Ticker

6/recent/ticker-posts

Ad Code

Responsive Advertisement

*ಉಚಿತ ಕಣ್ಣಿನ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಯಾ ಶಿಬಿರ*

*ಜನಸ್ಪಂದನಾ ಎಂದರೆ ಜನರ ನೋವು,ನಲಿವುಗಳಿಗೆ ಸ್ಪಂದಿಸುವ ಕೆಲಸವಾಗಬೇಕು-ರಾಜ್ಯಸಭಾ ಸದಸ್ಯರಾದ ಜಿ.ಸಿ.ಚಂದ್ರಶೇಖರ್*



ಮಹಾಲಕ್ಷ್ಮೀಲೇಔಟ್ ವಿಧಾನಸಭಾ ಕ್ಷೇತ್ರ:ಕಮಲನಗರದಲ್ಲಿ ಸಮಾಜ ಸೇವಕರಾದ ಶ್ರೀ ಮಹದೇವಪ್ಪರವರ 2ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಇಂದಿರಾ ಹೆಲ್ತ್ ಕೇರ್ ನಲ್ಲಿ ಶ್ರೀ ಮಹದೇವಪ್ಪ ಪ್ರತಿಷ್ಠಾನ ಮತ್ತು ಅಕ್ಷಯ ಟ್ರಸ್ಟ್ ,ವಿಜಯ ನೇತ್ರಾಲಯ ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆಯ ಸಹಯೋಗದಲ್ಲಿ ಉಚಿತ ಕಣ್ಣಿನ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಯಾ ಶಿಬಿರ ಉದ್ಘಾಟನೆಯನ್ನು ರಾಜ್ಯಸಭಾ ಸದಸ್ಯರಾದ *ಜಿ.ಸಿ.ಚಂದ್ರಶೇಖರ್ ರವರು, ಮಾಜಿ ಆಡಳಿತ ಪಕ್ಷದ ನಾಯಕರಾದ ಎಮ್.ಶಿವರಾಜುರವರು, ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ಶ್ರೀಮತಿ ಮಹದೇವಮ್ಮ, ನಿಕಟಪೂರ್ವ ಬಿ.ಬಿ.ಎಂ.ಪಿ.ಸದಸ್ಯರಾದ ಎಸ್.ಕೇಶವಮೂರ್ತಿರವರು* ದೀಪಾ ಬೆಳಗಿಸಿ ಉದ್ಘಾಟನೆ ಮಾಡಿದರು.

500ಜನರಿಗೆ ಕಣ್ಣಿನ ತಪಾಸಣೆ ಮತ್ತು ಶಸ್ತ್ರ ಚಿಕಿತ್ಯೆಗೆ ಪರೀಕ್ಷೆ ಮಾಡಲಾಯಿತು.

ಇದೇ ಸಂದರ್ಭದಲ್ಲಿ *ರಾಜ್ಯಸಭಾ ಸದಸ್ಯರಾದ ಜಿ.ಸಿ.ಚಂದ್ರಶೇಖರ್ ರವರು* ಮಾತನಾಡಿ ಕಾಂಗ್ರೆಸ್ ಪಕ್ಷ ಬಡವರ ಪರ ಇರುವ ಪಕ್ಷ.

ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡ ಇತಿಹಾಸವಿರುವ ಕಾಂಗ್ರೆಸ್ ಪಕ್ಷ .

ದೇಶದ ಅಭಿವೃದ್ದಿಗೆ ಪಂಚವಾರ್ಷಿಕ ಯೋಜನೆಗಳನ್ನು ಕೊಡುಗೆ ನೀಡಿ. ದೇಶ ಸಮ್ಮದ್ದಿ,ಸಂಪತ್ತು ಭರಿತವಾಗಲು ಕಾರಣವಾಗಿದೆ.

ಜನಸ್ಪಂದನಾ ಎಂದರೆ ಜನರ ಸಂಕಷ್ಟ,ನೋವು ನಲಿವುಗಳಿಗೆ ಸ್ಪಂದಿಸುವ ಕೆಲಸವಾಗಬೇಕು.

ಅದರೆ ಇಂದು ರಾಜ್ಯದ ಜನರು ಸಂಕಷ್ಟದಲ್ಲಿ ಇದ್ದಾರೆ ಇಂತಹ ಕಷ್ಟಕರ ಸಂದರ್ಭದಲ್ಲಿ  ಸಾಧನೆ ಏನು ಮಾಡದ ಬಿ.ಜೆ.ಪಿ.ಸರ್ಕಾರ ಜನಸ್ಪಂದನಾ ಕಾರ್ಯಕ್ರಮ ಮಾಡಿರುವುದು ನಗೆಪಾಟಿಲಿಗೆ ಗುರಿಯಾಗಿದೆ.

