Ticker

6/recent/ticker-posts

Ad Code

Responsive Advertisement

ಕ್ಯಾನ್ಸರ್‌ ವಿರುದ್ಧ ಹೋರಾಡಿ ಗೆದ್ದವರಿಗಾಗಿ ಲಿಟಲ್‌ ವಾರಿಯರ್ಸ್‌ ಸಪೋರ್ಟ್‌ ಗ್ರೂಪ್‌*

ಮಕ್ಕಳ ಕ್ಯಾನ್ಸರ್ ಪ್ರಕರಣಗಳ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ, ಅವರಲ್ಲಿ ಭರವಸೆ, ಧೈರ್ಯ ತುಂಬುವುದು ಬದುಕಿನ ಕುರಿತಾಗಿ ಪ್ರೇರೇಪಿಸುವ ಉದ್ದೇಶದಿಂದ ಮಾರತ್ತಹಳ್ಳಿಯ ರೈನ್‌ಬೋ ಮಕ್ಕಳ ಆಸ್ಪತ್ರೆಯಲ್ಲಿ  ಮುಖ್ಯ ಅತಿಥಿ ಹರಿಣಿಯವರು “ಹೋಪ್ - ದಿ ಲಿಟಲ್ ವಾರಿಯರ್ಸ್ ಸಪೋರ್ಟ್ ಗ್ರೂಪ್” ಎಂಬ ವಿಶಿಷ್ಟ ವೇದಿಕೆಯನ್ನು ಉದ್ಘಾಟಿಸಿದರು.   







ಮಾರತಳ್ಳಿ  ರೈನ್‌ ಬೋ ಮಕ್ಕಳ ಆಸ್ಪತ್ರೆಯ ಇಂಟೆನ್ಸಿವ್ ಕೇರ್ ಸೇವಾ ವಿಭಾಗದ ಪೀಡಿಯಾಟ್ರಿಕ್ ಮುಖ್ಯಸ್ಥರಾದ ಡಾ ರಕ್ಷಯ್ ಶೆಟ್ಟಿ ಮಾತನಾಡಿ, ಕ್ಯಾನ್ಸರ್ ವಿರುದ್ಧ ಹೋರಾಡಿ ಬದುಕುಳಿದವರು ಮತ್ತು ಅವರ ಕುಟುಂಬಗಳ ಸಂಘರ್ಷದ ಸ್ಫೂರ್ತಿ ಮತ್ತು ಭರವಸೆಯ ಕಥೆಗಳನ್ನು ಹಂಚಿಕೊಳ್ಳಲು ಈ ಸೆಮಿನಾರ್‌ ನಲ್ಲಿ ವೇದಿಕೆ ಒದಗಿಸಲಾಗುತ್ತಿದೆ ಎಂದರು. 

ಆಸ್ಪತ್ರೆಯ ಉಪಾಧ್ಯಕ್ಷರಾದ ಪಿ.ನಿತ್ಯಾನಂದ ಮಾತನಾಡಿ, , “ಕ್ಯಾನ್ಸರ್ ರೋಗಿಗಳೊಂದಿಗೆ ನಾವು ಬೆಂಬಲವಾಗಿ ಗಟ್ಟಿಯಾಗಿ ನಿಲ್ಲಲು ಈ ವಿಶಿಷ್ಟ ಕಾರ್ಯಯೋಜನೆ ರೂಪಿಸಿದ್ದೇವೆ. ಕ್ಯಾನ್ಸರ್ ವಿರುದ್ಧ ಹೋರಾಡುವಲ್ಲಿ ನಮ್ಮಿಂದಾಗುವ ಸಹಾಯ ಮತ್ತು ರೋಗಿಗಳಲ್ಲಿ ಜೀವನೋತ್ಸಾಹ ತುಂಬಿ ಪ್ರೇರೇಪಿಸುವ ಮೂಲಕ ಅವರ ಆರೈಕೆ ಮಾಡುವವರ ಜೊತೆ ನಾವು ದೃಢವಾಗಿ ನಿಲ್ಲಬೇಕಿದೆ ಎಂದರು.

Post a Comment

0 Comments

Ad Code

Responsive Advertisement