Ticker

6/recent/ticker-posts

Ad Code

Responsive Advertisement

ಬಿ.ಜೆ.ಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವಿರುದ್ದ ಬೃಹತ್ ಪ್ರತಿಭಟನೆ

ಮಾಜಿ ಮುಖ್ಯಮಂತ್ರಿಗಳು,ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯರವರ ಬಗ್ಗೆ ಬಿ.ಜೆ.ಪಿ.ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ.ಕೀಳುಮಟ್ಟದ ಪದಪ್ರಯೋಗ ಹೇಳಿಕೆ ಖಂಡಿಸಿ ಫ್ರೀಡಂ ಪಾರ್ಕ್ ನಲ್ಲಿ  ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಮತ್ತು ಸಿದ್ದರಾಮಯ್ಯ ಅಭಿಮಾನಿಗಳ ಬಳಗದ ವತಿಯಿಂದ ಬೃಹತ್ ಪ್ರತಿಭಟನೆ ಆಯೋಜಿಸಿದ್ದರು.


ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ರಾಜ್ಯಾಧ್ಯಕ್ಷರಾದ ಅಧ್ಯಕ್ಷರಾದ ರಾಮಚಂದ್ರಪ್ಪರವರು ,ಹಿಂದುವಳಿ ವರ್ಗದ ಮುಖಂಡರಾದ  ರಾಮಕೃಷ್ಣಪ್ಪ,ಶಾಂತಪ್ಪ, ಪ್ರಭಾವತಿ  ಕಾರ್ಯಕರ್ತರುಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ರಾಜ್ಯಾಧ್ಯಕ್ಷರಾದ ರಾಮಚಂದ್ರಪ್ಪರವರು ಮಾತನಾಡಿ ಬಡವರ ಬಂಧು,ಅನ್ನಭಾಗ್ಯದ ರೂವಾರಿ ಮತ್ತು ಸರ್ವರಿಗೂ ಸಮಪಾಲು,ಸರ್ವರಿಗೂ ಸಮಬಾಳು ಮತ್ತು ಜಾತ್ಯತೀತ ಸಿದ್ದಾಂತದ ನಾಯಕ ಸಿದ್ದರಾಮಯ್ಯರವರು ಕಳೆದ 40ವರ್ಷಗಳ ರಾಜಕೀಯ ಜೀವನದಲ್ಲಿ ಕಪ್ಪುಚುಕ್ಕೆ ಇಲ್ಲದಂತೆ ಸಾಗಿ ಬಂದಿದ್ದಾರೆ.

ಮುಖ್ಯಮಂತ್ರಿಯಾಗಿ ಆಡಳಿತ ಅವಧಿಯಲ್ಲಿ ಜನತೆಗೆ ನೀಡಿದ 165ಭರವಸೆಗಳನ್ನು ಈಡೇರಿಸಿದ ಮುಖ್ಯಮಂತ್ರಿಗಳು ಎಂದರೆ ಅದು ಸಿದ್ದರಾಮಯ್ಯರವರು ಇದು ದೇಶದಲ್ಲಿ ದಾಖಲೆಯಾಗಿದೆ.

ದಾವಣಗೆರೆಯಲ್ಲಿ ಸಿದ್ದರಾಮಯ್ಯರವರ ಹುಟ್ಟುಹಬ್ಬಕ್ಕೆ ಲಕ್ಷಾಂತರ ಜನ ಅಭಿಮಾನಿಗಳು,ಸ್ನೇಹಿತರು ಸೇರಿದ್ದಾರೆ ಇದನ್ನ ಸಹಿಸದ ಸಿ.ಟಿ.ರವಿರವರು ಹೇಗಾದರು ಸರಿ ಸುಳ್ಳು ಹೇಳಿ ಅಪ್ರಚಾರ ಮಾಡಬೇಕು ಎಂದು ಸಿದ್ದರಾಮಯ್ಯರವರ ವಿರುದ್ದ ಕೀಳು ಮಟ್ಟದ ಪದ ಪ್ರಯೋಗ ಮಾಡಿದ್ದಾರೆ.

ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿರವರು ಕೊಡಲೆ ಕ್ಷಮಾಪಣೆ ಕೋರುಬೇಕು ಇಲ್ಲದೇ ಹೋದರೆ ರಾಜ್ಯಾದ್ಯಂತ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದರು.

Post a Comment

0 Comments

Ad Code

Responsive Advertisement