ಆಹಾರ ಪದಾರ್ಥಗಳ ಮೇಲೆ ಏರಿಕೆಯಿಂದ ಬಡವರ ಜೀವನ ಸಾಗಿಸುವುದು ಕಷ್ಟವಾಗಿದೆ, ಬಡವರ ಹೊಟ್ಟೆಯ ಮೇಲೆ ತೆರಿಗೆ ಎಂಬ ಬರೆ ಎಳೆದಿದೆ ಕೇಂದ್ರ ಸರ್ಕಾರ ಎಂದು ಹೇಳಿದರು.

ಮಾಜಿ ಆಡಳಿತ ಪಕ್ಷದ ನಾಯಕರಾದ ಎಮ್.ಶಿವರಾಜುರವರು ಮಾತನಾಡಿ ಮೇರುನಟ ಡಾ||ರಾಜ್ ಕುಮಾರ್ ರವರು, ಪದ್ಮಭೂಷಣ ಪುರಸ್ಕೃತ ಡಾ||ಎಂ.ಸಿ.ಮೋದಿರವರು ನೇತ್ರಾ ದಾನದ ಮಹತ್ವವನ್ನು ಸಾರಿದರು.

ಈ ನಿಟ್ಟಿನಲ್ಲಿ ಶ್ರೀ ಮಹದೇವಪ್ಪ ಪ್ರತಿಷ್ಠಾನ ಆರೋಗ್ಯ,ಶಿಕ್ಷಣ ಮತ್ತು ಪರಿಸರ ರಕ್ಷಣೆಗಾಗಿ ಶ್ರಮಿಸುತ್ತಿದೆ.

ಪ್ರತಿ ವರ್ಷ ಶಾಲಾ ಮಕ್ಕಳಿಗೆ ಉಚಿತ ನೋಟ್ ಬುಕ್ ಮತ್ತು ವಿದ್ಯಾರ್ಥಿ ವೇತನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ಹಾಗೂ ಟ್ಯಾಬ್ ಗಳನ್ನು  ನೀಡಲಾಗುತ್ತಿದೆ.

ಉಚಿತ ಆರೋಗ್ಯ ತಪಾಸಣೆ ಶಿಬಿರ ಮತ್ತು ಪ್ರತಿದಿನ ನಮ್ಮ ಇಂದಿರಾ ಕ್ಲಿನಿಕ್ ಇ.ಸಿ.ಜಿ.ಮತ್ತು ಸಕ್ಕರೆ ಖಾಯಿಲೆ, ಬಿ.ಪಿ.ಜನರಲ್ ಚಕ್ ಅಪ್ ತಜ್ಞ ವೈದ್ಯರುಗಳಿಂದ ಉಚಿತವಾಗಿ ತಪಾಸಣೆ ಮಾಡಲಾಗುತ್ತಿದೆ.

ಈಗಾಗಲೇ ಶ್ರೀ ಮಹದೇವಪ್ಪ ಪ್ರತಿಷ್ಠಾನ ವತಿಯಿಂದ 300ಕ್ಕೂ ಹೆಚ್ಚು ಜನರಿಗೆ ಕಣ್ಣಿನಪೂರೆ ಶಸ್ತ್ರ ಚಿಕಿತ್ಯೆ ಉಚಿತವಾಗಿ ಮಾಡಿಸಲಾಗಿದೆ ಹಾಗೂ ಕಣ್ಣಿನ ದೋಷ ಇರುವವರಿಗೆ ಉಚಿತವಾಗಿ ಕನ್ನಡಕ ವಿತರಿಸಲಾಗುತ್ತಿದೆ.

ಧ್ವನಿ ಇಲ್ಲದ,ನೊಂದವರ ಬಾಳಿಗೆ ಆಸರೆಯಾಗಬೇಕು ಎಂದು ಶ್ರೀ ಮಹದೇವಪ್ಪ ಪ್ರತಿಷ್ಠಾನ ಶ್ರಮಿಸುತ್ತಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ 50ಕ್ಕೂ ಹೆಚ್ಚು ಬೀದಿ ಬದಿಯ ವ್ಯಾಪಾರಿಗಳಿಗೆ ಬಿಸಿಲು,ಮಳೆಯಿಂದ ರಕ್ಷಣೆಗಾಗಿ ಬೃಹತ್ ಗಾತ್ರ ಛತ್ರಿಗಳನ್ನು ವಿತರಿಸಲಾಯಿತು.

Post a Comment

0 Comments

Ad Code

Responsive Advertisement