Ticker

6/recent/ticker-posts

Ad Code

Responsive Advertisement

ನಾಡಪ್ರಭು ಕೆಂಪೇಗೌಡರ 108 ಪ್ರತಿಮೆ ಅನಾವರಣ ವೆಂಕಟಗಿರಿಕೋಟೆಗೆ ಆಗಮಿಸಿದ ಮೃತ್ತಿಕೆ ಸಂಗ್ರಹ ರಥ

ವರದಿ ಮಧು ದೇವನಹಳ್ಳಿ : ತಾಲೂಕಿನ ವೆಂಕಟಗಿರಿಕೋಟೆ ಗ್ರಾಮಕ್ಕೆ ಆಗಮಿಸಿದ ಪವಿತ್ರ ಮಣ್ಣು ಸಂಗ್ರಹ ರಥ, ರಥಕ್ಕೆ ಪೂಜೆ ಸಲ್ಲಿಸಿದ ಗ್ರಾಮಸ್ಥರು, ಮಹಿಳೆಯರು ಕಳಸ ಹೊತ್ತು ಮೆರವಣಿಗೆ ಮಾಡಿ ರಥಕ್ಕೆ  ಸ್ವಾಗತ ನೀಡಿದರು. 

   ನ.11ಕ್ಕೆ ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರತಿಮೆ  ಉದ್ಘಾಟನೆಗೊಳ್ಳಲಿದ್ದು ರಾಜ್ಯದ ವಿವಿಧ ಗ್ರಾಮಗಳಿಂದ ಪವಿತ್ರ ಮಣ್ಣು  ಸಂಗ್ರಹ ಮಾಡುತ್ತಿದ್ದು, ದೇವನಹಳ್ಳಿ ತಾಲೂಕಿನ ವೆಂಕಟಗಿರಿಕೋಟೆ ಗ್ರಾಮದಲ್ಲಿ ಸಂಗ್ರಹ ಮಾಡಿದ್ದ ಮೃತ್ತಕೆಯನ್ನು ಆಗಮಿಸಿದ್ದ ರಥಕ್ಕೆ ನೀಡಲಾಯಿತು.


 ಈ ಸಮಯದಲ್ಲಿ ವೆಂಕಟಗಿರಿಕೋಟೆ ಗ್ರಾ.ಪಂ. ಅಧ್ಯಕ್ಷ ಆರ್.ಅಮರನಾಥ್ ಮಾತನಾಡಿ  ಪ್ರಗತಿಯ ಪ್ರತಿಮೆ ಉದ್ಘಾಟನೆ ಪ್ರಯುಕ್ತ ನಮ್ಮ ಗ್ರಾಮಕ್ಕೆ ಮಣ್ಣು ಸಂಗ್ರಹ ರಥ ಆಗಮಿಸಿ, ಪವಿತ್ರ ಮಣ್ಣನ್ನು ಸಂಗ್ರಹಿಸಿ  ಪೂಜೆ ಸಲ್ಲಿಸಿ ರಥಕ್ಕೆ ನೀಡಲಾಗಿದ್ದು ಕೆಂಪೇಗೌಡರ ಪ್ರತಿಮೆಯಿಂದಾಗಿ ಇಡೀ ವಿಶ್ವವೇ ಭಾರತದತ್ತ ನೋಡುವಂತೆ ಆಗಿದೆ ಎಂದರು.

  ಇದೇ ಸಮಯದಲ್ಲಿ  ಪಂಚಾಯ್ತಿ ಅಭಿವೃದ್ದಿ ಅಧಿಕಾರಿ  ಮಾತನಾಡಿ  ರಾಜ್ಯ ಸರ್ಕಾರದ ಆದೇಶದ ಮೇರೆಗೆ ರಾಜ್ಯಾಧ್ಯಂತ ಪವಿತ್ರ ಮಣ್ಣನ್ನು ಸಂಗ್ರಹ ಮಾಡುತ್ತಿದ್ದು ಏರ್‌ಪೋರ್ಟ್ನಲ್ಲಿ ಮಾನ್ಯ ಪ್ರಧಾನಿ ನರೇಂದ್ರ ಮೋದಿ ಅನಾವರಣ ಮಾಡಲಿದ್ದರೆ, ಅದಕ್ಕಾಗಿ ರಾಜ್ಯ ಸರ್ಕಾರ ವಿಶೇಷವಾಗಿ  ಮಣ್ಣನ್ನು ಸಂಗ್ರಹ ಮಾಡುತ್ತಿದ್ದು ಈ ಮಣ್ಣನ್ನು ಪ್ರತಿಮೆಯ  ಬಳಿ ಥೀಮ್ ಪಾರ್ಕ್ ಗೆ ಅಳವಡಿಸುವ ಯೋಜನೆ ಹಾಕಿದೆ ಅದಕ್ಕಾಗಿ ಮಣ್ಣನ್ನು ಕಳುಹಿಸುತ್ತಿದ್ದೇವೆ ಎಂದರು.

 ಇದೇ ಸಮಯದಲ್ಲಿ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಹುರುಳುಗುರ್ಕಿ ಶ್ರೀನಿವಾಸ್,  ಉಪಾಧ್ಯಕ್ಷೆ  ಸದಸ್ಯರಾದ ಮಾರಪ್ಪ, ಆಶಾಮಂಜುನಾಥ್, ಸುನಂದ ಮುನಿರಾಜು, ಅನಸೂಯ, ನಾಗರಾಜು, ಸರೋಜಮ್ಮ ಶ್ರೀರಾಮ್, ವಿಶ್ವನಾಥಾಚಾರ್, ಜೋಸೆಪ್, ಪದ್ಮಾವತಿ ಪ್ರಕಾಶ್, ರೇಖಾ ನಾರಾಯಣಸ್ವಾಮಿ,  ಸಿಬ್ಬಂದಿ ಸೇರಿದಂತೆ ಗ್ರಾಮದ ಸಾರ್ವಜನಿಕರು ಭಾಗವಹಿಸಿದ್ದರು,  ಭಾಗವಹಿಸಿದ್ದರು.

Post a Comment

0 Comments

Ad Code

Responsive Advertisement