Ticker

6/recent/ticker-posts

Ad Code

Responsive Advertisement

*ಸಿದ್ದಾರ್ಥ ನಗರದ ಅಭಿಮಾನಿಗಳಿಂದ ತೆಲುಗು ನಟ ಪವನ್ ಕಲ್ಯಾಣ್ ಹುಟ್ಟು ಹಬ್ಬ ಆಚರಣೆ*

ವರದಿ: ಚಿಕ್ಕತೇಕಹಳ್ಳಿ ಡಿ ಶಿವಕುಮಾರ್

*ವಾರ್ತಾಜಾಲ,ಶಿಡ್ಲಘಟ್ಟ: ತೆಲುಗು ನಟ ಹಾಗೂ ಜನ ಸೇನಾ ಪಾರ್ಟಿ ಅಧ್ಯಕ್ಷ ಪವನ್ ಕಲ್ಯಾಣ್ ಕಡಿಮೆ ಅವಧಿಯಲ್ಲಿ ಹೆಚ್ಚು ಜನಪ್ರಿಯಗೊಂಡು ಸ್ವಂತ ಪಕ್ಷ ಕಟ್ಟಿದ್ದಾರೆ.

ಆಂಧ್ರದಲ್ಲಿ ಅವರು ಮುಂದಿನ ಮುಖ್ಯಮಂತ್ರಿ ಯಾಗಿ ನೋಡುವುದೇ ನಮ್ಮ ಅಭಿಮಾನಿಗಳ ಕನಸು ಎಂದು ಅಖಿಲ ಕರ್ನಾಟಕ ಚಿರಂಜೀವಿ ಯುವತ, ಶಿಡ್ಲಘಟ್ಟ ಅಧ್ಯಕ್ಷರಾದ ಕೆ, ನಾರಾಯಣಸ್ವಾಮಿ ಅವರು ಅಭಿಪ್ರಾಯಪಟ್ಟರು.

ನಗರದ ಸಿದ್ದಾರ್ಥ ನಗರದ ಅಭಿಮಾನಿಗಳಿಂದ ತಮ್ಮ ಅಭಿಮಾನ ನಟ ಹಾಗೂ ಜನಸೇನಾ ಪಕ್ಷದ ಅಧ್ಯಕ್ಷರಾದ ಪವನ್ ಕಲ್ಯಾಣ್ ರವರ 51ನೇ ಹುಟ್ಟು ಹಬ್ಬವನ್ನು ಅಂದ ಮಕ್ಕಳ ಆಶಾಕಿರಣ ವಸತಿ ಶಾಲೆಯಲ್ಲಿ ಮಕ್ಕಳಿಗೆ ನೋಟ್ ಬುಕ್, ಪೆನ್ನುಗಳನ್ನು ಹಾಗೂ  ಕೇಕ್ ಕಟ್ ಮಾಡುವುದರ ಮೂಲಕ ಪವನ್ ಕಲ್ಯಾಣ್ ಹುಟ್ಟುಹಬ್ಬವನ್ನು ಸರಳವಾಗಿ ಆಚರಣೆ ಮಾಡಿದರು,

ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ರಾಮದಾಸು ಎನ್, ತಿರುಮಲಪ್ಪ, ವೆಂಕಟರಮಣಪ್ಪ, ರಾಧಾಕೃಷ್ಣ, ಪವನ್ ಕಲ್ಯಾಣ್ ವೀರಾಭಿಮಾನಿಗಳಾದ ವೆಂಕಿ (ಡಾಲು) ರಾಮಚಂದ್ರ, ಸರ್ದಾರ್ ಲೋಕಿ, ಕಲ್ಯಾಣ್, ಸೂರಿ, ಧೀರಜ್, ರಮೇಶ್ ಮುಂತಾದ ಅಭಿಮಾನಿಗಳು ಉಪಸ್ಥಿತರಿದ್ದರು.

Post a Comment

0 Comments

Ad Code

Responsive Advertisement