ಪ್ರಧಾನಿ ಮೋದಿ ಜನ್ಮದಿನದ ಅಂಗವಾಗಿ ಸುರೇಶಗೌಡರವರಿಂದ ರಕ್ತದಾನ ಶಿಬಿರದ ಉದ್ಘಾಟನೆ
ಬೆಂಗಳೂರು : ತೇರಾಪಂಥ್ ಯುವಕ ಪರಿಷತ್ ಯಶವಂತಪುರ, ಲಯನ್ಸ್ ಕ್ಲಬ್ ಆಫ್ ಬೆಂಗಳೂರು ವಿಲ್ಸನ್ ಗಾರ್ಡನ್ ಹಾಗೂ ಕೆಂಪೇಗೌಡ ಮೆಡಿಕಲ್ ಸರ್ವೀಸ್ ಟ್ರಸ್ಟ್ ಮಿಲೇನಿಯಮ್ ಬ್ಲಡ್ ಬ್ಯಾಂಕ್ ಸಹಯೋಗದೊಂದಿಗೆ ಪೂಜ್ಯ ಆಚಾರ್ಯ ಶ್ರೀ ಮಹಾಶ್ರಮನಜೀ ರವರ ಆಶೀರ್ವಾದದೊಂದಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿರವರ ಜನ್ಮದಿನದ ಅಂಗವಾಗಿ ರಾಜರಾಜೇಶ್ವರಿ ನಗರ ವಿಧಾನ ಸಭಾ ಕ್ಷೇತ್ರದ ಯಶವಂತಪುರ ಎಲ್.ಎನ್.ಕಾಲೋನಿಯ ಗೋಕುಲ 1 ನೇ ಹಂತದಲ್ಲಿರುವ ಶ್ರೀ ಜೈನ್ ಶ್ವೇತಾಂಬರ ತೇರಾಪಂತ್ ಸಭಾ ಭವನದಲ್ಲಿ ಆಯೋಜಿಸಲಾಗಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಖ್ಯಾತ ಸಮಾಜ ಸೇವಕರು ಹಾಗೂ ಚಲನಚಿತ್ರ ನಿರ್ಮಾಕರಾಗಿರುವ ಸುರೇಶ್ ಗೌಡರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ತೇರಾಪಂಥ್ ಮಂಡಳಿಯ ಅಧ್ಯಕ್ಷ ಹಾಗೂ ಬಿಜೆಪಿ ಮಲ್ಲೇಶ್ವರಂ ವಿಧಾನ ಸಭಾ ಕ್ಷೇತ್ರದ ಮಂಡಲ ಉಪಾಧ್ಯಕ್ಷ ಗೌತಮಚಂದ್ ಮುತ್ತಾ, ಬಿಜೆಪಿ ಬೆಂಗಳೂರು ಉತ್ತರ ಕಾರ್ಯಕಾರಿಣಿ ಸದಸ್ಯ ಡಾ.ಜಿ.ಎಸ್.ಚೌಧರಿ, ಮಂಡಳಿಯ ಸದಸ್ಯರುಗಳಾದ ಮಹಾವೀರ ಓಸ್ವಾಲ್, ಕಮಲೇಶ ಡಕ್, ರೋಹಿತ್ ಓಸ್ವಾಲ್, ವಿನೋದ್ ಜೈನ್, ಗೌತಮ್ ಕಬಿಯಾ, ಕಿಷನ್ ಮುಂತಾದವರು ಶಿಬಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.




0 Comments