Ticker

6/recent/ticker-posts

Ad Code

Responsive Advertisement

*ವೈಯಾಲಿಕಾವಲ್ ಶ್ರೀ ಮುತ್ತು ಮಾರಿಯಮ್ಮ ದೇವಸ್ಥಾನದಲ್ಲಿ ನವರಾತ್ರಿ ಉತ್ಸವಕ್ಕೆ ಚಾಲನೆ*

ಬೆಂಗಳೂರು : ನಗರದ ಪ್ಯಾಲೇಸ್ ಗುಟ್ಟಹಳ್ಳಿಯ ಮುನೇಶ್ವರ ಬ್ಲಾಕ್ ನಲ್ಲಿರುವ ಸುಮಾರು ಒಂದು ನೂರು ವರ್ಷಕ್ಕೂ ಹಳೆಯದಾದದ್ದೆಂದು ಸ್ಥಳೀಯರಿಂದ ಹೇಳಲ್ಪಡುವ ಓಂ ಶ್ರೀ ಮುತ್ತು ಮಾರಿಯಮ್ಮ ದೇವಸ್ಥಾನದಲ್ಲಿ ದಸರಾ ನವರಾತ್ರಿ  ಮಹೋತ್ಸವವನ್ನು ಹಮ್ಮಿಕೊಳ್ಳಲಾಗಿದ್ದು, ನವರಾತ್ರಿಯ ಒಂಬತ್ತೂ ದಿನಗಳೂ ಅಮ್ಮನವರಿಗೆ ವಿಶೇಷ ಅಲಂಕಾರಗಳನ್ನು ಮಾಡಿ ನವರಾತ್ರಿಯ ಕೊನೆಯ ದಿನದಂದು ಮುತ್ತಿನ ಪಲ್ಲಕ್ಕಿಯ ಮೆರವಣಿಗೆ ಏರ್ಪಡಿಸಲಾಗಿತ್ತು.

, ವೈಯಾಲಿಕಾವಲ್, ಗುಟ್ಟಹಳ್ಳಿ, ಮಲ್ಲೇಶ್ವರಂ  ಸುತ್ತುಮುತ್ತಲಿನ ಪ್ರದೇಶಗಳಲ್ಲಿ ಶ್ರೀ ಅಮ್ಮನವರ ಮುತ್ತಿನ ಪಲ್ಲಕ್ಕಿ  ಸಂಚರಿಸಲಿದ್ದು, ನಗರದ ಸುತ್ತುಮುತ್ತಲಿನಿಂದಷ್ಟೇ ಅಲ್ಲದೇ ನೆರೆಯ ತಮಿಳುನಾಡು ಭಾಗಗಳಿಂದಲೂ ಭಕ್ತಾದಿಗಳು  9 ದಿನಗಳ ಕಾಲ ನಡೆಯಲಿರುವ  ಈ ನವರಾತ್ರಿ  ಮಹೋತ್ಸವದಲ್ಲಿ ಪಾಲ್ಗೊಳ್ಳಲಿರುವರು ಎಂದು ದೇವಸ್ಥಾನದ ಆಡಳಿತ ಮಂಡಳಿಯವರು ತಿಳಿಸಿದ್ದಾರೆ.








ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಅಮ್ಮನವರ ಕೃಪೆಗೆ ಪಾತ್ರರಾಗಬೇಕೆಂದು ದೇವಸ್ಥಾನದ ಟ್ರಸ್ಟ್ ನ ಅಧ್ಯಕ್ಷ ಡಿ.ಗೋವಿಂದ, ನವರಾತ್ರಿ ಉತ್ಸವದ ನಿರ್ವಾಹಕ ಸಂಪಂಗಿ, ಆಲಯದ ಪೂಜಾರಿ ಕುರುಬರಹಳ್ಳಿ ರಾಜು ಹಾಗೂ ಟ್ರಸ್ಟ್‌ ನ ಸದಸ್ಯರು ಸಾರ್ವಜನಿಕವಾಗಿ ಈ ಮೂಲಕವೂ ಆಸ್ತಿಕ ಭಕ್ತಾದಿಗಳನ್ನು ದೇವಸ್ಥಾನ ವತಿಯಿಂದ  ಸ್ವಾಗತಿಸುತ್ತಿದ್ದಾರೆ.

Post a Comment

0 Comments

Ad Code

Responsive Advertisement