Ticker

6/recent/ticker-posts

Ad Code

Responsive Advertisement

ಕನ್ನಡ ಕಲಿಕಾ ಶಿಬಿರ ಸಮಾರೋಪ ಹಾಗೂ ಪ್ರಮಾಣ ಪತ್ರ ವಿತರಣೆ

 ಸರ್ವಜ್ಞನಗರ ವಿಧಾನಸಭಾ ಕ್ಷೇತ್ರ, ಎಚ್ ಬಿ ಆರ್ ಲೇಔಟ್ ನಲ್ಲಿ, ಕನ್ನಡ ಕಲಿಕಾ ಶಿಬಿರ ಸಮಾರೋಪ ಹಾಗೂ ಪ್ರಮಾಣ ಪತ್ರ ವಿತರಣಾ ಸಮಾರಂಭ. 

ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮತ್ತು ಅಖಿಲ ಕರ್ನಾಟಕ ಮಹಾಮಧೀಯರ ಕನ್ನಡ ವೇದಿಕೆ ಸಹಭಾಗಿತ್ವದಲ್ಲಿ ಕನ್ನಡ ಕಲಿಕಾ ಶಿವರ ಸಮಾರೋಪ ಹಾಗೂ ಪ್ರಮಾಣ ಪತ್ರ ವಿತರಣಾ ಸಮಾರಂಭ ಇತ್ತೀಚೆಗೆ ಹೆಚ್ ಬಿ ಆರ್ ಲೇಔಟನ, ಫಲಾಹಾಧರೇನ್ ಮದರಸ, ಇಲ್ಲಿ ನೆರವೇರಿತು. 

ಪ್ರಮಾಣ ಪತ್ರ ವಿತರಣೆ ಮಾಡಲು ಮುಖ್ಯ ಅತಿಥಿಗಳಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ,ಶ್ರೀ ಟಿ. ಎಸ್. ನಾಗಭರಣ ಆಗಮಿಸಿದ್ದರು. ಮಾಜಿ ಸಚಿವರು ಮತ್ತು ವಿಧಾನಪರಿಷತ್ ಸದಸ್ಯರು , ನಜೀರ್ ಅಹ್ಮದ್, ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಯೋಗಶ್ರೀ ವರ್ಧಮಾನ ಕಳಸೂರ, ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು ಸರ್ವಜ್ಞ ನಗರ ವಿಧಾನ ಸಭಾಕ್ಷೇತ್ರ, ಉಪಸ್ಥಿತರಿದ್ದರು. 

ಸಲಾಹುದ್ದೀನ್ ಖಾನ್, ಅಧ್ಯಕ್ಷರು, ಆಲ್ ಪೈಸ್  ಟ್ರಸ್ಟ್, ಮುಬಾರಕ್ ಪಾಶ, ಏ .ಜೆ. ಖಾನ್ ಸಂಚಾಲಕರು, ಮುಸ್ಲಿಂ ಸಂಘಟನೆಗಳ ಒಕ್ಕೂಟ, ಪರಮೇಶ್, ಕ.ರ.ವೇ( ಪ್ರ)   ಮುರುಳಿಧರ ಕನ್ನಡ ಪರ ಹೋರಾಟಗಾರ, ಶ್ರೀ ರಹಮಾನ್, ಸಾಮಾಜಿಕ ಕಾರ್ಯಕರ್ತರು, ಶ್ರೀ ಬೈಲಾಲ್ ಕ ರ ವೇ(ನಾ ) ವಿಶೇಷ ಆಹ್ವಾನಿತಾರಾಗಿ ಆಗಮಿಸಿದ್ದರು. ಜಾನಪದ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಹಿದಾಯತ್ ಅಹ್ಮದ್, ಸಭೆಯಲ್ಲಿ ಉಪಸ್ಥಿತರಿದ್ದರು.

