಚಾರದಲ್ಲಿ 17000 ರೂ ಹಣ ವನ್ನು ಲಂಚವಾಗಿ ಬೇಡಿಕೆ ಇಟ್ಟು ಇಂದು ಲಂಚದ ಹಣವನ್ನು ಸ್ವೀಕರಿಸುವಾಗ ಸಿಕ್ಕಿ ಬಿದ್ದಿದ್ದಾರೆ.

ಈ ಬಗ್ಗೆ ಎಸಿಬಿ ಅಧಿಕಾರಿಗಳು ತನಿಖೆ ಮಾಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಎಸ್ಪಿ ವಾಲೀಭಾಷ ಅವರ ಮಾರ್ಗದರ್ಶನದಲ್ಲಿ ತುಮಕೂರು ಡಿವೈಎಸ್ಪಿ ರವೀಶ್ ಸಿ ಆರ್, ಪಿಐ ರಾಮರೆಡ್ಡಿ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

ವರದಿ:ನಾಗೇಶ್ ಜೀವಾ ಮಧುಗಿರಿ.

Post a Comment

0 Comments

Ad Code

Responsive Advertisement