Ticker

6/recent/ticker-posts

Ad Code

Responsive Advertisement

ನಾರಾಯಣಸ್ವಾಮಿ ಗಾರ್ಡನ್ ನಿವಾಸಿಗಳಿಗೆ ಕೆ.ಜಿ.ಎಫ್. ಬಾಬುರವರಿಂದ ಆರ್ಥಿಕ ನೆರವು

ಬೆಂಗಳೂರು : ನಗರದ ಚಿಕ್ಕಪೇಟೆ ವಿಧಾನ ಸಭಾ ಕ್ಷೇತ್ರದ ಜೆ.ಸಿ.ರಸ್ತೆಯಲ್ಲಿರುವ ಸುಮಾರು 300 ಕ್ಕೂ ಹೆಚ್ಚು  ಮನೆಗಳಿರುವ ನಾರಾಯಣಸ್ವಾಮಿ ಗಾರ್ಡನ್ ಸ್ಲಮ್ ನ ನಿವಾಸಿಗಳಿಗೆ ಇಂದು ಮಂಗಳವಾರದಂದು ಕಾಂಗ್ರೆಸ್ ಮುಖಂಡರು, ಖ್ಯಾತ ಉದ್ಯಮಿಗಳು  ಹಾಗೂ ಸಮಾಜ ಸೇವಕರಾಗಿರುವ ಕೆಜಿಎಫ್ ಬಾಬು (ಯೂಸುಫ್ ಷರೀಫ್) ರವರು ಪ್ರತಿ ಕುಟುಂಬಕ್ಕೂ 5 ಸಾವಿರ ರೂಪಾಯಿಗಳ ಆರ್ಥಿಕ ನೆರವಿನ ಚೆಕ್ ಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ  ಅವರ ಪುತ್ರ ಅಫ್ ಶರೀಫ್, ಸ್ಥಳೀಯ ಕಾಂಗ್ರೆಸ್ ಮುಖಂಡರು ಹಾಗೂ ಸಮಾಜ ಸೇವಕರುಗಳಾದ ಇಮ್ತೀಯಾಜ್ ಪಾಷ, ಕೋದಂಡ, ಗಂಗಾಧರ್, ಇಮ್ರಾನ್ ಶೇರು, ಅಂಬತ್ತು, ಇಮ್ರಾನ್ ರವರ ಆತ್ಮೀಯರಾದ ಕೋಲಾರ ಊರುಬಾಗಿಲು   ಶ್ರೀನಿವಾಸ, ಚಾಂದ್ ಪಾಶ, ಅಲ್ತಾಫ್, ಎಂ.ಶರೀಫ್, ಪ್ರಶಾಂತ್ ಕೆ., ಉಸ್ಮಾನ್, ಅಜೀಜ್, ನಸ್ರು, ಸೈಯದ್ ಶೇಖ್' ಮಾಧ್ಯಮ ಸಲಹೆಗಾರರಾದ ಆರಾಧ್ಯ ಮುಂತಾದವರು ಉಪಸ್ಥಿತರಿದ್ದರು.  











ಕೆಜಿಎಫ್ ಬಾಬುರವರಿಂದ ಯಾವುದೇ ತಾರತಮ್ಯವಿಲ್ಲದ, ಜಾತಿ ಮತ ಭೇದವನ್ನು ನೋಡದೆ ತಮ್ಮ ಕುಟುಂಬಗಳಿಗೆ ಆರ್ಥಿಕ ನೆರವನ್ನು ನೀಡುತ್ತಿರುವುದನ್ನು ಮುಕ್ತ ಕಂಠದಿಂದ ಪ್ರಶಂಸಿಸಿ ಸಮಾಜಕ್ಕೆ ಅದರಲ್ಲೂ ಅತಿ ಬಡ ಜನರೇ ವಾಸಿಸುವ ಈ ಪ್ರದೇಶಕ್ಕೆ ಬಂದು, ಖುದ್ದಾಗಿ   ಉಪಸ್ಥಿತರಿದ್ದು ಜನರ ಕಷ್ಟ ಸುಖಗಳ ಬಗ್ಗೆ ವಿಚಾರಿಸಿ ತಾವು ತಮ್ಮ ಕುಟುಂಬದ ಒಬ್ಬ ಸದಸ್ಯನಂತೆ ಎಲ್ಲರಲ್ಲೊಡಗೂಡಿ, ಸಿರಿವಂತರೆಂಬ ಹಮ್ಮುಬಿಮ್ಮು ತೋರದೆ, ದರ್ಪದುಮ್ಮಾನವಿಲ್ಲದ ಅವರ ಸರಳ ಗುಣ ಸ್ಥಳೀಕರೆಲ್ಲರ ಪ್ರಶಂಸೆಗೆ ಪಾತ್ರವಾಯಿತು. ಜನ ಇಂತಹ ನಾಯಕರು ತಮ್ಮ ಮನೆ ಬಾಗಿಲಿಗೇ ಬಂದು, ತಾಸುಗಳ ಗಟ್ಟಲೆ ತಮ್ಮೆಲ್ಲರೊಂದಿಗೆ ಒಡನಾಡಿ, ಸ್ಥಳೀಯರಿಗೆ ಅನುಕೂಲಕರವಾಗುವ ರೀತಿಯ ಯೋಜನೆಯ ಮೂಲಕವೂ ಮುಂದೆ ಇನ್ನೂ ಹೆಚ್ಚಿನ ರೀತಿಯಲ್ಲಿ ನೆರವಾಗಲು ಗಮನ ಹರಿಸಿರುವ ಇವರಿಗೆ ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಜನಪ್ರತಿನಿಧಿಯಾಗುವ ಅವಕಾಶ ಕೆಜಿಎಫ್ ಬಾಬು ರವರಿಗೆ ಸಿಕ್ಕರೆ, ತಮ್ಮ ಪ್ರದೇಶ ಮಾತ್ರವಲ್ಲದೇ, ಇಡೀ ಕ್ಷೇತ್ರದ ಒಳಿತಿಗಾಗಿ ನಿಸ್ವಾರ್ಥತೆಯಿಂದ,  ಶ್ರಮಿಸಿ ಸೇವೆ ಮಾಡುವ ಭರವಸೆಯನ್ನು ಮೂಡಿಸಿದ ಜನ  ನಾಯಕರೆನಿಸಿಕೊಳ್ಳುತ್ತಿದ್ದಾರೆಂಬ ಅಭಿಪ್ರಾಯವನ್ನು ಜನರಲ್ಲಿ ಮೂಡಿಸುವುದರೊಂದಿಗೆ, ಜನರಲ್ಲಿ ಹೊಸ ಆಶಯವನ್ನು ಮೂಡಿಸುವಲ್ಲಿ ಬಾಬು ರವರ ಪ್ರಯತ್ನಗಳು ಯಶಸ್ವಿಯಾಗುವ ಲಕ್ಷಣ ಕಂಡುಬರುತ್ತಿದೆ.

-ವರದಿ ಕೆ.ಎಸ್.ಆರ್.

Post a Comment

0 Comments

Ad Code

Responsive Advertisement