ಫ್ರೀಡಂ ಶಾಲೆಯ ಮಕ್ಕಳ ನಾಡಗೀತೆ ಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. .ಹಾಜಿರ ಖಾನಂ, ಶಹಜಹಾನ್ ಸರ್ವರನ್ನು ಸ್ವಾಗತಿಸಿ ಕಾರ್ಯಕ್ರಮವನ್ನು ನಿರೂಪಿಸಿದರು.  ಸಮಿವುಲ್ಲಾಖಾನ್, ಅಧ್ಯಕ್ಷರು, ಅಖಿಲ ಕರ್ನಾಟಕ ಮಹಮದಿಯರ ವೇದಿಕೆ ಇವರು ಆಶಯ ಭಾಷಣ ಮಾಡಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಟಿಎಸ್ ನಾಗಾಭರಣ ಕಲಿಕಾ ಕೇಂದ್ರದ ಕಾರ್ಯವೈಖರಿಯನ್ನು ಮೆಚ್ಚಿಕೊಂಡಾಡಿದರು ಇಂತಹ ಶ್ರೇಷ್ಠ ಕಾರ್ಯಗಳು ಎಲ್ಲಾ ಕ್ಷೇತ್ರಗಳಲ್ಲಿ ನಡೆಯಬೇಕೆಂದು ಮತ್ತು ಈ ಕಲಿಕಾ ಕೇಂದ್ರಕ್ಕೆ ಸಂಪೂರ್ಣ ಸಹಕಾರ ಸಹಾಯವನ್ನು ನೀಡುತ್ತೇವೆಂದು ತಿಳಿಸಿದರು. ಸರ್ವಜ್ಞ ನಗರ ಕಸಪ ಅಧ್ಯಕ್ಷರಾದ ಯೋಗಶ್ರೀ ವರ್ಧಮಾನ ಕಳಸೂರು ಮಾತನಾಡಿ ಮಕ್ಕಳ ಸ್ಪಷ್ಟವಾದ ಉಚ್ಚಾರಣೆ ಹಾಗೂ ಕಲಿಕಾ ಸಾಮರ್ಥ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ತಾವು ಕೂಡ ಕಲಿ ನಲಿ ಮಾದರಿಯಲ್ಲಿ ಕೆಲವು ತರಗತಿಗಳನ್ನು ತೆಗೆದುಕೊಳ್ಳುತ್ತೇನೆ ಎಂದು ತಿಳಿಸಿದರು.

  ಪಾ.ಮುರಳಿದರ ಮಾತನಾಡಿ ಸಮಿವುಲ್ಲಾ ಖಾನ್ ಅವರ ಸಹೋದರ ರ ಕನ್ನಡಪರ ಸೇವೆಯನ್ನು ಸ್ಮರಿಸಿ ಸಭೆಗೆ ತಿಳಿಸಿದರು. ಕಲಿಕಾ ಕೇಂದ್ರದ ವಿದ್ಯಾರ್ಥಿನಿಯರು ತಮ್ಮ ಕಲಿಕಾ ಸಾಮರ್ಥ್ಯವನ್ನು ಕನ್ನಡದಲ್ಲಿ ವ್ಯಕ್ತಪಡಿಸಿದರು.


ಮುಖ್ಯ ಅತಿಥಿಗಳು ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರವನ್ನು ವಿತರಿಸಿದರು. ಉಪಾಧ್ಯಕ್ಷರಾದ ಶಹಜಾನ್ ಅವರಿಂದ ಕನ್ನಡ ಕಲಿಕ ಕೇಂದ್ರದ ಶಿಕ್ಷಕಿಗೆ ವೇದಿಕೆಯ ವತಿಯಿಂದ ಸಂಭಾವನೆಯನ್ನು ನೀಡಿದರು. ಮುಖ್ಯ ಅತಿಥಿಗಳಿಗೆ ವೇದಿಕೆ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಸರ್ವಜ್ಞ ನಗರ ವಿಧಾನಸಭಾ ಕ್ಷೇತ್ರದ ಕಸಾಪ ವತಿಯಿಂದ ಸಮಿವುಲ್ಲ ಖಾನ್ ರವರನ್ನು ಸನ್ಮಾನಿಸಿ ಗೌರವಿಸಲಾಯಿತು. ವಾಯ್ಸ್ ಆಫ್ ದಂಡು ಎಕ್ಸ್ಪ್ರೆಸ್ ಪತ್ರಿಕೆಯನ್ನು ಮುಖ್ಯ ಅತಿಥಿಗಳಿಗೆ ನೀಡಲಾಯಿತು.  ಕೊನೆಯಲ್ಲಿ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.

Post a Comment

0 Comments

Ad Code

Responsive Advertisement