ಬೆಂಗಳೂರು : ಮಲ್ಲೇಶ್ವರಂ ವಿಧಾನ ಸಭಾ ಕ್ಷೇತ್ರದ ಮತ್ತೀಕೆರೆಯಲ್ಲಿ ಸ್ಥಳೀಯ ಶಾಸಕರು ಹಾಗೂ ಸಚಿವರು ಆದ ಡಾ. ಸಿ.ಎನ್. ಅಶ್ವಥನಾರಾಯಣರವರು ಕೈಗೊಂಡಿರುವ ವಿವಿಧ ಪ್ರದೇಶಾಭಿವೃದ್ಧಿಯ ಕಾಮಗಾರಿಗಳೊಂದಿಗೆ, ಇಡೀ ಮತ್ತೀಕೆರೆಯ ಪ್ರಮುಖ ರಸ್ತೆಗಳು ಹಾಗೂ ಅಡ್ಡ ರಸ್ತೆಗಳಿಗೆ ಡಾಂಬರೀಕರಣ ಕಾಮಗಾರಿಯು ನಡೆಯುತ್ತಿದ್ದು, ಈ ಸಂದರ್ಭದಲ್ಲಿ ಮಾಜಿ ಪಾಲಿಕೆ ಸದಸ್ಯರುಗಳಾದ ಮುನಿಸ್ವಾಮಿಗೌಡರು, ಎಂ.ಸಿ.ಜಯಪ್ರಕಾಶ್, ಬೆಂಗಳೂರು ಉತ್ತರ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಕೆ.ವಿಶ್ವನಾಥ, ವಾರ್ಡ್ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಕ್ರಿಸ್ತೋಫರ್ ಬಾಬು, ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಕೆ. ನವೀನ್ ಕುಮಾರ್ ಮುಂತಾದವರು ಕಾಮಗಾರಿಯ ಸ್ಥಳದಲ್ಲಿ ಉಪಸ್ಥಿತರಿದ್ದು, ಕಾಮಗಾರಿ ಪ್ರಗತಿಯ ಹಾಗೂ ಗುಣಮಟ್ಟದ ಬಗ್ಗೆ ನಿಗಾ ವಹಿಸಿದ್ದರು.

0 Comments