ವಾರ್ತಾ ಜಾಲ ಸುದ್ದಿ ಮಧುಗಿರಿ : ವ್ಯವಹಾರಿಕ ಸ್ಥಳಗಳಲ್ಲಿ ಪರಭಾಷೆಯನ್ನು ಬಳಕೆ ಮಾಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕರುನಾಡ ವಿಜಯ ಸೇನೆ ತಾಲ್ಲೂಕು ಘಟಕದ ವತಿಯಿಂದ ಉಪವಿಭಾಗಾಧಿಕಾರಿಗಳಿಗೆ ಶುಕ್ರವಾರ ಮನವಿ ಪತ್ರ ನೀಡಲಾಯಿತು.
ತಾಲ್ಲೂಕು ಅಧ್ಯಕ್ಷ ತಿಮ್ಮರಾಜು ಮಾತನಾಡಿ ಪಟ್ಟಣದಲ್ಲಿ ಹಲವಾರು ಅಂಗಡಿ ಮುಂಗ್ಗಟ್ಟುಗಳ ನಾಮಫಲಕಗಳು ಆಂಗ್ಲ ಭಾಷೆಯಲ್ಲಿದ್ದು, ಕನ್ನಡ ಭಾಷೆಗೆ ಆಧ್ಯತೆ ನೀಡಬೇಕು, ಬ್ಯಾಂಕ್‍ಗಳಲ್ಲಿ ಅನೇಕ ಸಿಬ್ಬಂದಿ ಪರಭಾಷೆಯನ್ನು ಬಳಸುತ್ತಿದ್ದು, ಇದರಿಂದ ಗ್ರಾಮೀಣ ಭಾಗದ ನಾಗರೀಕರಿಗೆ ತೊಂದರೆಯಾಗುತ್ತಿದೆ. ಆದುದರಿಂದ ಕನ್ನಡ ಭಾಷೆಯಲ್ಲಿಯೇ ವ್ಯವಹರಿಸಬೇಕು ಜೊತೆಯಲ್ಲಿ ಕನ್ನಡ ಭಾಷೆಯಲ್ಲಿಯೇ ಸ್ಪಂದಿಸಬೇಕು ಎಂದು ಒತ್ತಾಯಿಸಿದರು.
ಮನವಿ ಪತ್ರ ಸ್ವೀಕರಿಸಿದ ಉಪವಿಭಾಗಾಧಿಕಾರಿ ಸೋಮಪ್ಪಕಡಕೋಳ ರವರು ಮಾತನಾಡುತ್ತಾ, ಕರ್ನಾಟಕದಲ್ಲಿ ಕನ್ನಡ ಭಾಷೆಯನ್ನು ಬಳಸಬೇಕು ಹಾಗೆ ಮಧುಗಿರಿ ಪಟ್ಟಣದಲ್ಲಿ ಬ್ಯಾಂಕುಗಳಲ್ಲಿ ಅನ್ಯ ಭಾಷೆಯನ್ನು ಬಳಸುತ್ತಿರುವುದನ್ನು ಕರುನಾಡ ವಿಜಯ ಸೇನೆ ಘಟಕದ ಪದಾಧಿಕಾರಿಗಳು ಗಮನಕ್ಕೆ ತಂದಿದ್ದು ಕೂಡಲೇ ಲೀಡ್ ಬ್ಯಾಂಕ್ ಮ್ಯಾನೇಜರ್ ಅವರಿಗೆ ಪತ್ರದ ಮೂಲಕ ತಿಳಿಸಲಾಗುವುದು ಎಂದು ಭರವಸೆ ನೀಡಿದರು.
ಪದಾಧಿಕಾರಿಗಳಾದ ರಾಜು, ಶರೀಫ್, ದಾದಾಪೀರ್, ರಘು, ಅಶೋಕ್, ಲತಾ ಗೋವಿಂದರಾಜು, ಲತಾ ನಾರಾಯಣ್, ಶೈಲಜಾ, ಶ್ರೀನಾಥ್, ಬಾಬು ನವೀನ್, ವೆಂಕಟೇಶ್, ರಮೇಶ,ಜಲಾಲ್ ಪಾಷಾ ಹಾಗೂ ಮುಂತಾದವರು ಇದ್ದರು.
ವರದಿ:ನಾಗೇಶ್ ಜೀವಾ ಮಧುಗಿರಿ.

0 Comments